ಬ್ರಸೆಲ್ಸ್: ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ತಮ್ಮ ಯುರೋಪ್ ಪ್ರವಾಸದಲ್ಲಿ ಫಿನ್‍ಲ್ಯಾಂಡ್ ಪ್ರಧಾನಿ ಸನ್ನಾ ಮರಿನ್ ಅವರನ್ನು ಭೇಟಿ ಮಾಡಿದರು.
ಮೋದಿ ಅವರು ಟ್ವೀಟ್ ಮಾಡುವ ಮೂಲಕ ವಿಷಯವನ್ನು ತಿಳಿಸಿದ್ದು, ಸನ್ನಾ ಮರಿನ್ ಅವರನ್ನು ಭೇಟಿ ಮಾಡಿದ ಫೋಟೋ ಮತ್ತು ಔತಣಕ್ಕೆ ಕುಳಿತುಕೊಂಡಿದ್ದ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಈ ವೇಳೆ ಮೋದಿ ಅವರು ಫಿನ್‍ಲ್ಯಾಂಡ್ ಪ್ರಧಾನಿ ಜೊತೆ ದ್ವಿಪಕ್ಷೀಯ ಬಾಂಧವ್ಯವನ್ನು ಬಲಪಡಿಸುವ ಮಾರ್ಗಗಳ ಕುರಿತು ಚರ್ಚಿಸಿದ್ದಾರೆ. ಈ ಕುರಿತು ಮೋದಿ ಅವರು ಬರೆದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಪಿಎಸ್‍ಐ ಅಕ್ರಮದಲ್ಲಿ ಅಶ್ವತ್ಥ ನಾರಾಯಣ್ ಶಾಮೀಲು: ಸಿದ್ದು ಆರೋಪ
Today’s meeting with Finland @MarinSanna was very fruitful. There is immense potential in expanding the India-Finland digital partnership, trade partnership and investment linkages. We also discussed ways to deepen cultural ties between our nations. pic.twitter.com/INQIroAUQx
— Narendra Modi (@narendramodi) May 4, 2022
ಮೋದಿ ಅವರು ಟ್ವೀಟ್‍ನಲ್ಲಿ, ಇಂದು ಫಿನ್‍ಲ್ಯಾಂಡ್ ಪ್ರಧಾನಿ ಸನ್ನಾ ಮರಿನ್ ಅವರನ್ನು ಭೇಟಿ ಮಾಡಿದ್ದು ತುಂಬಾ ಅನುಕೂಲವಾಯಿತು. ಭಾರತ-ಫಿನ್‍ಲ್ಯಾಂಡ್ ಡಿಜಿಟಲ್ ಪಾಲುದಾರಿಕೆ, ವ್ಯಾಪಾರ ಪಾಲುದಾರಿಕೆ ಮತ್ತು ಹೂಡಿಕೆ ಸಂಬಂಧಗಳನ್ನು ವಿಸ್ತರಿಸು ಕುರಿತು ಮಾತುಕತೆ ಮಾಡಿದ್ದು, ಅದಕ್ಕೆ ಅಪಾರ ಸಾಮರ್ಥ್ಯವಿದೆ. ನಮ್ಮ ರಾಷ್ಟ್ರಗಳ ನಡುವಿನ ಸಾಂಸ್ಕೃತಿಕ ಸಂಬಂಧಗಳನ್ನು ಗಾಢವಾಗಿಸುವ ಮಾರ್ಗಗಳ ಬಗ್ಗೆಯೂ ನಾವು ಚರ್ಚಿಸಿದ್ದೇವೆ ಎಂದು ಬರೆದು ಫೋಟೋ ಶೇರ್ ಮಾಡಿಕೊಂಡಿದ್ದಾರೆ.
ಮೋದಿ ಅವರು ನಾರ್ವೆ, ಸ್ವೀಡನ್ ಮತ್ತು ಐಸ್‍ಲ್ಯಾಂಡ್‍ನ ತಮ್ಮ ಸಹವರ್ತಿಗಳೊಂದಿಗೆ ದ್ವಿಪಕ್ಷೀಯ ಸಭೆಗಳ ಸರಣಿಯನ್ನು ನಡೆಸಿದರು. ಇದನ್ನೂ ಓದಿ: ನಾನು ಧರಣಿ ಕುಳಿತರು ಸ್ಥಳಕ್ಕೆ ಡಿಸಿ ಬರಲಿಲ್ಲ, ನಾನೇನು ದನಕಾಯೋನ: ಹೆಚ್‍ಡಿ.ರೇವಣ್ಣ