– ಭಾರತ-ಚೀನಾ ಸಂಬಂಧಕ್ಕೆ ಬಹುದೊಡ್ಡ ತಿರುವು
ಬೀಜಿಂಗ್: ಚೀನಾದ ಟಿಯಾಂಜಿನ್‌ನಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದು ಚೀನೀ ಕಮ್ಯುನಿಸ್ಟ್ ಪಕ್ಷದ (CCP) ಪ್ರಬಲ ನಾಯಕರೂ ಆಗಿರುವ ಕ್ಲಿ ಜಿನ್‌ಪಿಂಗ್ ಆಪ್ತಮಿತ್ರ ಕೈ ಕಿ (Cai Qi) ಅವರನ್ನ ಭೇಟಿಯಾದರು. ಇದು ಭಾರತ ಮತ್ತು ಚೀನಾ ಸಂಬಂಧಕ್ಕೆ ಬಹುದೊಡ್ಡ ತಿರುವು ಸಿಕ್ಕಂತಾಗಿದೆ.
VIDEO | Tianjin: Prime Minister Narendra Modi (@narendramodi) meets Cai Qi, member of the Standing Committee of the Politburo of the Communist Party of China (CPC), on the sidelines of SCO Summit.
(Source: Third Party)
(Full video available on PTI Videos –… pic.twitter.com/YuUB5FQ5j3
— Press Trust of India (@PTI_News) August 31, 2025
ಕೈ ಕಿ ಅವರೊಂದಿಗೆ ಮೋದಿ (Narendra Modi) ದ್ವಿಪಕ್ಷೀಯ ಸಂಬಂಧಗಳ ಕುರಿತಾದ ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡರು. ಉಭಯ ನಾಯಕರ ದೃಷ್ಟಿಕೋನವನ್ನು ಸಾಕಾರಗೊಳಿಸಲು ಪರಸ್ಪರ ಬೆಂಬಲ ಕೋರಿದರು. ಜೊತೆಗೆ ಉಭಯ ನಾಯಕರ ನಡುವೆ ಸರ್ಕಾರಿ, ರಕ್ಷಣಾ ಸಹಕಾರ, ರಾಜಕೀಯ, ದ್ವೀಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಹಾಗೂ ಗಡಿಯಲ್ಲಿ (India China Border) ಪರಸ್ಪರ ಶಾಂತಿ ಕಾಪಾಡಿಕೊಳ್ಳುವ ಬಗ್ಗೆ ಚರ್ಚೆ ನಡೆಯಿತು. ಮೋದಿ ಅವರ ಜಪಾನ್ ಪ್ರವಾಸದ ಬಳಿಕ ಇದು ಪ್ರಬಲ ಕಾರ್ಯತಂತ್ರ ಎಂದೇ ಹೇಳಲಾಗುತ್ತಿದೆ. ಅಲ್ಲದೇ ಇಂದಿನ ಚೀನಾ ಹಾಗೂ ಭಾರತದ ಸಂಬಂಧಕ್ಕೆ ಕೈ ಕಿ ಅವರ ಪಾತ್ರ ಮಹತ್ವದ್ದು ಎಂದು ವರದಿಗಳು ತಿಳಿಸಿವೆ.
ಕೈ ಕಿ ಯಾರು?
ಚೀನೀ ಕಮ್ಯುನಿಸ್ಟ್ ಪಕ್ಷದ (CCP) ಕಾರ್ಯದರ್ಶಿ ಆಗಿರುವ ಕೈ ಕಿ ಅತ್ಯಂತ ಪ್ರಭಾವಶಾಲಿ ರಾಜಕೀಯ ನಾಯಕರಲ್ಲಿ ಒಬ್ಬರು. ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ವಿಶ್ವಾಸ ಗಳಿಸಿರುವ ಕೈ ಕಿ ಪಕ್ಷದ ದೈನಂದಿನ ಕಾರ್ಯಾಚರಣೆ, ಸೈದ್ಧಾಂತಿಕ ಕೆಲಸಗಳ ನಿರ್ವಹಣೆ ಮತ್ತು ಪ್ರಮುಖ ರಾಷ್ಟ್ರೀಯ ಯೋಜನೆಗಳ ಮೇಲ್ವಿಚಾರಣೆ ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಇದನ್ನೂ ಓದಿ: ಪಾಕಿಸ್ತಾನ ಮ್ಯಾಪ್ ವಿಚಾರಕ್ಕೆ ಸಿಟ್ಟಾಗಿ SCO ಸಭೆಯಿಂದ ಎದ್ದು ಹೊರಬಂದಿದ್ದ ಅಜಿತ್ ದೋವಲ್
ಕೈ ಕಿ ಈ ಇಂದೆ ಬೀಜಿಂಗ್‌ನ ಮೇಯರ್ ಆಗಿದ್ದರು, ಬಳಿಕ ಸಿಸಿಪಿ ಕಾರ್ಯದರ್ಶಿಯಾಗಿ ನೇಮಕಗೊಂಡರು. 2022ರ ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್ ಕ್ರೀಡಾಕೂಟ ಸಿದ್ಧತೆ ನಿರ್ವಹಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೇ ಪ್ರಮುಖ ನೀತಿಗಳನ್ನು ಜಾರಿಗೊಳಿಸುವ ಜೊತೆ ಜೊತೆಗೆ ಪಕ್ಷದ ವ್ಯವಹಾರ ನಿರ್ವಹಣೆ ಮಾಡುತ್ತಾ ಜಿನ್‌ಪಿಂಗ್ ವಿಶ್ವಾಸ ಗಳಿಸಿಕೊಂಡರು. ಇಂದು ಭಾರತ ಮತ್ತು ಚೀನಾ ಸಂಬಂಧ ಬೆಸೆಯುವಲ್ಲಿ ಇವರ ಪಾತ್ರ ಪ್ರಮುಖವಾಗಿದೆ ಎಂದು ಹೇಳಲಾಗುತ್ತಿದೆ.
ಕೈ ಕಿ ಜೊತೆಗಿನ ಸಭೆ ಏಕೆ ಮುಖ್ಯ?
ಚೀನಾ ಮತ್ತು ಭಾರತದ ಇಂದಿನ ಒಗ್ಗೂಡುವಿಕೆಗೆ ಕೈ ಕಿ ಅವರ ಪಾಲ್ಗೊಳ್ಳುವಿಕೆಯೇ ಕಾರಣ ಎಂದು ನಂಬಲಾಗಿದೆ. ಹೀಗಾಗಿ ಕೈ ಕಿ ಅವರ ಭೇಟಿ ಮೂಲಕ ಚೀನಾದ ಜೊತೆಗಿನ ವಿಶ್ವಾಸಾರ್ಹತೆ, ನಂಬಿಕೆ ಉಳಿಸಿಕೊಳ್ಳುವ ಜೊತೆಗೆ ಹೊಸ ರಾಜಕೀಯ ಮಾರ್ಗಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಭಾರತಕ್ಕೆ ಈ ಸಭೆಯು ಮುಖ್ಯವಾಗಿದೆ. ಇದನ್ನೂ ಓದಿ: ಭಾರತ & ಚೀನಾ ಸ್ನೇಹಿತರಾಗಿರುವುದೇ ಉತ್ತಮ ಆಯ್ಕೆ: ಕ್ಸಿ ಜಿನ್‌ಪಿಂಗ್
50 ನಿಮಿಷಗಳ ಕಾಲ ಮೋದಿ – ಜಿನ್‌ಪಿಂಗ್ ಸಭೆ
ಅಮೆರಿಕ ವಿಧಿಸಿರುವ ಸುಂಕಗಳು ಮತ್ತು ಚೀನಾದ ಅಸ್ಥಿರ ಸಂಬಂಧಗಳ ನಡುವೆಯೂ ಪ್ರಧಾನಿ ಮೋದಿ ಮತ್ತು ಕ್ಸಿ ಜಿನ್‌ಪಿಂಗ್ 50 ನಿಮಿಷಗಳಿಗೂ ಹೆಚ್ಚು ಕಾಲ ದ್ವಿಪಕ್ಷೀಯ ಸಭೆ ನಡೆಸಿದರು. ಇಂದಿನಿಂದ ಎರಡು ದಿನಗಳ ಕಾಲ ಟಿಯಾಂಜಿನ್‌ನಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯ ಪಕ್ಕದಲ್ಲಿ ಈ ಸಭೆ ನಡೆಯಿತು. ಗಾಲ್ವಾನ್ ಕಣಿವೆ ಘರ್ಷಣೆಯ ನಂತರ 7 ವರ್ಷಗಳ ಬಳಿಕ ಪ್ರಧಾನಿ ಮೋದಿ ಚೀನಾಕ್ಕೆ ನೀಡಿದ ಮೊದಲ ಭೇಟಿ ಇದಾಗಿದೆ. ಇದನ್ನೂ ಓದಿ: ಪರಸ್ಪರ ನಂಬಿಕೆ, ಗೌರವ ಆಧಾರದಲ್ಲಿ ಭಾರತ-ಚೀನಾ ಸಂಬಂಧ ಮುಂದಕ್ಕೆ ಕೊಂಡೊಯ್ಯಲು ಬದ್ಧ: ಮೋದಿ