ಇಂಧೋರ್: ಪ್ರಧಾನಿ ಮೋದಿ ಕಡಿಮೆ ಕೆಲಸ ಮಾಡಿ ಹೆಚ್ಚು ಕೆಲಸ ಮಾಡಿದಂತೆ ನಟಿಸುವ ವಧುವಿನಂತೆ ಎಂದು ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ವಿವಾದತ್ಮಾಕ ಹೇಳಿಕೆಯನ್ನು ನೀಡಿದ್ದಾರೆ.
ಮದುವೆಯಾಗಿ ಪತಿ ಮನೆಗೆ ಬಂದ ವಧು ಕಡಿಮೆ ರೊಟ್ಟಿ ಮಾಡಿದರೂ, ನೆರೆಹೊರೆಯವರು ಹೆಚ್ಚು ಕೆಲಸ ಮಾಡುತ್ತಿದ್ದಾಳೆ ಎಂದುಕೊಳ್ಳಲಿ ಎಂದು ಬಳೆಗಳಿಂದ ಶಬ್ಧ ಮಾಡುತ್ತಾಳೆ. ಇದೇ ರೀತಿಯಲ್ಲಿ ಮೋದಿ ಸರ್ಕಾರವು ಏನೂ ಕೆಲಸ ಮಾಡದಿದ್ದರೂ, ಹೆಚ್ಚು ಪ್ರಚಾರ ಪಡೆದುಕೊಳ್ಳುತ್ತಿದೆ ಎಂದು ವ್ಯಂಗ್ಯ ಮಾಡಿದರು.
Punjab Minister & Congress leader Navjot Singh Sidhu in Indore, MP: I call him Liar-in-Chief, Divider-in-Chief and Business Manager of Ambani and Adani. https://t.co/JLDwq1Bms3
— ANI (@ANI) May 11, 2019
- Advertisement
ಪತ್ರಿಕೆಯೊಂದು ತನ್ನ ಮುಖಪುಟದಲ್ಲಿ ಮೋದಿ ಫೋಟೋ ಹಾಕಿ ‘ಭಾರತದ ವಿಭಜಕದ ಮುಖ್ಯಸ್ಥ’ ಎಂದು ಬರೆದುಕೊಂಡಿತ್ತು. ಈ ಕುರಿತು ಪ್ರತಿಕ್ರಿಯಿಸಿದ ಸಿಧು, ಹೌದು ಮೋದಿ ಸುಳ್ಳು ಹೇಳುವುದರ ಮುಖ್ಯಸ್ಥ, ವಿಭಾಗ ಮಾಡುವುದರ ಮುಖ್ಯಸ್ಥ ಮತ್ತು ಅಂಬಾನಿ ಮತ್ತು ಅದಾನಿ ಸಂಸ್ಥೆಯ ಮುಖ್ಯಸ್ಥ ಎಂದು ಕಿಡಿಕಾರಿದರು.
- Advertisement
ಕಾಂಗ್ರೆಸ್ ಪಕ್ಷ ಬ್ರಿಟಿಷರ ವಿರುದ್ಧ ಹೋರಾಡಿ ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮೌಲಾನಾ ಅಜಾದ್ ಮತ್ತು ಮಹಾತ್ಮ ಗಾಂಧಿ ಅವರ ಪಕ್ಷ. ಕಾಂಗ್ರೆಸ್ ಪಕ್ಷ ಭಾರತಕ್ಕೆ ಸ್ವಾತಂತ್ರ್ಯವನ್ನು ತಂದು ಕೊಟ್ಟಿದೆ. ಪ್ರಧಾನಿ ಮೋದಿ ಅವರು ಮುಕ್ತವಾಗಿ ಚರ್ಚೆಗೆ ಬರಲಿ ನಾನು ಚರ್ಚೆ ಮಾಡಲು ಸಿದ್ಧನಿದ್ದೇನೆ. ಮೋದಿ ಅವರು ಜಿಎಸ್‍ಟಿ ಮತ್ತು ಕಪ್ಪು ಹಣ, ಪ್ರತಿ ವರ್ಷಕ್ಕೆ 2 ಕೋಟಿ ಉದ್ಯೋಗ ಈ ವಿಷಯಗಳ ಬಗ್ಗೆ ಅವರು ನನ್ನ ಬಳಿ ಚರ್ಚೆ ಮಾಡಲಿ. ನಾನು ಆ ಚರ್ಚೆಯಲ್ಲಿ ಸೋತರೆ ನಾನು ಶಾಶ್ವತ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲು ಹಾಕಿದರು.