ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಇಡೀ ವಿಶ್ವದಲ್ಲೇ ಅತ್ಯಂತ ವಿಶ್ವಾಸಾರ್ಹ ಸರ್ಕಾರಗಳಲ್ಲೊಂದು ಎಂದು ಆರ್ಗನೈಸೇಷನ್ ಫಾರ್ ಎಕಾನಾಮಿಕ್ ಕೊ-ಆಪರೇಷನ್ ಅಂಡ್ ಡೆವಲಪ್‍ಮೆಂಟ್(ಓಇಸಿಡಿ) ನಡೆಸಿರುವ ಸಮೀಕ್ಷೆ ತಿಳಿಸಿದೆ.
ಸಮೀಕ್ಷೆಯ ಪ್ರಕಾರ ಮೋದಿ ಸರ್ಕಾರ ಇಡೀ ವಿಶ್ವದಲ್ಲಿ ಮೂರನೇ ಅತ್ಯಂತ ವಿಶ್ವಾಸಾರ್ಹ ಸರ್ಕಾರ ಎನಿಸಿಕೊಂಡಿದೆ. ಭಾರತದ ಮುಕ್ಕಾಲು ಭಾಗದಷ್ಟು ಜನ ಕೇಂದ್ರ ಸರ್ಕಾರದ ಮೇಲೆ ನಂಬಿಕೆ ಇದೆ ಎಂದು ಹೇಳಿದ್ದಾರೆಂದು ವಲ್ರ್ಡ್ ಎಕನಾಮಿಕ್ ಫೋರಂ ಈ ವರದಿಯ ಬಗ್ಗೆ ಪ್ರಸ್ತಾಪಿಸುತ್ತಾ ತಿಳಿಸಿದೆ.
Advertisement
Advertisement
ಭಾರತದ ಇತ್ತೀಚಿನ ಭ್ರಷ್ಟಾಚಾರ ವಿರೋಧಿ ಹಾಗೂ ತೆರಿಗೆ ಸುಧಾರಣೆ ಕ್ರಮಗಳು ಸರ್ಕಾರದ ಮೇಲೆ ಜನರಿಗಿರುವ ವಿಶ್ವಾಸವನ್ನು ವಿವರಿಸಲು ಸಹಾಯವಾಗಬಹುದು ಎಂದು ವಲ್ರ್ಡ್ ಎಕನಾಮಿಕ್ ಫೋರಂ ಹೇಳಿದೆ. ಸುಮಾರು 74% ಭಾರತೀಯರು ಮೋದಿ ಸರ್ಕಾರದ ಮೇಲೆ ವಿಶ್ವಾಸ ಹೊಂದಿದ್ದಾರೆ ಎಂದು ವರದಿ ಹೇಳಿದೆ.
Advertisement
ಈ ಹೊಸ ಸಮೀಕ್ಷೆಯ ಬಗ್ಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆಪಿ ನಡ್ಡಾ ಟ್ವೀಟ್ ಮಾಡಿದ್ದು, ಕಳೆದ ಕೆಲವು ವರ್ಷಗಳಲ್ಲಿ ಪ್ರಜೆಗಳು ಸರ್ಕಾರ ಹಾಗೂ ರಾಜಕಾರಣಿಗಳ ಮೇಲೆ ನಂಬಿಕೆ ಕಳೆದುಕೊಂಡಿದ್ದರು. ನರೇಂದ್ರ ಮೋದಿ ಅವರ ನಾಯಕತ್ವ ಹಾಗೂ ಯೋಜನೆಗಳು ಆ ನಂಬಿಕೆಯನ್ನು ವಾಪಸ್ ತಂದಿದೆ. ಪ್ರತಿಯೊಬ್ಬ ಭಾರತೀಯರು ಪ್ರಧಾನಿಯ ನಾಯಕತ್ವದಲ್ಲಿ ಹೊಸ ಭಾರತವನ್ನು ಕಾಣುತ್ತಿದ್ದಾರೆ ಎಂದು ಹೇಳಿದ್ದಾರೆ.
Advertisement
A question of confidence: the countries with the most trusted governments https://t.co/7uxffqvXTE pic.twitter.com/1PA8nJeMo2
— World Economic Forum (@wef) November 19, 2017
ಈ ಸಮೀಕ್ಷೆಯ ಪ್ರಕಾರ ಸ್ವಿಜಲ್ರ್ಯಾಂಡ್ ಜಗತ್ತಿನ ಅತ್ಯಂತ ವಿಶ್ವಾಸಾರ್ಹ ಸರ್ಕಾರಗಳಲ್ಲಿ ಮೊದಲನೇ ಸ್ಥಾನದಲ್ಲಿದೆ. ಇಂಡೋನೇಷ್ಯಾ ಎರಡನೇ ಸ್ಥಾನದಲ್ಲಿದ್ದು, ಭಾರತ ಮೂರನೇ ಸ್ಥಾನದಲ್ಲಿದೆ. ದೇಶದ ಆರ್ಥಿಕ ಸ್ಥಿತಿ, ರಾಜಕೀಯ ದಂಗೆ ಹಾಗೂ ಪ್ರಮುಖ ಭ್ರಷ್ಟಾಚಾರ ಪ್ರಕರಣಗಳು ಜನ ಸರ್ಕಾರದ ಮೇಲೆ ನಂಬಿಕೆ ಇಡಲು ಕಾರಣವಾಗೋ ಅಂಶಗಳಾಗಿವೆ.
ಇನ್ನು ಸರ್ಕಾರದ ಮೇಲೆ ಅತ್ಯಂತ ಕಡಿಮೆ ನಂಬಿಕೆ ಪಡೆದಿರುವ ರಾಷ್ಟ್ರಗಳೆಂದರೆ ಚಿಲಿ, ಫಿನ್‍ಲ್ಯಾಂಡ್, ಗ್ರೀಸ್ ಹಾಗೂ ಸ್ಲೊವೇನಿಯಾ.
Over the past few years, citizens had lost their trust in the government and politicians. The policies and leadership of @narendraModi ji has evoked that trust which is the cornerstone of a democracy. Every Indian is seeing a #NewIndia in the leadership of our Hon'ble PM.
— Jagat Prakash Nadda (@JPNadda) November 19, 2017