ಬೆಂಗಳೂರು: ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಐಸಿಸಿ ಅಂಡರ್ 19 ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ ಕನ್ನಡಿಗ ರಾಹುಲ್ ದ್ರಾವಿಡ್ ರನ್ನು ಹೆಸರು ಪ್ರಸ್ತಾಪಿಸಿ ಹಾಡಿ ಹೊಳಿಸಿದ್ದಾರೆ.
ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ ಮೋದಿ ತಮ್ಮ ಮೊದಲ ಐದು ನಿಮಿಷದ ಭಾಷಣವನ್ನು ಕನ್ನಡದಲ್ಲೇ ಮಾಡಿದರು. ಈ ವೇಳೆ ಕನ್ನಡ ನಾಡಿನ ಹೆಮ್ಮೆಯ ನಾಡಪ್ರಭೂ ಕೆಂಪೇಗೌಡ, ಬಸವೇಶ್ವರ, ಮಾದರ ಚನ್ನಯ್ಯ, ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ರನ್ನು ನೆನೆದರು. ಕರ್ನಾಟಕ ಮಹಾಪುರುಷರ ನಾಡು ನವ ಕರ್ನಾಟಕ ನಿರ್ಮಾಣಕ್ಕೆ ಬಿಜೆಪಿ ಯನ್ನು ಗೆಲ್ಲಿಸಿ ಕಾರ್ಯಕರ್ತರಿಗೆ ಕರೆ ನೀಡಿದರು.
Advertisement
Advertisement
ಇದೇ ವೇಳೆ ರಾಹುಲ್ ದ್ರಾವಿಡ್ ರನ್ನು ನೆನಪಿಸಿಕೊಂಡ ಪ್ರಧಾನಿ ಮೋದಿ ಐಸಿಸಿ ಅಂಡರ್ 19 ವಿಶ್ವಕಪ್ ಗೆಲ್ಲವು ಹಿಂದೆ ದ್ರಾವಿಡ್ ಅವರ ಶ್ರಮ ಹೆಚ್ಚು. ಟೀ ಇಂಡಿಯಾ ವಿಶ್ವಕಪ್ ಗೆಲುವಿನ ಹಿಂದೆ ಕನ್ನಡ ಮಣ್ಣಿನ ದ್ರಾವಿಡ್ ಇದ್ದಾರೆ ಎಂದರು.
Advertisement
ಕನ್ನಡಿಗ ರಾಹುಲ್ ದ್ರಾವಿಡ್ ಅವರ ಮಾರ್ಗರ್ದಶನದಲ್ಲಿ ಐಸಿಸಿ ವಿಶ್ವಕಪ್ ಟೂರ್ನಿ ಎದುರಿಸಿದ್ದ ಅಂಡರ್ 19 ತಂಡ ಅದ್ಭುತ ಪ್ರದರ್ಶನ ನೀಡಿ ವಿಶ್ವಕಪ್ ಮುಡಿಗೆರಿಸಿಕೊಂಡಿತ್ತು. ಫೈನಲ್ ನಲ್ಲಿ ಆಸ್ಟ್ರೇಲಿಯಾವನ್ನು 8 ವಿಕೆಟ್ ಗಳಿಂದ ಬಗ್ಗು ಬಡಿದು ಭಾರತ ನಾಲ್ಕನೇಯ ಬಾರಿ ಅಂಡರ್ 19 ವಿಶ್ವಕಪ್ ಜಯಿಸಿತ್ತು. ಟೀಂ ಇಂಡಿಯಾ ಯುವ ಪಡೆಯ ಕೋಚ್ ಹಾಗೂ ಮಾರ್ಗದರ್ಶರಾಗಿದ್ದ ರಾಹುಲ್ ದ್ರಾವಿಡ್ ಆಟಗಾರರಿಗೆ ಉತ್ತಮ ತರಬೇತಿ ನೀಡಿದ್ದರು. ಅಲ್ಲದೇ ಆಟಗಾರರ ಮನಸ್ಸು ಕೇವಲ ಪಂದ್ಯದ ಕಡೆ ಗಮನ ಹರಿಸುವಂತೆ ಐಪಿಎಲ್ ಹರಾಜಿನ ಬಗ್ಗೆ ತಲೆ ಕೆಡಿಸಿಕೊಡದಂತೆ ಸಲಹೆ ನೀಡಿದ್ದರು. ಟೀ ಇಂಡಿಯಾ ಸೆಮಿ ಫೈನಲ್ ಪ್ರವೇಶಿಸುತ್ತಿದಂತೆ ಆಟಗಾರರ ಮೊಬೈಲ್ ಫೋನ್ ಆಫ್ ಮಾಡುವಂತೆಯೂ ಖಡಕ್ ಸೂಚನೆ ನೀಡಿದ್ದರು. ದ್ರಾವಿಡ್ ರ ಮಾತನ್ನು ಚಾಚು ತಪ್ಪದೆ ಪಾಲಿಸಿದ್ದ ಟೀಂ ಇಂಡಿಯಾ ಆಟಗಾರರು ವಿಶ್ವಕಪ್ ಗೆದ್ದು ವಿಜಯಪತಾಕೆಯನ್ನು ಹಾರಿಸಿದ್ದರು.