ನವದೆಹಲಿ: ಪ್ರಧಾನಿ ನರೇಂದ್ರ ಮೋದಿ 2016ರ ಸ್ವಾತಂತ್ರ್ಯ ದಿನದಂದು ದೀರ್ಘ ಭಾಷಣ ಮಾಡಿದ್ದಾರೆ, ಈ ಬಾರಿ ದೇಶವನ್ನು ಉದ್ದೇಶಿಸಿ ಕಿರು ಭಾಷಣ ಮಾಡಿದ್ದಾರೆ.
ಕೆಂಪುಕೋಟೆಯಲ್ಲಿ ಈ ವರ್ಷ ಮೋದಿ 56 ನಿಮಿಷಗಳ ಕಾಲ ಭಾಷಣ ಮಾಡಿದ್ದರೆ, ಕಳೆದ ವರ್ಷ 96 ನಿಮಿಷಗಳ ಕಾಲ ಮಾತನಾಡಿದ್ದರು.
Advertisement
2014 ರಲ್ಲಿ 65 ನಿಮಿಷ ಮಾತನಾಡಿದ್ದರೆ 2015 ರಲ್ಲಿ 86 ನಿಮಿಷ ಮೋದಿ ಭಾಷಣ ಮಾಡಿದ್ದರು. 1947ರಲ್ಲಿ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು 72 ನಿಮಿಷಗಳ ಭಾಷಣ ಮಾಡಿದ್ದು 2015ರವರೆಗೂ ಅತಿ ದೀರ್ಘವಾದ ಭಾಷಣ ಆಗಿತ್ತು.
Advertisement
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಹತ್ತು ಸ್ವಾತಂತ್ರ್ಯೋತ್ಸವದ ಭಾಷಣ 50 ನಿಮಿಷಗಳಿಗೆ ಸೀಮಿತಗೊಂಡಿತ್ತು. ಬಿಜೆಪಿಯ ಮೊದಲ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ 30, 35 ನಿಮಿಷಗಳ ಕಾಲ ಭಾಷಣ ಮಾಡಿದ್ದರು. 2002ರಲ್ಲಿ ವಾಜಪೇಯಿ 25 ನಿಮಿಷ ಮಾತನಾಡಿದ್ದರೆ, 2003 ರಲ್ಲಿ 30 ನಿಮಿಷ ಮಾತನಾಡಿದ್ದರು.
Advertisement
ಕಡಿಮೆ ಅವಧಿ ಯಾಕೆ: ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ, ಕಡಿಮೆ ಅವಧಿಯ ಸ್ವಾತಂತ್ರ್ಯ ಭಾಷಣವನ್ನು ಮಾಡಬೇಕೆಂದು ಜನರು ಸಲಹೆ ನೀಡಿದ್ದಾರೆ. ಹೀಗಾಗಿ ಈ ಬಾರಿ ನಾನು ಕಿರು ಭಾಷಣ ಮಾಡುತ್ತೇನೆ ಎಂದು ಮೋದಿ ಭರವಸೆ ನೀಡಿದ್ದರು.
Advertisement
ಇದನ್ನೂ ಓದಿ: 71ನೇ ಸ್ವತಂತ್ರ ದಿನಾಚರಣೆಯಲ್ಲಿ ಮೋದಿ ಭಾಷಣ- ನೋಟ್ ಬ್ಯಾನ್‍ನಿಂದ ಬ್ಯಾಂಕ್ ಸೇರಿದ ಹಣವಿಷ್ಟು
ಇದನ್ನೂ ಓದಿ: ದೇಶಕ್ಕಾಗಿ ಹುತಾತ್ಮರಾದ ಸೈನಿಕರಿಗೆ ಸರ್ಕಾರದಿಂದ ವಿಶೇಷ ಗೌರವ: ಏನಿದು ಹೊಸ ವೆಬ್‍ಸೈಟ್? ಮಾಹಿತಿ ಪಡೆಯೋದು ಹೇಗೆ?