ಎಡವಿ ಬೀಳ್ತಿದ್ದ ಸ್ಟಾಲಿನ್‌ ಕೈಹಿಡಿದು ರಕ್ಷಿಸಿದ ಪ್ರಧಾನಿ ಮೋದಿ

Public TV
1 Min Read
MODI STALIN

ಚೆನ್ನೈ: ಪ್ರಧಾನಿ ನರೇಂದ್ರ ಮೋದಿಯವರನ್ನು ರಾಜಕೀಯವಾಗಿ ಬಲವಾಗಿ ವಿರೋಧಿಸುವವರಲ್ಲಿ ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್‌ (M.K Stalin) ಕೂಡ ಒಬ್ಬರು. ಆದರೆ ಇಂದು ಈ ಇಬ್ಬರೂ ನಾಯಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಎಡವಿ ಬೀಳುತ್ತಿದ್ದ ಸ್ಟಾಲಿನ್‌ ಅವರನ್ನು ಮೋದಿ ರಕ್ಷಣೆ ಮಾಡಿದ ಪ್ರಸಂಗವೂ ಇಂದು ನಡೆದಿದೆ.

ಖೇಲೋ ಇಂಡಿಯಾ ಕ್ರೀಡಾಕೂಟದ ಉದ್ಘಾ ಟನಾ ಸಮಾರಂಭವು ಚೆನ್ನೈನ ನೆಹರುಸ್ಪೋರ್ಟ್ಸ್ ಅರೆನಾದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ (Narendra Modi), ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್, ರಾಜ್ಯಪಾಲ ರವಿ, ಮುಖ್ಯಮಂತ್ರಿ ಸ್ಟಾಲಿನ್, ತಮಿಳುನಾಡು ಕ್ರೀಡಾ ಸಚಿವ ಉದಯನಿಧಿ ಮತ್ತಿತರರು ಭಾಗವಹಿಸಿದ್ದರು.

ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಬಂದ ಪ್ರಧಾನಿ ಮೋದಿಯವರನ್ನು ಮುಖ್ಯಮಂತ್ರಿ ಸ್ಟಾಲಿನ್ ಸ್ವಾಗತಿಸಿದರು. ಇಬ್ಬರೂ ಸಮಾರಂಭದ ಸಭಾಂಗಣವನ್ನು ಪ್ರ ವೇಶಿಸಿದರು. ಈ ವೇಳೆ ಇದ್ದಕ್ಕಿದ್ದಂತೆ ಸ್ಟಾಲಿನ್ ಎಡವಿ ಬೀಳುತ್ತಿದ್ದರು. ಆದರೆ ಕೂಡಲೇ ಜಾಗೃತರಾದ ಪ್ರಧಾನಿಯವರು ಸ್ಟಾಲಿನ್‌ ಕೈ ಹಿಡಿದುಕೊಳ್ಳುವ ಮೂಲಕ ಅವರನ್ನು ಕಾಪಾಡಿದರು. ಈ ಘಟನೆ ಅಲ್ಲಿ ಕೊಂಚ ಸಂಚಲನ ಮೂಡಿಸಿತ್ತು. ಅಲ್ಲದೇ ಸ್ಥಳದಲ್ಲಿದ್ದವರು ತಮ್ಮ ಮೊಬೈಲ್‌ನಲ್ಲಿ ಈ ದೃಶ್ಯವನ್ನು ಸೆರೆ ಹಿಡಿದು ಸೋಶಿಯಲ್‌ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಸದ್ಯ ಇದು ವೈರಲ್‌ ಆಗುತ್ತಿದೆ. ಅಲ್ಲದೆ ಇಬ್ಬರು ನಾಯಕರ ಪರ ಹಾಗೂ ವಿರೋಧ ಕಾಮೆಂಟ್‌ಗಳು ಬರುತ್ತಿವೆ.

ಸ್ಟಾಲಿನ್ ಮತ್ತು ಮೋದಿ 20 ನಿಮಿಷಗಳ ಕಾಲ ಕ್ರೀಡಾ ಭವನದಲ್ಲಿ ಭೇಟಿಯಾದರು. ಈ ವೇಳೆ ತಮಿಳುನಾಡಿನ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಮುಖ್ಯಮಂತ್ರಿಗಳು ಪ್ರಧಾನಿಗೆ ಸಲ್ಲಿಸಿದರು. ಅಲ್ಲದೇ ಪ್ರವಾಹ ಪರಿಹಾರ ಧನ ನೀಡುವಂತೆಯೂ ಇದೇ ವೇಳೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

Share This Article