ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ತುಂಬಾ ಪವರ್‌ಫುಲ್, ಆದರೆ ದೇವರಲ್ಲ ಎಂದು ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಹೇಳಿದರು.
ಗುರುವಾರ ದೆಹಲಿ ವಿಧಾನಸಭೆಯಲ್ಲಿ ಎಎಪಿ (AAP) ಮುಖ್ಯಸ್ಥ ಹಾಗೂ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ 41ನೇ ಸ್ಥಾನವನ್ನು ನೀಡಲಾಯಿತು. ರಾಜೀನಾಮೆ ನೀಡಿದ ಬಳಿಕ ಮೊದಲ ಬಾರಿಗೆ ಗುರುವಾರ ದೆಹಲಿ ವಿಧಾನಸಭೆಯನ್ನು ಉದ್ದೇಶಿಸಿ ಮಾತನಾಡಿದರು.
Advertisement
ವಿರೋಧ ಪಕ್ಷದಲ್ಲಿರುವ ನನ್ನ ಸಹೋದ್ಯೋಗಿಗಳು ಮನೀಷ್ ಸಿಸೋಡಿಯಾ (Manish Sisodia) ಮತ್ತು ನನ್ನನ್ನು ನೋಡಿ ದುಃಖಿತರಾಗಬೇಕು. ಪ್ರಧಾನಿ ಮೋದಿ ಅತ್ಯಂತ ಶಕ್ತಿಶಾಲಿ ವ್ಯಕ್ತಿ ಹಾಗೂ ಸಂಪನ್ಮೂಲ ವ್ಯಕ್ತಿ. ಆದರೆ ಮೋದಿ ದೇವರಲ್ಲ. ಇರುವ ದೇವರು ನಮ್ಮೊಂದಿಗಿದ್ದಾನೆ. ಇದರಿಂದ ನಾನು ಸುಪ್ರೀಂ ಕೋರ್ಟ್‌ಗೆ (Supreme Court) ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಟಾಂಗ್ ಕೊಟ್ಟಿದ್ದಾರೆ.ಇದನ್ನೂ ಓದಿ: ನಟ ದರ್ಶನ್‌ಗೆ ಐಟಿ ವಿಚಾರಣೆ ಬಿಸಿ – ಜೈಲಿನಲ್ಲೇ 7 ಗಂಟೆ ಡ್ರಿಲ್
Advertisement
Advertisement
ಎಎಪಿಗೆ ಸಹಾಯ ಮಾಡಿದ ಸುಪ್ರೀಂ ಕೋರ್ಟ್‌ಗೆ ಧನ್ಯವಾದ ಹೇಳಲು ಬಯಸುತ್ತೇನೆ. ದೆಹಲಿಯಲ್ಲಿ ಆಡಳಿತವನ್ನು ಅಡ್ಡಿಪಡಿಸುವುದು ಬಿಜೆಪಿಯ (BJP) ಲೆಕ್ಕಾಚಾರವಾಗಿತ್ತು. ರಾಜಕೀಯ ನಡೆಯ ಭಾಗವಾಗಿ ಅವರ ಬಂಧನವಾಗಿದೆ. ರಾಜಕೀಯ ಸೇಡಿನ ಮೇಲೆ ಬಿಜೆಪಿ ಹೆಚ್ಚು ಗಮನಹರಿಸಿದೆ ಎಂದು ಕಿಡಿಕಾರಿದರು.
Advertisement
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಉದ್ದೇಶಪೂರ್ವಕವಾಗಿ ದೆಹಲಿಯ ಪ್ರಮುಖ ಅಭಿವೃದ್ಧಿ ಯೋಜನೆಗಳನ್ನು ಸ್ಥಗಿತಗೊಳಿಸುತ್ತಿದೆ ಮತ್ತು ಎಎಪಿ ನಾಯಕರನ್ನು ಸುಳ್ಳು ಆರೋಪಗಳೊಂದಿಗೆ ಗುರಿಯಾಗಿಸುವುದು ಅವರು ಉದ್ದೇಶ ಎಂದು ಆರೋಪಿಸಿದರು.
ನನ್ನನ್ನು ಜೈಲಿಗೆ ಕಳುಹಿಸುವ ಮೂಲಕ ದೆಹಲಿಯ ಪರಿಸ್ಥಿತಿಯನ್ನು ಹದೆಗಡುವಂತೆ ಮಾಡುವುದು ಬಿಜೆಪಿ ಸರ್ಕಾರ ಉದ್ದೇಶವಾಗಿತ್ತು. ನನ್ನನ್ನು ಜೈಲಿಗೆ ಕಳುಹಿಸಿದ ಬಳಿಕ ದೆಹಲಿಯ ಕೆಲಸವನ್ನು ನಿಲ್ಲಿಸಿದ್ದಾರೆ. ಇದೀಗ ರಸ್ತೆಗಳು ಹಾಳಾಗಿವೆ. ಇಂದು ನಾನು ದೆಹಲಿ ವಿಶ್ವವಿದ್ಯಾಲಯದ ಮುಖ್ಯಮಂತ್ರಿ ಅತಿಶಿ ಅವರೊಂದಿಗೆ ದುರಸ್ತಿಯಾಗಬೇಕಿರುವ ರಸ್ತೆಯನ್ನು ಪರಿಶೀಲಿಸಿದ್ದೇನೆ. ಈ ರಸ್ತೆಯನ್ನು ಶೀಘ್ರದಲ್ಲೇ ದುರಸ್ತಿ ಮಾಡಲಾಗುವುದು, ಉಳಿದ ದೆಹಲಿಯ ರಸ್ತೆಗಳು ಕೂಡ ಶೀಘ್ರದಲ್ಲೇ ರಿಪೇರಿಯಾಗಲಿವೆ, ದೆಹಲಿಯ ಜನರು ಚಿಂತಿಸಬೇಕಾಗಿಲ್ಲ, ದೆಹಲಿಯಲ್ಲಿ ಬಾಕಿ ಉಳಿದಿರುವ ಎಲ್ಲಾ ಕೆಲಸಗಳು ಪೂರ್ಣಗೊಳ್ಳುತ್ತವೆ.
ಮುಖ್ಯಮಂತ್ರಿಯಾಗಿ ಮೊದಲ ಕುರ್ಚಿಯನ್ನು ಹೊಂದಿದ್ದ ಕೇಜ್ರಿವಾಲ್‌ಗೆ ಅವರಿಗೆ ಗುರುವಾರ ನಡೆದ ವಿಧಾನಸಭೆಯಲ್ಲಿ 41ನೇ ಸ್ಥಾನವನ್ನು ನೀಡಲಾಗಿತ್ತು. ಜೊತೆಗೆ ಅವರ ಪಕ್ಕದ 40ನೇ ಸ್ಥಾನವನ್ನು ಮನೀಶ್ ಸಿಸೋಡಿಯಾ ಅವರಿಗೆ ನೀಡಲಾಗಿತ್ತು.ಇದನ್ನೂ ಓದಿ: ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ- ಸಾವಿನ ಸುತ್ತ ಅನುಮಾನದ ಹುತ್ತ
ಹೊಸ ಅಬಕಾರಿ ನೀತಿ ಪ್ರಕರಣ ಆರೋಪದ ಮೇಲೆ ಜೈಲಿನಲ್ಲಿದ್ದ ಅರವಿಂದ್ ಕೇಜ್ರಿವಾಲ್ ಒತ್ತಡದಿಂದಾಗಿ ರಾಜೀನಾಮೆ ನೀಡಿದರು. ಇದೇ ಪ್ರಕರಣ ಸಂಬಂಧ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿದಂತೆ ಹಲವು ಎಎಪಿ ನಾಯಕರನ್ನು ತಿಂಗಳುಗಟ್ಟಲೇ ವಿಚಾರಣೆ ನಡೆಸಲಾಗಿತ್ತು.