ಪ್ರಧಾನಿ ಮೋದಿ ಒಬ್ಬ ಸುಳ್ಳಿನ ಸರದಾರ, ಚುನಾವಣೆಗೋಸ್ಕರ ಗಿಮಿಕ್ ಮಾಡ್ತಿದ್ದಾರೆ – ರೇವಣ್ಣ

Public TV
1 Min Read
KPCC HM Revanna

ಬೆಂಗಳೂರು: ಪ್ರಧಾನಿ ಮೋದಿ (PM Modi) ಒಬ್ಬ ಸುಳ್ಳಿನ ಸರದಾರ, ಚುನಾವಣೆಗೋಸ್ಕರ ಗಿಮಿಕ್ ಮಾಡ್ತಿದ್ದಾರೆ ಎಂದು ಮಾಜಿ ಸಚಿವ ಹೆಚ್‌ಎಂ ರೇವಣ್ಣ (HM Revanna) ಹೇಳಿದರು.ಇದನ್ನೂ ಓದಿ: ಸಿಎಂ ಪರ ಜಿಟಿಡಿ ಬ್ಯಾಟಿಂಗ್ | ಕಳ್ಳರು ಕಳ್ಳರು ಒಂದಾಗಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ವ್ಯಂಗ್ಯ

ಕೆಪಿಸಿಸಿ (KPCC) ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತಾನಾಡಿದ ಅವರು, ಭಾರತದಲ್ಲಿ ಮೀಸಲಾತಿ ಬಗ್ಗೆ ಯೋಚಿಸಬೇಕು. ಎಲ್ಲಿಲ್ಲದ ಬದಲಾವಣೆ ರಾಜ್ಯದಲ್ಲಿ ಆಗುತ್ತಿದೆ. ಕರ್ನಾಟಕದಲ್ಲಿ ದಲಿತರ ಮೀಸಲಾತಿ ಕಸಿಯಲಾಗುತ್ತಿದೆ ಎಂದು ಹರಿಯಾಣದಲ್ಲಿ ಮೋದಿ ಹೇಳಿದ್ದಾರೆ. ನಿಜವಾದ ಮೀಸಲಾತಿ ವಿರೋಧಿ ಯಾರು? ಅದು ಯಾರು ಎಂದು ಆರ್‌ಎಸ್‌ಎಸ್‌ಗೆ ಗೊತ್ತಿತ್ತು. ಪ್ರಧಾನಿ ಮೋದಿ ಒಬ್ಬ ಸುಳ್ಳಿನ ಸರದಾರ, ಚುನಾವಣೆಗೋಸ್ಕರ ಗಿಮಿಕ್ ಮಾಡ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಮೋದಿಯವರು ಸುಳ್ಳು ಹೇಳೋದು ಬಿಡಬೇಕು. ಸುಳ್ಳಿನ ಸರಮಾಲೆಯನ್ನ ಹಾಕಿಕೊಂಡಿದ್ದಾರೆ. ಮೋದಿಯವರು ಮಾತನ್ನ ನಾವು ಖಂಡಿಸುತ್ತೇವೆ. ಹಾವನೂರು ವರದಿ ಜಾರಿಗೆ ಬಂದಾಗಿನಿಂದ ಶೋಷಿತ ವರ್ಗಗಳಿಗೆ ಅಧಿಕಾರ ಸಿಗುತ್ತಿವೆ. ಹಾವನೂರು ವರದಿ ಹಿಂದೂಳಿದ ವರ್ಗಗಳ ಬೈಬಲ್ ಆಗಿದೆ. ಬ್ಯಾಕ್‌ ಲಾಗ್ ಹುದ್ದೆಗಳು ದಲಿತರಿಗೆ ಸಿಗುತ್ತಿವೆ. ಕೆಲಸ ಸಿಗುವ ಹಾಗೇ ಮಾಡಿದ್ದು ಕರ್ನಾಟಕ ಎಂದು ಹೇಳಿದರು.ಇದನ್ನೂ ಓದಿ: ಮಲ್ಲಿಕಾರ್ಜುನ್ ಖರ್ಗೆಯನ್ನು ಭೇಟಿಯಾದ ಸತೀಶ್ ಜಾರಕಿಹೊಳಿ

Share This Article