ಕಾಶಿ ಮಾದರಿಯಲ್ಲೇ ಉಜ್ಜೈನಿ ಮಹಾಕಾಲೇಶ್ವರ ಅಭಿವೃದ್ಧಿ- ಜ್ಯೋತಿರ್ಲಿಂಗಕ್ಕೆ ಮೋದಿ ಪೂಜೆ

Public TV
2 Min Read
MAHAKAL

ನವದೆಹಲಿ: ಹತ್ತು ತಿಂಗಳ ಹಿಂದಷ್ಟೇ ಪ್ರಧಾನಿ ಮೋದಿ (Narendra Modi) ಕಾಶಿ ಕಾರಿಡಾರ್ ಉದ್ಘಾಟಿಸಿದ್ರು. ಇದೀಗ ದ್ವಾದಶ ಜ್ಯೋತಿರ್ಲಿಂಗಗಳು ನೆಲೆಸಿರುವ ಕ್ಷೇತ್ರಗಳಲ್ಲಿ ಒಂದಾದ ಉಜ್ಜೈನಿಯ ಮಹಾಕಾಲೇಶ್ವರ (Mahakaleshwara) ನ ಸನ್ನಿಧಿಯಲ್ಲಿ ಅತ್ಯದ್ಭುತ ಎನ್ನಬಹುದಾದ ಮಹಾಕಾಲ ಲೋಕವನ್ನು ಪ್ರಧಾನಿ ಮೋದಿ ಅನಾವರಣ ಮಾಡಿದ್ದಾರೆ.

ಸಂಜೆ ಮಹಾಕಾಳೇಶ್ವರನ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಗಂಧ, ರುದ್ರಾಕ್ಷಾಮಾಲಾಧಾರಿ ಮೋದಿ ದೇಶದ ಒಳಿತಿಗೆ ಭಗವಂತನ ಮುಂದೆ ಸಂಕಲ್ಪ ಮಾಡಿದರು. ಬಳಿಕ ರುದ್ರಸಾಗರ ಸರೋವರದ ಬಳಿಯಿರುವ ಶ್ರೀಮಹಾಕಾಳೇಶ್ವರಾಲಯ ಕಾರಿಡಾರ್‍ನ ಮೊದಲ ಹಂತವನ್ನು ಪ್ರಧಾನಿ ಮೋದಿ ದೇಶಕ್ಕೆ ಅರ್ಪಣೆ ಮಾಡಿದ್ರು. ಹೆಜ್ಜೆ ಹೆಜ್ಜೆಗೂ ಶಿವತತ್ತ್ವವೇ ಮೇಳೈಸಿರುವ, 900 ಮೀಟರ್‍ಗಿಂತ ಹೆಚ್ಚು ಉದ್ದವಿರುವ ಈ ಕಾರಿಡಾರ್‍ನಲ್ಲಿ ಪ್ರಧಾನಿ ಮೋದಿ ಹೆಜ್ಜೆ ಹಾಕಿ ಪ್ರತಿಯೊಂದನ್ನು ತಿಳಿದುಕೊಂಡರು.

ಇದು ದೇಶದಲ್ಲೇ ಅತಿದೊಡ್ಡ ಧಾರ್ಮಿಕ ಕಾರಿಡಾರ್ ಎಂಬ ಗರಿಮೆಗೆ ಪಾತ್ರವಾಗಿದೆ. ಮಹಾಕಾಲ್ ಲೋಕ್ ಲೋಕಾರ್ಪಣೆ ಮಾಡಿದ ಬಳಿಕ ಮಾತನಾಡಿದ ಪ್ರಧಾನಿ, ವಸಾಹತುಶಾಹಿ ಮನಸ್ಥಿತಿಯಿಂದ ದೇಶ ಹೊರಬಂದಿದೆ. ಇದು ಐದು ಪ್ರಾಣಗಳಿಗೆ ಧಾರೆ ಎರೆದಿದೆ. ಅಯೋಧ್ಯೆ ರಾಮಮಂದಿರ, ಕಾಶಿ ಕಾರಿಡಾಶರ್, ಕರ್ತಾರ್ ಪುರ ಕಾರಿಡಾರ್, ಈಗ ಮಹಾಕಾಲ ಲೋಕ್ (Mahakal Lok) ಉದ್ಘಾಟನೆಗೊಂಡಿದೆ. ಉಜ್ಜೈನಿ ಭಾರತದ ಹೆಮ್ಮೆಯ ಆಧ್ಯಾತ್ಮಿಕ ತಾಣಗಳಲ್ಲಿ ಒಂದು ಎಂದರು.

ದೇಶದ ಪುರಾತನ ದೇಗುಲಗಳನ್ನು ಹೆಸರಿಸುವಾಗ ಬೇಲೂರು ಹಳೇಬೀಡನ್ನು ಕೂಡ ಪ್ರಧಾನಿ ಮೋದಿ ನೆನಪಿಸಿದ್ರು. ಇನ್ನು, ಎರಡನೇ ಹಂತದ ಕಾರಿಡಾರ್‍ನಲ್ಲಿ ಸೃಷ್ಟಿಯ ರಹಸ್ಯ, ಗಣೇಶನ ಹುಟ್ಟು, ಸತಿ, ದಕ್ಷ ಮುಂತಾದವರ ಕಥೆಗಳನ್ನು ಚಿತ್ರಿಸಲು ಯೋಜನೆ ರೂಪಿಸಲಾಗಿದೆ. ಸದ್ಯ ಉಜ್ಜೈನಿಗೆ ವರ್ಷಕ್ಕೆ 1.5 ಕೋಟಿ ಭಕ್ತರು ಭೇಟಿ ಕೊಡುತ್ತಿದ್ದು, ಇದನ್ನು ದುಪ್ಪಟ್ಟುಗೊಳಿಸುವ ಗುರಿ ಹೊಂದಲಾಗಿದೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಯಲ್ಲಿ ರಸ್ತೆ ಮೇಲೆ ರಾಹುಲ್, ಡಿಕೆಶಿ ಪುಷ್-ಅಪ್ಸ್‌

ಮಹಾಕಾಲ್ ಲೋಕದ ವಿಶೇಷತೆಗಳು ಏನು..?: 856 ಕೋಟಿ ರೂ. ವೆಚ್ಚದ 2 ಹಂತದ ಯೋಜನೆ ಇದಾಗಿದೆ. 900 ಮೀ.ಗಿಂತ ಹೆಚ್ಚು ಉದ್ದದ ಕಾರಿಡಾರ್, 2 ಭವ್ಯ ಹೆಬ್ಬಾಗಿಲು – ನಂದಿದ್ವಾರ, ಪಿನಾಕಿದ್ವಾರವಿದೆ. 108 ಮರಳುಗಲ್ಲಿನ ಸಾಲಂಕೃತ ಸ್ತಂಭ, ಶಿವಪುರಾಣದಂತೆ 190 ಶಿವ ವಿಗ್ರಹ, ನಯನಮನೋಹರ ಶಿವಕಾರಂಜಿ, ಮಿಡ್ ವೇ ಜೋನ್, ಪಾರ್ಕ್ ಹಾಗೂ ಕಾರ್, ಬಸ್‍ಗಳಿಗಾಗಿ ಬಹು ಅಂತಸ್ತಿನ ಪಾರ್ಕಿಂಗ್ ಲಾಟ್ ಇದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *