ಚೆನ್ನೈ: ವಾರಣಾಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯದ (BHU) ಸಹಯೋಗದಲ್ಲಿ ವಿವಿಯ ಆಂಫಿಥಿಯೇಟರ್ ಮೈದಾನದಲ್ಲಿ ಶಿಕ್ಷಣ ಸಚಿವಾಲಯವು ಹಮ್ಮಿಕೊಂಡಿರುವ ಒಂದು ತಿಂಗಳ `ಕಾಶಿ-ತಮಿಳು ಸಂಗಮ’ (Kashi Tamil Sangamam) ಸಾಂಸ್ಕೃತಿಕ ಉತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಂದು ಚಾಲನೆ ನೀಡಿದ್ದಾರೆ.
In Varanasi, addressing the ‘Kashi-Tamil Sangamam.’ It is a wonderful confluence of India’s culture and heritage. https://t.co/ZX3WRhrxm9
— Narendra Modi (@narendramodi) November 19, 2022
Advertisement
51ಕ್ಕೂ ಹೆಚ್ಚು ಸಾಂಸ್ಕೃತಿಕ ಕಾರ್ಯಕ್ರಮಗಳ ಈ ಉತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ (Naredndra Modi) ಅವರೂ ಸಾಂಪ್ರದಾಯಿಕ ಉಡುಗೆಯಲ್ಲೇ ಆಗಮಿಸಿ ಗಮನ ಸೆಳೆದಿದ್ದಾರೆ. ಶ್ವೇತ ವರ್ಣದಲ್ಲಿ ಕಂಗೊಳಿಸುವ ಬಿಳಿಯ ಉಡುಪು ಧರಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಇದನ್ನೂ ಓದಿ: ಗುಜರಾತ್ ಮೂಲದ ಗಣಿ ಉದ್ಯಮಿಗೆ ಶಾಸಕನಿಂದ 9 ಕೋಟಿ ದೋಖಾ ಆರೋಪ
Advertisement
Kashi & Tamil Nadu both are sources of music, literature and art. Kashi’s tabla & Tamil Nadu’s Thannumai are famous. In Kashi, you’d get Banarasi saree & in Tamil Nadu you’d see kanjivaram silk which are known across the world: PM Modi at ‘Kashi Tamil Sangamam’ in UP’s Varanasi pic.twitter.com/QIfTvSjFKR
— ANI (@ANI) November 19, 2022
Advertisement
`ಕಾಶಿ-ತಮಿಳು ಸಂಗಮ’ ಕಾರ್ಯಕ್ರಮವು ತೀರ್ಥಯಾತ್ರಿಕರ ಪುಣ್ಯಸ್ಥಳ ಕಾಶಿ ಹಾಗೂ ತಮಿಳುನಾಡಿನ ಸಂಬಂಧವನ್ನು ಪುನರುಜ್ಜೀವನಗೊಳಿಸುವ ಹಾಗೂ ಕೇಂದ್ರ ಸರ್ಕಾರದ (Government Of India) `ಏಕ್ ಭಾರತ್ ಶ್ರೇಷ್ಠ ಭಾರತ್’ (Ek Bharat Shreshta Bharat) ಪರಿಕಲ್ಪನೆಯನ್ನು ಎತ್ತಿಹಿಡಿಯುವ ಗುರಿಯನ್ನೂ ಹೊಂದಿದೆ. ಸಮಾರಂಭದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ಮೋದಿ ಅವರಿಂದು `ತಿರುಕ್ಕುರಲ್ ಮತ್ತು ಕಾಶಿ ತಮಿಳು’ ಪುಸ್ತಕಗಳನ್ನು ಬಿಡುಗಡೆಗೊಳಿಸಿದರು. ಬಳಿಕ ತಮಿಳು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಇದನ್ನೂ ಓದಿ: ಆಶಿಕಾ ರಂಗನಾಥ್ ಕುಡಿದು ರಂಪಾಟ: ಚಿತ್ರದ ಮಾರ್ಕೆಟಿಂಗ್ ಟೀಮ್ ತಪ್ಪು ಎಂದ ಡೈರೆಕ್ಟರ್
Advertisement
Varanasi, UP | Kashi and Tamil Nadu both are timeless centres of culture and civilization. Both regions are the centres of the oldest languages, Sanskrit and Tamil: PM Modi at the ‘Kashi Tamil Sangamam’ pic.twitter.com/RaNCAHHlXR
— ANI (@ANI) November 19, 2022
ನಂತರ ತಮಿಳುನಾಡಿನ ಮಠ, ದೇವಾಲಯಗಳಿಗೆ ಗೌರವ ಸಲ್ಲಿಸಿ, ಗುರುಗಳಿಂದ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಉತ್ತರಪ್ರದೇಶದ ರಾಜ್ಯಪಾಲ ಆನಂದಿಬೆನ್ ಪಟೇಲ್, ಸಿಎಂ ಯೋಗಿ ಆದಿತ್ಯನಾಥ್ (Yogi Adityanath), ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮೊದಲಾದವರು ಉಪಸ್ಥಿತರಿದ್ದರು.
ಈ ಉತ್ಸವದಲ್ಲಿ ಒಟ್ಟು 51 ಸಾಂಸ್ಕೃತಿಕ ಕಾರ್ಯಕ್ರಮಗಳಿರಲಿದ್ದು, ಶಿವ ಪುರಾಣ, ರಾಮಾಯಣ ಮತ್ತು ಮಹಾಭಾರತ ಪೌರಾಣಿಕ, ಐತಿಹಾಸಿಕ ನಾಟಕವನ್ನು ಆಧರಿಸಿದ ಬೊಂಬೆ ಪ್ರದರ್ಶನ ನಡೆಯಲಿದೆ. ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಿರುವ ಈ ಉತ್ಸವಕ್ಕೆ 2,500ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದಾರೆ.