ಹೊಸ ನಾಣ್ಯಗಳನ್ನು ಬಿಡುಗಡೆ ಮಾಡಿದ ಮೋದಿ

Public TV
1 Min Read
modi conie 1

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ‘ಐಕಾನಿಕ್ ವೀಕ್ ಸೆಲೆಬ್ರೇಷನ್ಸ್’ ಉದ್ಘಾಟಿಸಿ ಹೊಸ ನಾಣ್ಯಗಳನ್ನು ಬಿಡುಗಡೆ ಮಾಡಿದರು.

ದೆಹಲಿಯ ವಿಜ್ಞಾನ ಭವನದಲ್ಲಿ ಸೋಮವಾರ ಹಣಕಾಸು ಸಚಿವಾಲಯ ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ‘ಐಕಾನಿಕ್ ವೀಕ್ ಸೆಲೆಬ್ರೇಷನ್ಸ್’ ಮೋದಿ ಅವರು ಉದ್ಘಾಟಿಸಿದರು. ಈ ವೇಳೆ ಅವರು, 21ನೇ ಶತಮಾನದ ಭಾರತವು ಜನಕೇಂದ್ರಿತ ಆಡಳಿತದ ವಿಧಾನದೊಂದಿಗೆ ಮುನ್ನಡೆಯುತ್ತಿದೆ ಎಂದು ಸಂತೋಷ ವ್ಯಕ್ತಪಡಿಸಿದರು. ಇದನ್ನೂ ಓದಿ: 21ನೇ ಶತಮಾನದ ಭಾರತವು ಜನಕೇಂದ್ರಿತ ಆಡಳಿತದೊಂದಿಗೆ ಮುನ್ನಡೆಯುತ್ತಿದೆ: ಮೋದಿ 

PM Modi launches new series of coins with AKAM design and 'visually impaired friendly' – Mysuru Today

ಈ ಸಂದರ್ಭದಲ್ಲಿ ಮೋದಿ ಅವರು 1, 2, 5, 10 ಮತ್ತು 20 ರೂ. ಮುಖಬೆಲೆಯ ನಾಣ್ಯಗಳನ್ನು ಬಿಡುಗಡೆ ಮಾಡಿದರು. ಇದು ‘ಆಜಾದಿ ಕಾ ಅಮೃತ್ ಮಹೋತ್ಸವ'(AKAM) ಸ್ಮರಣಾರ್ಥ ನಾಣ್ಯಗಳಲ್ಲ. ಇದು ಕೇವಲ ಚಲಾವಣೆಯ ಭಾಗವಾಗಿದೆ ಎಂದು ತಿಳಿಸಿದರು.

modi conie

ಈ ಹೊಸ ನಾಣ್ಯಗಳು ಅಮೃತ್ ಕಲ್ ಗುರಿಯನ್ನು ಜನರಿಗೆ ನೆನಪಿಸುತ್ತವೆ. ದೇಶದ ಅಭಿವೃದ್ಧಿಗೆ ಕೆಲಸ ಮಾಡಲು ಜನರನ್ನು ಪ್ರೇರೇಪಿಸುತ್ತವೆ. ಇದೇ ವೇಳೆ ಮೋದಿ ಅವರು 12 ಸರ್ಕಾರಿ ಯೋಜನೆಗಳ ಕ್ರೆಡಿಟ್-ಲಿಂಕ್ಡ್ ಪೋರ್ಟಲ್ ‘ಜನ್ ಸಮರ್ಥ್ ಪೋರ್ಟಲ್’ ಸಹ ಪ್ರಾರಂಭಿಸಿದರು. ಇದನ್ನೂ ಓದಿ:  ಸಿದ್ದರಾಮಯ್ಯ ಭೇಟಿ ಮಾಡಿ ಬೆಂಬಲ ಕೇಳುತ್ತೇನೆ, ನಮ್ಮಿಬ್ಬರ ನಡುವೆ ವಿಶ್ವಾಸ ಚೆನ್ನಾಗಿದೆ: ರೇವಣ್ಣ 

Share This Article
Leave a Comment

Leave a Reply

Your email address will not be published. Required fields are marked *