– ಭಾರತದಲ್ಲಿ ವಿಮಾನಯಾನ ಸಬಲೀಕರಣಕ್ಕೆ ಸುಕನ್ಯಾ ಕಾರ್ಯಕ್ರಮಕ್ಕೆ ಚಾಲನೆ
ಬೆಂಗಳೂರು: ಭಾರತೀಯ ವಾಯುಯಾನ ಭವಿಷ್ಯ ಸುಧಾರಣೆಗೆ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಎರಡು ಮಹತ್ವದ ಬೋಯಿಂಗ್ ಉಪಕ್ರಮಗಳ ಘೋಷಣೆ ಮಾಡಿದ್ದಾರೆ.
Advertisement
ಭಾರತೀಯ ವಿಮಾನಯಾನದಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ ಬೋಯಿಂಗ್ ಸುಕನ್ಯಾ ಕಾರ್ಯಕ್ರಮ ಹಾಗೂ ಅಮೆರಿಕದ ಹೊರಗೆ ಪ್ರಥಮ ಬಾರಿಗೆ ಬೋಯಿಂಗ್ ಅತಿದೊಡ್ಡ ಏರೋಸ್ಪೇಸ್ ಎಂಜಿನಿಯರಿಂಗ್ ಸೌಲಭ್ಯ ಸಿಗುವಂತೆ ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿನಲ್ಲಿ (Bengaluru) ಬಿಐಇಟಿಸಿ ಕ್ಯಾಂಪಸ್ (Boeing India Engineering Technology Center) ಉದ್ಘಾಟಿಸಿದ್ದಾರೆ. ಇದನ್ನೂ ಓದಿ: Ram Mandir: ಮೈಸೂರಿನ ಶಿಲ್ಪಿ ಕೆತ್ತಿರುವ ರಾಮಲಲ್ಲಾ ವಿಗ್ರಹ ಹೇಗಿದೆ ನೋಡಿ – Photos
Advertisement
Advertisement
ಇದರಿಂದ ಭಾರತದ ಅಂತರಿಕ್ಷಯಾನ ಮತ್ತು ರಕ್ಷಣಾ ಉದ್ಯಮವನ್ನು ಗಣನೀಯವಾಗಿ ಅಭಿವೃದ್ಧಿ ಸಾಧ್ಯವಾಗಲಿದೆ. ಬೋಯಿಂಗ್ ಸುಕನ್ಯಾ ಕಾರ್ಯಕ್ರಮವು ದೇಶದಲ್ಲಿ ಬೆಳೆಯುತ್ತಿರುವ ವಾಯುಯಾನ ಕ್ಷೇತ್ರಕ್ಕೆ ದೇಶದ ಹೆಣ್ಣು ಮಕ್ಕಳ ಪ್ರವೇಶವನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ. ಈ ಕಾರ್ಯಕ್ರಮ ಭಾರತದಾದ್ಯಂತ ಯುವತಿಯರು ಮತ್ತು ಮಹಿಳೆಯರಿಗೆ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ (STEM) ಕ್ಷೇತ್ರಗಳಲ್ಲಿ ನಿರ್ಣಾಯಕವಾದ ಕೌಶಲ್ಯಗಳನ್ನು ಹೊಂದಲು ಮತ್ತು ವಾಯುಯಾನ ವಲಯದಲ್ಲಿ ಉದ್ಯೋಗಿಗಳಿಗೆ ತರಬೇತಿ ನೀಡಲು ಅವಕಾಶಗಳನ್ನು ಒದಗಿಸುತ್ತದೆ.
Advertisement
ಯುವತಿಯರಿಗಾಗಿ ಪ್ರೋಗ್ರಾಂ 150 ಯೋಜಿತ ಸ್ಥಳಗಳಲ್ಲಿ ಸೈಮ್ ಲ್ಯಾಬ್‍ಗಳನ್ನು ನಿರ್ಮಿಸಲಾಗುತ್ತದೆ. ಇದು ಸ್ಟಮ್ ವೃತ್ತಿಯ ಬಗ್ಗೆ ಆಸಕ್ತಿಯನ್ನು ಹುಟ್ಟುಹಾಕಲು ಸಹಾಯ ಮಾಡುತ್ತವೆ. ಈ ಕಾರ್ಯಕ್ರಮ ಪೈಲಟ್ ಆಗಲು ತರಬೇತಿ ಪಡೆಯುತ್ತಿರುವ ಮಹಿಳೆಯರಿಗೆ ವಿದ್ಯಾರ್ಥಿವೇತನವನ್ನು ಸಹ ನೀಡುತ್ತದೆ. ವಿಮಾನ ತರಬೇತಿ ಪಠ್ಯಕ್ರಮ, ಪ್ರಮಾಣೀಕರಣಗಳನ್ನು ಪಡೆಯುವುದು, ಸಿಮ್ಯುಲೇಟರ್ ತರಬೇತಿಗಳಿಗೆ ಧನಸಹಾಯ ಮತ್ತು ವೃತ್ತಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ನೆರವಾಗಲು ಹೂಡಿಕೆಗಳನ್ನು ಮಾಡಲಾಗುತ್ತದೆ.
ಬೆಂಗಳೂರಿನ ಅತ್ಯಾಧುನಿಕ ಬೋಯಿಂಗ್ ಇಂಡಿಯಾ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕೇಂದ್ರ (ಬಿಐಇಟಿಸಿ) ಕ್ಯಾಂಪಸ್‍ಗೆ 1,600 ಕೋಟಿ ರೂ.ಗಳನ್ನು ಹೂಡಲಾಗಿದೆ. 43 ಎಕರೆಯಲ್ಲಿ ನಿರ್ಮಿಸಲ್ಪಟ್ಟ ಈ ಕ್ಯಾಂಪಸ್ ಯುಎಸ್‍ನ ಹೊರಗೆ ಬೋಯಿಂಗ್ ಮಾಡಿರುವ ಅತಿದೊಡ್ಡ ಹೂಡಿಕೆಯಾಗಿದೆ. ಮತ್ತು, ಜಾಗತಿಕ ಏರೋಸ್ಪೇಸ್ ಮತ್ತು ರಕ್ಷಣಾ ಉದ್ಯಮಗಳು ಮುಂದಿನ ಪೀಳಿಗೆಯ ಉತ್ಪನ್ನಗಳು ಮತ್ತು ಸೇವೆಗಳಿಗೆ ಭಾರತದೊಂದಿಗೆ ಪಾಲುದಾರಿಕೆ ಹೊಂದಲು ಅಡಿಪಾಯವಾಗಲಿದೆ.
ಬೋಯಿಂಗ್ ಅಧ್ಯಕ್ಷ ಮತ್ತು ಸಿಇಒ ಡೇವಿಡ್ ಎಲ್ ಮಾತನಾಡಿ, ಭಾರತಕ್ಕಾಗಿ ಪ್ರಧಾನಿ ಮೋದಿಯವರಿಗೆ ಇರುವ ಪರಿವರ್ತಕ ದೃಷ್ಟಿಕೋನಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಈ ಅವಕಾಶ ನಮಗೆ ಸಿಕ್ಕ ಗೌರವ ಎಂದು ಭಾವಿಸಿದ್ದೇವೆ. ಮತ್ತು ಅವರು ಭಾರತದಲ್ಲಿ ಏರೋಸ್ಪೇಸ್ ಆವಿಷ್ಕಾರವನ್ನು ಉತ್ತೇಜಿಸುವ ಸಲುವಾಗಿ ಬೋಯಿಂಗ್ ಕ್ಯಾಂಪಸ್‍ನ್ನು ಲೋಕಾರ್ಪಣೆ ಮಾಡಿದ್ದಾರೆ. ಅದಕ್ಕೆ ನಾವು ಕೃತಜ್ಞರಾಗಿರುತ್ತೇವೆ ಎಂದಿದ್ದಾರೆ.
ಬೋಯಿಂಗ್ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ಟೆಫನಿ ಪೋಪ್ ಮಾತನಾಡಿ ಪ್ರಧಾನಿ ಮೋದಿಯವರು ಖುದ್ದಾಗಿ ಬೋಯಿಂಗ್ ಸುಕನ್ಯಾ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದಕ್ಕಾಗಿ ನಾವು ರೋಮಾಂಚನಗೊಂಡಿದ್ದೇವೆ. ಒಟ್ಟಾಗಿ, ಭಾರತದಾದ್ಯಂತ ಮಹಿಳೆಯರು ವಾಯುಯಾನ ಕ್ಷೇತ್ರವನ್ನು ವೃತ್ತಿಯಾಗಿ ತೆಗೆದುಕೊಳ್ಳಲು ಮತ್ತು ಅದನ್ನು ಮುನ್ನಡೆಸುವ ಅವಕಾಶಗಳನ್ನು ಹೊಂದಲು ನಾವು ಅವರಿಗೆ ಬೆಂಬಲವಾಗಿರುತ್ತೇವೆ. ವರ್ಷಗಳುರುಳಿದಂತೆ, ಬೋಯಿಂಗ್ ಇಂಡಿಯಾ ತನ್ನ ಇಂಜಿನಿಯರಿಂಗ್ ಮತ್ತು R&D ಪ್ರತಿಭೆಗಳ ತಂಡಗಳನ್ನು ಬೆಳೆಸಿದೆ. ಅಮೆರಿಕದ ಹೊರಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಿಗಳಿಗೆ ಅವಕಾಶ ನೀಡಿದೆ. ಡಿಸೆಂಬರ್ 2023 ವೇಳೆಗೆ 6,000ಕ್ಕೂ ಹೆಚ್ಚು ಉದ್ಯೋಗಿಗಳಿದ್ದರು ಎಂದಿದ್ದಾರೆ.
ಭಾರತದಲ್ಲಿ ಬೋಯಿಂಗ್ ಸುಧಾರಿತ ತಂತ್ರಜ್ಞಾನಗಳೊಂದಿಗೆ ಭಾರತೀಯ ಗ್ರಾಹಕರಿಗೆ ಮೌಲ್ಯವನ್ನು ತಲುಪಿಸುವತ್ತ ಗಮನಹರಿಸಿದೆ. ಭಾರತೀಯ ಏರೋಸ್ಪೇಸ್ ವಲಯದಲ್ಲಿ, ಸುಸ್ಥಿರ ಮೌಲ್ಯವನ್ನು ಸೃಷ್ಟಿಸಲು, ಸ್ಥಳೀಯ ಪೂರೈಕೆದಾರರನ್ನು ಅಭಿವೃದ್ಧಿಪಡಿಸುವುದು ಮತ್ತು ಭಾರತೀಯ ಸಂಸ್ಥೆಗಳೊಂದಿಗೆ ಶೈಕ್ಷಣಿಕ ಮತ್ತು ಸಂಶೋಧನಾ ಸಹಯೋಗಗಳನ್ನು ರೂಪಿಸಲು ಬದ್ಧವಾಗಿದೆ. ಬೋಯಿಂಗ್ ಭಾರತದಲ್ಲಿನ 300+ ಸ್ಮಳೀಯ ಕಂಪನಿಗಳೊಂದಿಗೆ ತನ್ನ ಪೂರೈಕೆ ಸರಪಳಿಯನ್ನು ಬಲಪಡಿಸಿದೆ ಮತ್ತು ಅಪಾಚಿ ಹೆಲಿಕಾಪ್ಟರ್‍ಗಳಿಗೆ ಹಾಗೂ 737 ಕುಟುಂಬದ ವಿಮಾನಗಳಿಗೆ ಲಂಬವಾದ ಫಿನ್ ರಚನೆಗಳಿಗೆ ಫೂಸ್‍ಲೇಜ್‍ಗಳನ್ನು ತಯಾರಿಸಲು ಜಂಟಿ ಉದ್ಯಮವನ್ನು ಹೊಂದಿದೆ.
ಭಾರತದಿಂದ ವಾರ್ಷಿಕ ಸೋಸಿರ್ಂಗ್ 1 ಬಿಲಿಯನ್ ಡಾಲರಿಗಿಂತಲೂ ಹೆಚ್ಚಿದೆ. ಬೋಯಿಂಗ್, ಪ್ರಸ್ತುತ ಭಾರತದಲ್ಲಿ 6,000ಕ್ಕೂ ಹೆಚ್ಚಿನ ಜನರನ್ನು ನೇಮಿಸಿಕೊಂಡಿದೆ ಮತ್ತು 13,000ಕ್ಕೂ ಹೆಚ್ಚಿನ ಜನರು ಅದರ ಪೂರೈಕೆ ಸರಪಳಿ ಪಾಲುದಾರರೊಂದಿಗೆ ಕೆಲಸ ಮಾಡುತ್ತಿದ್ದಾರೆ. ಬೋಯಿಂಗ್ ಉದ್ಯೋಗಿ ಪ್ರಯತ್ನಗಳು ಮತ್ತು ದೇಶ-ವ್ಯಾಪಿ ಕೆಲಸಗಳು: ಸಮುದಾಯಗಳು ಮತ್ತು ಪೌರತ್ನ ಕಾರ್ಯಕ್ರಮಗಳಲ್ಲಿ ಬದಲಾವಣೆಯನ್ನು ಪ್ರೇರೇಪಿಸಲು ಮತ್ತು 1.3+ ಮಿಲಿಯನ್ ಜನರ ಮೇಲೆ ಪ್ರಭಾವ ಬೀರಲು ನೆರವಾಗುತ್ತಿವೆ. ಇನ್ನಷ್ಟು ತಿಳಿಯಲು www.boeing.co.in ವೆಬ್‍ಸೈಟ್ ಸಂಪರ್ಕಿಸಬಹುದಾಗಿದೆ.
ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯ ಮುಂತ್ರಿಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಬೋಯಿಂಗ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೈಘನಿ ಪೋಪ್ ಮತ್ತು ಇತರ ಹಿರಿಯ ಬೋಯಿಂಗ್ ಅಧಿಕಾರಿಗಳು ಉಪಸ್ಥಿತರಿದ್ದರು. ಇದನ್ನೂ ಓದಿ: ಅಯೋಧ್ಯೆ ಗರ್ಭಗುಡಿ ಪೀಠದಲ್ಲಿ ಬಾಲರಾಮ – ಮೊದಲ ಚಿತ್ರ ವೈರಲ್