ಒಂದೂವರೆ ವರ್ಷದಲ್ಲಿ ನಿರ್ಮಾಣವಾಯ್ತು ಬಿಜೆಪಿ ಹೈಟೆಕ್ ಕಚೇರಿ-ವಿಶೇಷತೆ ಏನು?

Public TV
1 Min Read
BJP’s new headquarters delhi 1

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಬಿಜೆಪಿ ಪಕ್ಷದ ನೂತನ ಕಚೇರಿಯನ್ನು ದೆಹಲಿಯಲ್ಲಿ ಉದ್ಘಾಟನೆ ಮಾಡಿದ್ದಾರೆ.

ನವದೆಹಲಿಯ ದೀನ್ ದಿಯಾಳ್ ಉಪಾಧ್ಯಾಯ ಮಾರ್ಗ್ 6ರಲ್ಲಿ ಬಿಜೆಪಿಯ ನೂತನ ಮುಖ್ಯ ಕಚೇರಿ ನಿರ್ಮಿಸಲಾಗಿದೆ. ಉದ್ಘಾಟನಾ ಸಮಾರಂಭದಲ್ಲಿ ಪಕ್ಷದ ಹಿರಿಯ ನಾಯಕರಾದ ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ್ ಜೋಷಿ, ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸೇರಿದಂತೆ ಪಕ್ಷ ಪ್ರಮುಖ ನಾಯಕರು ಭಾಗವಹಿಸಿದ್ದರು.

ಸುಪ್ರೀಂ ಕೋರ್ಟ್ ಸೂಚನೆಯಂತೆ ರಾಷ್ಟ್ರ ರಾಜಧಾನಿ ಕೇಂದ್ರ ಭಾಗದಲ್ಲಿರುವ ರಾಜಕೀಯ ಕಚೇರಿಗಳನ್ನು ಬೇರೆಡೆ ಸ್ಥಳಾಂತರಿಸಲಾಗುತ್ತಿದೆ. ಇದರಂತೆ ಬಿಜೆಪಿ ಪಕ್ಷ ತನ್ನ ಕೇಂದ್ರ ಕಚೇರಿಯನ್ನು ಬದಲಾಯಿಸಿದೆ. 2016 ಆಗಸ್ಟ್ ನಲ್ಲಿ ಪ್ರಧಾನಿ ಮೋದಿ ನೂತನ ಕಚೇರಿಗೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದರು. ಕೇವಲ 18 ತಿಂಗಳುಗಳಲ್ಲಿ ಭವ್ಯ ಕಚೇರಿ ನಿರ್ಮಾಣವಾಗಿದೆ.

BJP’s new headquarters delhi 2

ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ ಪಕ್ಷದ ಕಚೇರಿ ನಿರ್ಮಾಣದಲ್ಲಿ ಶ್ರಮವಹಿಸಿದ ಪಕ್ಷದ ಎಲ್ಲಾ ಕಾರ್ಯಕರ್ತರು ಹಾಗೂ ನಾಯಕರಿಗೆ ಧನ್ಯವಾದ ತಿಳಿಸಿದರು. ಅಲ್ಲದೇ ಪಕ್ಷದ ಬೆಳವಣಿಗೆಗೆ ತಮ್ಮ ಜೀವನವನ್ನು ಆರ್ಪಿಸಿದ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ, ಪಂಡಿತ್ ದೀನ್ ದಯಾಳ್ ಉಪಾಧ್ಯಾಯರನ್ನು ಸ್ಮರಿಸಿದರು.

BJP’s new headquarters delhi 3

ವಿಶೇಷತೆಗಳು: ಕಟ್ಟದದಲ್ಲಿ ಪ್ರಮುಖವಾಗಿ ಎರಡು ವಿಭಾಗಗಳಿವೆ. ಮೊದಲ ಭಾಗದಲ್ಲಿ 3 ಮಹಡಿ, ಎರಡನೇ ಭಾಗದಲ್ಲಿ 7 ಅಂತಸ್ತಿನ ಸಂಕೀರ್ಣ ಕಟ್ಟಡ ಹೊಂದಿದೆ. ಇಲ್ಲಿ ಪ್ರಮುಖವಾಗಿ ಪಕ್ಷ ಮುಖಂಡರು ಸಭೆ ನಡೆಸಲು ಬೇಕಾದ ಸಭಾಂಗಣ, ಸಭಾ ಕೊಠಡಿ ಮತ್ತು ಟಿವಿ ಸ್ಟುಡಿಯೋ ಹೊಂದಿದೆ. ಕಚೇರಿಯಲ್ಲಿ ಆಧುನಿಕ ಗ್ರಂಥಾಲಯವನ್ನು ನಿರ್ಮಾಣ ಮಾಡಲಾಗಿದೆ.

ಕೇಂದ್ರ ಕಚೇರಿಯಿಂದ ದೇಶದ ಎಲ್ಲಾ ರಾಜ್ಯಗಳ ಪಕ್ಷದ ಕಚೇರಿಗಳು ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆ ಕಲ್ಪಿಸುವ ಆಧುನಿಕ ತಂತ್ರಜ್ಞಾನ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಆಯಾ ರಾಜ್ಯಗಳ ಆರ್ಟ್ ಲೈಬ್ರೆರಿಯಲ್ಲಿ ಸಾಹಿತ್ಯ ಪುಸ್ತಕ ಹಾಗೂ ನೂತನ ಪತ್ರಿಕೆಗಳು ಹೊಂದಿರುತ್ತದೆ. ದೇಶದ ಎಲ್ಲಾ ರಾಜಕೀಯ ಪಕ್ಷಗಳ ಕೇಂದ್ರ ಕಚೇರಿಗಳಿಗಿಂತ ದೊಡ್ಡ ಕಚೇರಿಯನ್ನು ಬಿಜೆಪಿ ಈಗ ಹೊಂದಿದೆ. ಕೇಂದ್ರ ಕಚೇರಿಯೂ ಕಾರ್ಪೋರೆಟ್ ಕಂಪನಿಯ ಶೈಲಿಯಲ್ಲಿ ನಿರ್ಮಾಣವಾಗಿದೆ.

bjp new office delhi sanjay ahlawat.jpg.image .975.568

BJP’s new headquarters delhi 4

BJP’s new headquarters delhi 5

BJP’s new headquarters delhi 6

BJP’s new headquarters delhi 7

BJP’s new headquarters delhi 8

 

Share This Article
Leave a Comment

Leave a Reply

Your email address will not be published. Required fields are marked *