ನವದೆಹಲಿ: ಇನ್ನು ಮುಂದೆ ಸಿಂಗಾಪುರದಿಂದ (Singapore) ಭಾರತಕ್ಕೆ (India) ಸುಲಭವಾಗಿ ಹಣವನ್ನು ಕಳುಹಿಸಬಹುದು. ಯುನಿಫೈಂಡ್ ಪೇಮೆಂಟ್ಸ್ ಇಂಟರ್‌ಫೇಸ್ (UPI) ಮತ್ತು ಸಿಂಗಾಪುರದ ಪೇನೌ (PayNow) ಅಧಿಕೃತವಾಗಿ ಲಿಂಕ್ ಆಗಿದೆ.
ಪ್ರಧಾನಿ ನರೇಂದ್ರ ಮೋದಿ (PM Narendra Modi) ಮತ್ತು ಸಿಂಗಾಪುರದ ಪ್ರಧಾನಿ ಲೀ ಸೀನ್ ಲೂಂಗ್ ಅವರು ಆನ್‌ಲೈನ್‌ನಲ್ಲಿ ಜೊತೆಯಾಗಿ ಚಾಲನೆ ನೀಡಿದ್ದಾರೆ. ಸಿಂಗಾಪುರದ ಹಣಕಾಸು ಪ್ರಾಧಿಕಾರದ ವ್ಯವಸ್ಥಾಪಕ ನಿರ್ದೇಶಕ ರವಿ ಮೆನನ್ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ (Reserve Bank of India Governor Shaktikanta Das) ಅವರು ಪರಸ್ಪರ ಹಣವನ್ನು ಕಳುಹಿಸಿದ್ದಾರೆ.
Advertisement
ಈ ವೇಳೆ ಮಾತನಾಡಿದ ಮೋದಿ, UPI-PayNow ಸಂಪರ್ಕ ಉಭಯ ದೇಶಗಳ ನಾಗರಿಕರಿಗೆ ಸಿಕ್ಕಿದ ಉಡುಗೊರೆಯಾಗಿದೆ. ಇದಕ್ಕಾಗಿ ನಾನು ಭಾರತ ಮತ್ತು ಸಿಂಗಾಪುರದ ಜನತೆಯನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು.
Advertisement
A new milestone in India-Singapore relations as we link real-time digital payments systems. ???????? ???????? https://t.co/SubBSNyMO8
— Narendra Modi (@narendramodi) February 21, 2023
Advertisement
ಇಂದಿನ ಯುಗದಲ್ಲಿ, ತಂತ್ರಜ್ಞಾನವು ನಮ್ಮನ್ನು ಹಲವಾರು ರೀತಿಯಲ್ಲಿ ಪರಸ್ಪರ ಸಂಪರ್ಕಿಸುತ್ತದೆ. Fintech ಎನ್ನುವುದು ಜನರನ್ನು ಪರಸ್ಪರ ಸಂಪರ್ಕಿಸುವ ಕ್ಷೇತ್ರವಾಗಿದೆ. ಸಾಮಾನ್ಯವಾಗಿ ಇದು ಒಂದು ದೇಶದ ಗಡಿಯೊಳಗೆ ಮಾತ್ರ ಸೀಮಿತವಾಗಿರುತ್ತದೆ. ಆದರೆ ಇಂದಿನಿಂದ ಗಡಿಯಾಚೆಗಿನ ಫಿನ್‌ಟೆಕ್ ಸಂಪರ್ಕದ ಹೊಸ ಅಧ್ಯಾಯ ಪ್ರಾರಂಭವಾಗಿದೆ ಎಂದು ಮೋದಿ ಹೇಳಿದರು. ಇದನ್ನೂ ಓದಿ: ಕಾಡಾನೆ ರಕ್ಷಿಸಿದ ಬಂಡೀಪುರದ ಅರಣ್ಯ ಸಿಬ್ಬಂದಿ, ವೈದ್ಯರ ಕಾರ್ಯಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ
Advertisement
UPI ಮತ್ತು PayNow ಎಂದರೇನು?
ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (UPI) ಭಾರತದ ಮೊಬೈಲ್ ಆಧಾರಿತ ವೇಗದ ಪಾವತಿ ವ್ಯವಸ್ಥೆಯಾಗಿದೆ. ಇದು ಗ್ರಾಹಕರು ರಚಿಸಿದ ವರ್ಚುವಲ್ ಪಾವತಿ ವಿಳಾಸವನ್ನು (VPA) ಬಳಸಿಕೊಂಡು ಗ್ರಾಹಕರಿಗೆ ಹಣ ಪಾವತಿಗಳನ್ನು ತ್ವರಿತವಾಗಿ ಮಾಡಲು ಅನುಕೂಲ ಮಾಡಿಕೊಡುತ್ತದೆ.
PayNow ಸಿಂಗಾಪುರದಲ್ಲಿ ವೇಗದ ಪಾವತಿ ವ್ಯವಸ್ಥೆಯಾಗಿದೆ. ಇದು ಪೀರ್-ಟು-ಪೀರ್ ನಿಧಿ ವರ್ಗಾವಣೆ ಸೇವೆಯನ್ನು ಸಕ್ರಿಯಗೊಳಿಸುತ್ತದೆ. ಸಿಂಗಾಪುರದಲ್ಲಿ ಕಾರ್ಯನಿರ್ವಹಿಸುವ ಬ್ಯಾಂಕ್‌ಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳ (ಎನ್‌ಎಫ್‌ಐ) ಮೂಲಕ ಚಿಲ್ಲರೆ ಗ್ರಾಹಕರಿಗೆ ಲಭ್ಯವಿದೆ. ಇದು ಬಳಕೆದಾರರಿಗೆ ತಮ್ಮ ಮೊಬೈಲ್ ಸಂಖ್ಯೆ, ಸಿಂಗಾಪುರ್ ರಾಷ್ಟ್ರೀಯ ನೋಂದಣಿ ಗುರುತಿನ ಚೀಟಿ (NRIC)/ವಿದೇಶಿ ಗುರುತಿನ ಸಂಖ್ಯೆ (FIN) ಅಥವಾ VPA ಬಳಸಿಕೊಂಡು ಸಿಂಗಾಪುರದಲ್ಲಿ ಒಂದು ಬ್ಯಾಂಕ್ ಅಥವಾ ಇ-ವ್ಯಾಲೆಟ್ ಖಾತೆಯಿಂದ ಮತ್ತೊಂದು ಬ್ಯಾಂಕ್‌ಗೆ ತ್ವರಿತ ಹಣವನ್ನು ಕಳುಹಿಸಲು ಮತ್ತು ಸ್ವೀಕರಿಸಲು ಅನುಮತಿಸುತ್ತದೆ.
UPI-PayNow ಲಿಂಕ್ ಎಂದರೇನು?
ಎರಡು ದೇಶಗಳ ನಡುವಿನ ಚಿಲ್ಲರೆ ಪಾವತಿಗಳು ಸಾಮಾನ್ಯವಾಗಿ ಕಡಿಮೆ ಪಾರದರ್ಶಕವಾಗಿರುತ್ತವೆ ಮತ್ತು ಇದು ದೇಶೀಯ ವಹಿವಾಟುಗಳಿಗಿಂತ ಹೆಚ್ಚು ದುಬಾರಿ. UPI-PayNow ಸಂಪರ್ಕವು ಭಾರತ ಮತ್ತು ಸಿಂಗಾಪುರದ ನಡುವಿನ ಗಡಿಯಾಚೆಗಿನ ಹಣ ವ್ಯವಹಾರ ಪಾರದರ್ಶಕವಾಗಿರುತ್ತದೆ. ಅಷ್ಟೇ ಅಲ್ಲದೇ ಅಗ್ಗ ಮತ್ತು ವೇಗವಾಗಿ ಹಣವನ್ನು ಕಳುಹಿಸಬಹುದಾಗಿದೆ.
ಯಾರಿಗೆ ಲಾಭ?
ಸಿಂಗಾಪುರದಲ್ಲಿರುವ ಭಾರತೀಯ ವಲಸಿಗರಿಗೆ, ವಿಶೇಷವಾಗಿ ವಲಸೆ ಕಾರ್ಮಿಕರು ಮತ್ತು ವಿದ್ಯಾರ್ಥಿಗಳಿಗೆ ಲಾಭವಾಗಲಿದೆ. 2021ರ ಆರ್‌ಬಿಐ ಮಾಹಿತಿ ಪ್ರಕಾರ 2020-21ರಲ್ಲಿ ಭಾರತಕ್ಕೆ ರವಾನೆಯಾಗುವ ಒಟ್ಟು ಆಂತರಿಕ ಹಣದಲ್ಲಿ ಸಿಂಗಾಪುರದ ಪಾಲು ಶೇ.5.7 ರಷ್ಟಿದೆ.
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k