ಹಿಂದಿಯಲ್ಲಿ ಮಾತನಾಡಿದ ಜಪಾನ್ ಬಾಲಕನನ್ನು ನೋಡಿ ಮೋದಿ ರಿಯಾಕ್ಷನ್ ಹೇಗಿತ್ತು?

Public TV
2 Min Read
Quad summit

ಟೋಕಿಯೊ: ಕ್ವಾಡ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಎರಡು ದಿನಗಳ ಜಪಾನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಮವಾರ ಟೋಕಿಯೊದ ಹೋಟೆಲ್‍ನಲ್ಲಿ ಭಾರತೀಯ ವಲಸಿಗರು ಮತ್ತು ಜಪಾನ್ ನಾಗರಿಕರು ಅತ್ಯಂತ ಪ್ರೀತಿಯಿಂದ ಸ್ವಾಗತಿಸಿದರು. ಈ ವೇಳೆ ಅವರ ಜೊತೆಗಿನ ಸಂವಾದದಲ್ಲಿ ಜಪಾನಿನ ಮಕ್ಕಳೊಂದಿಗೆ ಅವರ ಸಂಭಾಷಣೆ ಎಲ್ಲರ ಗಮನ ಸೆಳೆಯಿತು.

ಅಲ್ಲಿನ ಮಕ್ಕಳೊಂದಿಗಿನ ಮೋದಿಯವರ ಸಂವಾದದ ವೀಡಿಯೋಗಳು ಟ್ವಿಟ್ಟರ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಜಪಾನಿನ ಬಾಲಕನೊಬ್ಬ ಪ್ರಧಾನಿಯವರೊಂದಿಗೆ ಹಿಂದಿಯಲ್ಲಿ ಮಾತನಾಡಿದನು. ಇದನ್ನು ಕೇಳಿ ಅವರು ಆಶ್ಚರ್ಯಚಕಿತರಾಗಿದ್ದು, ಹುಡುಗನಿಗೆ ವಾಹ್! ನೀವು ಹಿಂದಿಯನ್ನು ಎಲ್ಲಿಂದ ಕಲಿತಿದ್ದೀರಿ.? ನೀವು ಅದನ್ನು ಚೆನ್ನಾಗಿ ಮಾತನಾಡುತ್ತೀರಿ ಎಂದು ಬಾಲಕನ ಜೊತೆ ಅಕ್ಕರೆಯಿಂದ ಮಾತನಾಡ ತೊಡಗಿದರು. ಇದನ್ನೂ ಓದಿ: ರಾಜ್ಯದಲ್ಲಿ ಶಾಂತನಾದ ವರುಣ, ತಗ್ಗಿದ ಪ್ರವಾಹ – ಚಿಕ್ಕಬಳ್ಳಾಪುರದ ಡ್ಯಾಮ್‍ನಲ್ಲಿ ಯುವಕನ ಕೋತಿಯಾಟ

ಪ್ರಧಾನಿಯವರೊಂದಿಗೆ ಸಂವಾದ ನಡೆಸಿದ ಮಕ್ಕಳು ಅವರ ಆಟೋಗ್ರಾಫ್ ಸ್ವೀಕರಿಸಲು ಉತ್ಸುಕರಾಗಿದ್ದರು. ಪ್ರಧಾನಿ ಮೋದಿಯವರನ್ನು ಸ್ವಾಗತಿಸಲು ಭಾರತೀಯ ವಲಸಿಗರು ಭಾರತ್ ಮಾ ಕಾ ಶೇರ್ (ಭಾರತದ ಸಿಂಹ) ಎಂದು ಘೋಷಣೆ ಕೂಗಲಾರಂಭಿಸಿದರು. ಇದನ್ನೂ ಓದಿ: ಮದರಸಾದಲ್ಲಿ ಓದಿದ ಬಳಿಕ ಡಾಕ್ಟರ್, ಇಂಜಿನಿಯರ್ ಆಗಲು ಸಾಧ್ಯವಿಲ್ಲ: ಹಿಮಂತ್ ಬಿಸ್ವಾ ಶರ್ಮಾ

ಜಪಾನ್ ಅಧ್ಯಕ್ಷ ಫ್ಯೂಮಿಯೋ ಕಿಶಿಡಾ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನಿಂದ ಎರಡು ದಿನ ಜಪಾಸ್ ಪ್ರವಾಸ ಕೈಗೊಂಡಿದ್ದು, ಅವರು ಅಲ್ಲಿ ಕ್ವಾಡ್ ಶೃಂಗಸಭೆಯಲ್ಲಿ ಭಾಗಿಯಾಗಲಿದ್ದಾರೆ. ಭಾನುವಾರ ರಾತ್ರಿ ಭಾರತದಿಂದ ತೆರಳಿರುವ ಪ್ರಧಾನಿ ನಾಳೆ ಸಂಜೆವರೆಗೂ ಜಪಾನ್‍ನಲ್ಲಿ ನಡೆಯಲಿರುವ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಕ್ವಾಡ್ ಶೃಂಗ ಸಭೆಯಲ್ಲಿ ಎರಡು ದೇಶಗಳ ಉಪಕ್ರಮಗಳ ಬಗ್ಗೆ ಚರ್ಚೆಯಾಗಲಿದ್ದು, ಆಸಕ್ತಿಯ ವಿಷಯಗಳ ಬಗ್ಗೆ ಚರ್ಚಿಸಲು ಅವಕಾಶ ಇದೆ ಎಂದು ಪ್ರವಾಸಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಇದೇ ವೇಳೆ ಅಮೇರಿಕ ಅಧ್ಯಕ್ಷ ಜೋ ಬೈಡನ್ ಜೊತೆಗೂ ಮೋದಿ ಸಭೆ ನಡೆಸಲಿದ್ದು, ಭಾರತದ ಅಮೇರಿಕದ ನಡುವೆ ದ್ವಿ ಪಕ್ಷೀಯ ಮಾತುಕತೆ ನಡೆಯಲಿದೆ. ಈ ಮಾತುಕತೆಯಲ್ಲಿ ಸಮಕಾಲಿಮ ಜಾಗತಿಕ ಸಮಸ್ಯೆಗಳ ಬಗ್ಗೆ ಸಮಾಲೋಚನೆ ನಡೆಯಲಿದೆ.

Share This Article
Leave a Comment

Leave a Reply

Your email address will not be published. Required fields are marked *