– ನನಗೇ ಟಿಕೆಟ್ ಕೊಡ್ತಾರೆ ಅಂತಾ ಭಾವಿಸಿದ್ದೇನೆ ಎಂದ ಸಂಸದೆ
– ಸಚ್ಚಿದಾನಂದ, ರಾಕ್‌ಲೈನ್ ವೆಂಕಟೇಶ್, ದರ್ಶನ್ ಜೊತೆ ಸುಮಲತಾ ಸಭೆ
ಬೆಂಗಳೂರು: ಮೋದಿ ಅವರು ನನ್ನ ಪರವಾಗಿ ಕೆಲಸ ಮಾಡಿದ್ದಾರೆ. ಹಾಗಾಗಿ ಬೇರೆ ಯಾರಿಗೋ ಟಿಕೆಟ್ ಕೊಡ್ತಾರೆ ಅಂತ ಬಾವಿಸೋಕಾಗಲ್ಲ ಎಂದು ಸಂಸದೆ ಸುಮಲತಾ (Sumalatha) ಹೇಳಿದರು.
Advertisement
ನಗರದಲ್ಲಿ ಆಪ್ತರು ಹಾಗೂ ಕಾರ್ಯಕರ್ತರ ಜೊತೆ ಸಭೆ ನಡೆಸಿ ಬಳಿಕ ಮಾತನಾಡಿದ ಸುಮಲತಾ ಅವರು, ಬೆಂಬಲಿಗರ ಸಭೆ ನಡೆಸಿದ್ದೇವೆ. 5 ವರ್ಷಗಳ ಜರ್ನಿ ಮುಕ್ತಾಯ ಆಗ್ತಿದೆ. 5 ವರ್ಷಗಳ ನೆನಪುಗಳ ಬಗ್ಗೆ ಚರ್ಚೆ ಆಗಿದೆ. ಮುಂದಿನ ಲೋಕಸಭಾ ಚುನಾವಣೆಯನ್ನ ಯಾವ ರೀತಿ ನೋಡ್ತಾರೆ ಎಂಬುದು ಚರ್ಚೆ ಆಯ್ತು. ಸೋಶಿಯಲ್ ಮೀಡಿಯಾದಲ್ಲಿ ಬೇರೆ ಚರ್ಚೆ ಆಗ್ತಿತ್ತು. ಅದರ ಬಗ್ಗೆ ಸಭೆಯಲ್ಲಿ ಚರ್ಚೆ ಆಯ್ತು. ದರ್ಶನ್ ಅವರು ಕೂಡ ಸಭೆಯಲ್ಲಿ ಮಾತಾಡಿದ್ದಾರೆ. ಅವರು ಕೂಡ ನಮ್ಮ ಜೊತೆ ಇದ್ದು ದುಡಿದಿದ್ದವರು. ಎಲ್ಲರೂ ಜೊತೆಗೆ ಹೋಗೋಣ ಅಂತಾ ದರ್ಶನ್ ಮಾತಾಡಿದ್ದಾರೆ ಸಭೆಯಲ್ಲಿ ಎಂದು ತಿಳಿಸಿದರು. ಇದನ್ನೂ ಓದಿ: ದಲಿತರನ್ನು ಯಾಮಾರಿಸುತ್ತಿರುವ ಸಿಎಂ ಸಿದ್ದರಾಮಯ್ಯ ಬಹಿರಂಗ ಕ್ಷಮೆ ಕೇಳ್ಬೇಕು: ಮುನಿಸ್ವಾಮಿ
Advertisement
Advertisement
ಸಚ್ಚಿದಾನಂದ ಸಂಧಾನ ವಿಚಾರ ಚರ್ಚೆ ಆಗ್ತಿರುವ ಬಗ್ಗೆ ಗೊತ್ತಿಲ್ಲ. ನಾವೆಲ್ಲ ಒಟ್ಟಾಗಿ ಇದ್ದೇವೆ. ಬೇರೆ ಆಗಿದ್ದೇವೆ ಅಂತಾ ಸಚ್ಚಿನೂ ಹೇಳಿಲ್ಲ, ನಾನು ಹೇಳಿಲ್ಲ. ಈ ಬಗ್ಗೆ ಗೊಂದಲ ಬೇಡ. ನಮ್ಮ ಜೊತೆನೆ ಇದ್ದಾರೆ. ಬಿಜೆಪಿಯಿಂದ ನಿಂತುಕೊಳ್ಳಿ ಅಂತಾ ಸಭೆಯಲ್ಲಿ ಬೆಂಬಲಿಗರು, ಆಪ್ತರು ಹೇಳಿದ್ದಾರೆ. ಪ್ರೋತ್ಸಾಹಕರವಾದ ಮಾತುಗಳನ್ನ ಆಡಿ ಕಳಿಸಿದ್ದಾರೆ. ಮಂಡ್ಯದಲ್ಲಿ ಪಕ್ಷವನ್ನ ಸ್ಟ್ರಾಂಗ್ ಮಾಡೋಣ ಅಂತಾ ಬೆಂಬಲಿಗರು ಹೇಳಿದ್ದಾರೆ. ಮಂಡ್ಯದಲ್ಲಿ ಬಿಜೆಪಿ ಸ್ಟ್ರಾಂಗ್ ಮಾಡಬೇಕು ಅಂತಾ ಬಿಜೆಪಿ ಪಕ್ಷದ ಶಾಸಕರಲ್ಲಿ ಇದೇ ಎಂದು ಹೇಳಿದರು.
Advertisement
ನಾನು ಪಕ್ಷೇತರವಾಗಿ ನಿಲ್ಲೋ ಬಗ್ಗೆ ಇನ್ನೂ ಆಲೋಚನೆ ಮಾಡಿಲ್ಲ. ಆದರೆ ಬೆಂಬಲಿಗರು, ಆಪ್ತರು ಮಂಡ್ಯ ಬಿಟ್ಟು ಹೋಗಬೇಡಿ ಎನ್ನುತ್ತಿದ್ದಾರೆ. ಒಂದು ತಿಂಗಳು ಅಷ್ಟೇ ಟೈಂ ಇದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಬಿಜೆಪಿಯವರು ಸೂಕ್ತ ಸಮಯದಲ್ಲಿ ಅನೌನ್ಸ್ ಮಾಡ್ತಾರೆ. ಪಾಸಿಟಿವ್ ಆಗಿ ಅನೌನ್ಸ್ ಇರುತ್ತೆ ಅಂತಾ ನಾನು ಅಂದುಕೊಂಡಿದ್ದೇನೆ ಎಂದು ಆಶಯ ವ್ಯಕ್ತಪಡಿಸಿದರು. ಇದನ್ನೂ ಓದಿ: ಈಗ ನಡೆಯುವುದು ಗ್ಯಾರಂಟಿ ಬೇಕಾ? ಬೇಡವಾ? ಎನ್ನುವ ಚುನಾವಣೆ: ಹೆಚ್.ಸಿ.ಬಾಲಕೃಷ್ಣ
ಬೆಂಬಲಿಗರ ಅಭಿಪ್ರಾಯವನ್ನ ಹೈಕಮಾಂಡ್ ಗಮನಕ್ಕೆ ತರುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿ, ನನ್ನ ಕಡೆಯಿಂದ ಅವರ ಅಭಿಪ್ರಾಯ ಕಳಿಸುತ್ತೇನೆ. ಇದು ಗೊತ್ತಾಗೇ ಗೊತ್ತಾಗುತ್ತೆ. ಇಲ್ಲಿ ಎಲ್ಲಾ ಪಕ್ಷದವರು ಬಂದಿದ್ದಾರೆ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಅವರು ಎಲ್ಲರೂ ಇದ್ದಾರೆ. ಅವರ ಅಭಿಪ್ರಾಯ ತಿಳಿಸಿದ್ದಾರೆ. ಟಿಕೆಟ್ ಜೆಡಿಎಸ್ ಪಾಲಾಗುವ ವಿಚಾರದ ಬಗ್ಗೆ ನಾನು ಆಲೋಚನೆ ಮಾಡಿಲ್ಲ. ಪಾಸಿಟಿವ್ ಆಗಿ ಇದೆ. ಅವರು ಮಂಡ್ಯ ಬಗ್ಗೆ ಮಾತ್ರ ಯೋಚನೆ ಮಾಡ್ತಿಲ್ಲ. ರಾಜ್ಯದ ಆಲೋಚನೆ ಮಾಡ್ತಾರೆ. ನಾನು ಮಂಡ್ಯ ಬಗ್ಗೆ ಮಾತ್ರ ಆಲೋಚನೆ ಮಾಡ್ತೇನೆ. ಚುನಾವಣೆಗೆ ಸ್ಪರ್ಧೆ ಮಾಡುವ ತಯಾರಿಯ ಮೊದಲ ಸಭೆನೇ ಇದು. ಇಲ್ಲಿಂದಲೇ ತಯಾರಿ ಮಾಡುತ್ತೇವೆ ಎಂದು ತಿಳಿಸಿದರು.
ದೇವೇಗೌಡರಿಗೆ ಮಂಡ್ಯ ಬಿಟ್ಟುಕೊಡ್ತೀವಿ ಅಂತಾ ಬಿಜೆಪಿ ಹೇಳಿದೆಯಂತೆ ನಿಮ್ಮ ಗಮನಕ್ಕೆ ಬಂದಿದೆಯಾ ಎಂದಿದ್ದಕ್ಕೆ, ನನ್ನ ಗಮನಕ್ಕೆ ಬಂದಿಲ್ಲ. ತಾಲ್ಲೂಕು ಮಟ್ಟದಲ್ಲೂ ಕಾರ್ಯಕರ್ತರ ಸಭೆ ಮಾಡ್ತೇನೆ. ಸಭೆ ಮಾಡಿ ಅಭಿಪ್ರಾಯ ಸಂಗ್ರಹ ಮಾಡ್ತೇನೆ. ಟಿಕೆಟ್ ಜೆಡಿಎಸ್ ಪಾಲಾಗುವ ಬಗ್ಗೆ ಗೊತ್ತಿಲ್ಲ. ನಾನು ಪಕ್ಷ ಅಲ್ಲ. ಅವರಿಗೆ ಕೇವಲ ಮಂಡ್ಯ ಅಲ್ಲ. ಅವರು ಯಾವ ರೀತಿ ಮೈತ್ರಿ ಮಾಡಿಕೊಳ್ತಾರೋ ಗೊತ್ತಿಲ್ಲ. ಆದ್ರೆ ಅವರ ನಿರ್ಧಾರ ಏನಾಗಲಿದೆ ನೋಡಬೇಕು. ಈಗಾಗಲೇ ಮೈತ್ರಿ ಕೂಡ ಫಿಕ್ಸ್ ಇದೆ. 400+ ಸೀಟು ಗೆಲ್ಲುವ ಟಾರ್ಗೆಟ್ ಇದೆ. ಗೆಲ್ಲಬೇಕು ಅಂದಾಗ ಎಲ್ಲರ ನಿರ್ಧಾರ ಮುಖ್ಯ ಎಂದರು. ಇದನ್ನೂ ಓದಿ: ರಾಜ್ಯಕ್ಕೆ ಆದ ಅನ್ಯಾಯ ಕೇಳಿದ್ರೆ ಗುಂಡಿಕ್ಕಿ ಅಂತಾರೆ, ನಾಡಿಗೋಸ್ಕರ ನನ್ನ ದೇಹ ಕೊಡಲು ಸಿದ್ಧ: ಡಿ.ಕೆ.ಸುರೇಶ್
ಈ ಸಭೆ ನಡೆದಿದ್ದು ಹೈಕಮಾಂಡ್ ಗಮನಕ್ಕೆ ಬಂದೇ ಬರಲಿದೆ. ಎಲ್ಲರ ಮುಂದೆ ನಡೆದಿರೋ ಸಭೆ. ನನಗೇ ಟಿಕೆಟ್ ಕೊಡ್ತಾರೆ ಅಂತ ಭಾವಿಸಿದ್ದೇನೆ. ಮೋದಿ ಅವರು ನನ್ನ ಪರವಾಗಿ ಕೆಲಸ ಮಾಡಿದ್ದಾರೆ. ಹಾಗಾಗಿ ಬೇರೆ ಯಾರಿಗೋ ಟಿಕೆಟ್ ಕೊಡ್ತಾರೆ ಅಂತ ಭಾವಿಸೋಕಾಗಲ್ಲ. ಕುಮಾರಸ್ವಾಮಿ ಅವರು ಸ್ಪರ್ಧೆ ಮಾಡ್ತೀನಿ ಅಂತ ಎಲ್ಲೂ ಹೇಳಿಲ್ಲ. ಸೀಟ್ ನೆಗೋಸೇಶಿಯನ್ ನಡೆಯುತ್ತಿದೆ. ಏನಾಗಲಿದೆ ನೋಡೋಣ ಎಂದು ಮಾತನಾಡಿದರು.
ಟಿಕೆಟ್ ಕೊಡೋದು, ಬಿಡೋದು ಒಮ್ಮೆಲೆ ಆಗಲ್ಲ. ಪಾಸಿಟಿವ್ ಆಗೋ ರೀತಿ ನೋಡಿದ್ರೆ ಆಶೀರ್ವಾದ ಮಾಡಿದ್ದಾರೆ. ಮಂಡ್ಯದಿಂದ ಯಾರೂ ಬಿಜೆಪಿಯಿಂದ ಗೆದ್ದು ಹೋಗಿಲ್ಲ. ಹಾಗಾಗಿ ಬೆಂಬಲ ನೀಡಿದ್ದಾರೆ. ಅಲಯನ್ಸ್ನಲ್ಲಿ ಇರುವಾಗ ಹೊಂದಾಣಿಕೆ ಮಾಡಿಕೊಂಡು ಹೋಗೋದು ಮುಖ್ಯ. ನಾನು ರಾಜಕೀಯಕ್ಕೆ ಬಂದಿರೋದು ಮಂಡ್ಯ ಜನತೆ ವಿಶ್ವಾಸ ಕಳೆದುಕೊಳ್ಳಲು ಅಲ್ಲ. ಆದ್ರೆ ಅಂಬರೀಶ್ ಅಂದ್ರೆ ಮಂಡ್ಯ ಅಂತ ಭಾರತದಲ್ಲೇ ಗುರುತಿಸಿಕೊಂಡಿದ್ದಾರೆ. ನಾನು ಬೆಂಗಳೂರು ಉತ್ತರದಲ್ಲಿ ಸ್ಪರ್ಧೆ ಮಾಡಬೇಕು ಅಂದ್ರೆ ಕೆಲವು ಕ್ಷಣ ಮಾತ್ರ. ಮಂಡ್ಯ ಬಿಟ್ಟು ಬರಲು ನನಗೆ ಇಷ್ಟ ಇಲ್ಲ ಎಂದು ಹೇಳಿದರು.