ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಮಹಿಳೆಯರಿಗೆ 33% ಮೀಸಲಾತಿ (Women Reservation Bill) ಜಾರಿಗೆ ತಂದಿದ್ದು, ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ನಡೆಗೆ ಕಂಗನಾ, ಇಶಾ ಗುಪ್ತಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನೂತನ ಲೋಕಸಭೆಯ ವಿಶೇಷ ಅಧಿವೇಶನದಲ್ಲಿ ಬಾಲಿವುಡ್ ನಟಿಯರಾದ ಕಂಗನಾ (Kangana Ranaut), ಇಶಾ ಗುಪ್ತಾ (Esha Gupta) ಭಾಗವಹಿಸಿದ್ದರು. ಈ ವೇಳೆ ಕಂಗನಾ ಮಾತನಾಡಿ, ಇಂದು ರಾಷ್ಟ್ರದ ಮಹಿಳೆಯರಿಗೆ ಐತಿಹಾಸಿಕ ದಿನವಾಗಿದೆ. ಹೊಸ ಸಂಸತ್ತಿನ ಮೊದಲ ಅಧಿವೇಶನವಾಗಿದ್ದು, ಇಡೀ ಅಧಿವೇಶನವು ಮಹಿಳಾ ಸಬಲೀಕರಣ ಮತ್ತು ಮಹಿಳೆಯರ ಉನ್ನತಿಗೆ ಮೀಸಲಾಗಿದೆ. ಇದರ ಶ್ರೇಯಸ್ಸು ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲಬೇಕು ಎಂದಿದ್ದಾರೆ.
#WATCH | On Women's Reservation Bill, actor Kangana Ranaut says, " This is a wonderful idea, this is all because of our honourable PM Modi and this govt and his (PM Modi) thoughtfulness towards the upliftment of women" pic.twitter.com/xrtFZBZkNW
— ANI (@ANI) September 19, 2023
ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದಲೂ ಮಹಿಳಾ ಸಬಲೀಕರಣಕ್ಕಾಗಿ ಸಾಕಷ್ಟು ಶ್ರಮಿಸಿದ್ದಾರೆ. ಸೇನೆ ಮತ್ತು ವಾಯುಪಡೆಯಲ್ಲಿ ಮಹಿಳೆಯರು ಸೇವೆ ಸಲ್ಲಿಸುತ್ತಿರುವುದನ್ನು ನಾವು ನೋಡುತ್ತೇವೆ. ಮಹಿಳೆಯರ ಪರವಾಗಿ ಮೀಸಲಾತಿಗೆ ಹೆಚ್ಚಿನ ಒತ್ತು ನೀಡಿದ್ದಾರೆ ಎಂದು ನರೇಂದ್ರ ಮೋದಿ ಅವರ ನಡೆಯನ್ನು ಕಂಗನಾ ಶ್ಲಾಘಿಸಿದ್ದಾರೆ. ಇದನ್ನೂ ಓದಿ: The Vaccine War ಸಿನಿಮಾ ನೋಡಿ ಹೊಗಳಿದ ಸುಧಾ ಮೂರ್ತಿ
ಇಶಾ ಗುಪ್ತಾ ಕೂಡ ಪ್ರತಿಕ್ರಿಯಿಸಿ, ಪಿಎಂ ಮೋದಿ ಅವರು ಮಾಡಿದ ಈ ಕೆಲಸ ಅದ್ಭುತ. ಇದು ಅತ್ಯಂತ ಪ್ರಗತಿಪರ ಕಲ್ಪನೆ. ಈ ಮೀಸಲಾತಿ ಮಸೂದೆಯು ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ನೀಡಿರುವುದು ನಮ್ಮ ದೇಶಕ್ಕೆ ಒಂದು ದೊಡ್ಡ ಹೆಜ್ಜೆ. ಪ್ರಧಾನಿ ಮೋದಿ ಅವರು ಈ ಬಗ್ಗೆ ಭರವಸೆ ನೀಡಿದರು ಮತ್ತು ಅದನ್ನು ಈಗ ಈಡೇರಿಸಿದ್ದಾರೆ ಎಂದು ನಟಿ ಮೆಚ್ಚುಗೆ ಸೂಚಿಸಿದ್ದಾರೆ.
Web Stories