ಇಸ್ರೇಲ್‌ ಜೊತೆ ಮೋದಿಗೆ ಉತ್ತಮ ಸಂಬಂಧವಿದೆ – ಕಾಂಗ್ರೆಸ್‌ನಿಂದ ಇವಿಎಂ-ಪೇಜರ್‌ ಅನುಮಾನ

Public TV
2 Min Read
Rashid Alvi Congress Leader

ನವದೆಹಲಿ: ಇಸ್ರೇಲ್‌ (Israel) ಪೇಜರ್‌ ಸ್ಫೋಟ (Pager Blast) ಮಾಡಿದಂತೆ ಇವಿಎಂ (EVM) ಅನ್ನು ಏನು ಬೇಕಾದರೂ ಮಾಡಬಹುದು ಎಂದು ಕಾಂಗ್ರೆಸ್ ನಾಯಕ ರಶೀದ್ ಅಲ್ವಿ (Rashid Alvi) ಅನುಮಾನ ವ್ಯಕ್ತಪಡಿಸಿದ್ದಾರೆ.

ಚುನಾವಣಾ ಆಯೋಗ ಮಹಾರಾಷ್ಟ್ರ ಮತ್ತು ಜಾರ್ಖಂಡ್‌ಗೆ ಚುನಾವಣಾ ದಿನಾಂಕವನ್ನು ಪ್ರಕಟ ಮಾಡುವ ಮೊದಲು ಮಾತನಾಡಿದ ಅವರು, ಇಸ್ರೇಲ್ ಪೇಜರ್‌ ಮತ್ತು ವಾಕಿಟಾಕಿ ಬಳಸಿ ಜನರನ್ನು ಕೊಲ್ಲಲು ಸಾಧ್ಯವಾದರೇ ಇವಿಎಂ ಅನ್ನು ಏನು ಬೇಕಾದರೂ ಮಾಡಬಹುದು. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಇಸ್ರೇಲ್ ಜೊತೆ ಉತ್ತಮ ಸಂಬಂಧ ಹೊಂದಿದ್ದಾರೆ ಎಂದು ಹೇಳಿದರು.

ಮಹಾರಾಷ್ಟ್ರದಲ್ಲಿ, ಪ್ರತಿಪಕ್ಷಗಳು ಪೇಪರ್ ಬ್ಯಾಲೆಟ್ ಮೂಲಕ ಮತ ಚಲಾಯಿಸುವಂತೆ ಒತ್ತಾಯಿಸಬೇಕು ಮತ್ತು ಮಹಾರಾಷ್ಟ್ರದಲ್ಲಿ (Maharashtra) ಬಿಜೆಪಿ ಸರ್ಕಾರ ಮತ್ತು ಚುನಾವಣಾ ಆಯೋಗ ಏನು ಬೇಕಾದರೂ ಮಾಡಬಹುದು ಎಂದು ಆರೋಪಿಸಿದರು.

ಇವಿಎಂನಲ್ಲಿ ಏನು ಬೇಕಾದರೂ ಆಡಬಹುದು. ಹೀಗಾಗಿ ಚುನಾವಣೆಗೂ ಮುನ್ನ ಬಿಜೆಪಿ ಈ ಆಟವನ್ನು ಆಡುತ್ತಿದೆ ಎಂದು ದೂರಿದರು.

ಚುನಾವಣಾ ಆಯೋಗವು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿಲ್ಲ ಮತ್ತು ಬಿಜೆಪಿಯ ಒತ್ತಡದಲ್ಲಿದೆ ಎಂದು ಜಾರ್ಖಂಡ್ ಮುಕ್ತಿ ಮೋರ್ಚಾ ಆರೋಪಿಸಿದೆ. ಇದನ್ನೂ ಓದಿ: ಚುನಾವಣೆ ಉಚಿತ ಭರವಸೆಗಳನ್ನು ನಿರ್ಬಂಧಿಸುವಂತೆ ಅರ್ಜಿ – ಕೇಂದ್ರ, ಆಯೋಗಕ್ಕೆ ಸುಪ್ರೀಂನಿಂದ ನೋಟಿಸ್‌

ತಳ್ಳಿ ಹಾಕಿದ ಆಯೋಗ:
ಎರಡು ರಾಜ್ಯಗಳ ಚುನಾವಣಾ ದಿನಾಂಕವನ್ನು ಪ್ರಕಟಿಸಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌, ಕ್ಯಾಲ್ಕುಲೇಟರ್‌ನಲ್ಲಿ ಬಳಸುವಂತೆ ಇವಿಎಂನಲ್ಲಿ ಸಿಂಗಲ್‌ ಬಳಕೆ ಮಾಡುವ ಬ್ಯಾಟರಿಯನ್ನು ಬಳಸಲಾಗುತ್ತದೆ ಹೊರತು ಮೊಬೈಲ್‌ ಬ್ಯಾಟರಿಗಳನ್ನು ಬಳಸಲಾಗುವುದಿಲ್ಲ. ಪೇಜರ್‌ಗಳನ್ನು ಸಂಪರ್ಕಿಸಬಹುದು. ಆದರೆ ಇವಿಎಂ ಸಂರ್ಪಕಿಸಲು ಸಾಧ್ಯವಿಲ್ಲ ಎಂದು ಹೇಳಿದರು.


ಇವಿಎಂಗಳು ಬ್ಯಾಟರಿ ಸೇರಿದಂತೆ ಮೂರು ಹಂತದ ಭದ್ರತೆಯನ್ನು ಹೊಂದಿವೆ. ಇವಿಎಂಗಳ ಮೊದಲ ಹಂತದ ಪರಿಶೀಲನೆಯು ಮತದಾನ ನಡೆಯುವ 5-6 ತಿಂಗಳ ಮೊದಲು ಪ್ರಾರಂಭವಾಗುತ್ತದೆ. ಮತದಾನ ನಡೆಯುವ 5-6 ದಿನಗಳ ಮೊದಲು ಇವಿಎಂ ಕಾರ್ಯಾರಂಭಗೊಳ್ಳುತ್ತದೆ. ಆ ದಿನ ಹೊಸ ಬ್ಯಾಟರಿಯನ್ನು ಸೇರಿಸಲಾಗುತ್ತದೆ. ಯಂತ್ರವನ್ನು ಸೀಲ್ ಮಾಡಿದ ನಂತರ, ರಾಜಕೀಯ ಪಕ್ಷಗಳ ಏಜೆಂಟ್‌ಗಳು ಇವಿಎಂ ಮತ್ತು ಬ್ಯಾಟರಿಗೆ ಸಹಿ ಹಾಕುತ್ತಾರೆ. ಇವಿಎಂಗಳನ್ನು ನಂತರ ಸ್ಟ್ರಾಂಗ್ ರೂಮ್‌ಗಳಿಗೆ ಸಾಗಿಸಲಾಗುತ್ತದೆ ಮತ್ತು ಏಜೆಂಟ್‌ಗಳ ಮುಂದೆ ಡಬಲ್ ಲಾಕ್ ಮಾಡಲಾಗುತ್ತದೆ. ಇಡೀ ಪ್ರಕ್ರಿಯೆಯನ್ನು ವೀಡಿಯೊಗ್ರಾಫ್ ಮಾಡಲಾಗುತ್ತದೆ ಎಂದು ವಿವರಿಸಿದರು.

 

Share This Article