– ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದ್ರೆ ವರ್ಷಕ್ಕೊಬ್ಬರು ಪ್ರಧಾನಿಯಾಗ್ತಾರೆ
– ಎಲ್ಲವನ್ನೂ ಉಚಿತವಾಗಿ ಕೊಟ್ಟರೆ ಯಾರು ಕೆಲಸ ಮಾಡ್ತಾರೆ ಎಂದ ಪ್ರಧಾನಿ
ದಾವಣರೆಗೆ: ಬಡವರಿಗೆ ತಲುಪಿಸಬೇಕಾದ ಯೋಜನೆಗಳು ಮತ್ತು ಎಸ್ಸಿ-ಎಸ್ಟಿ ಯೋಜನೆಯೇ ಕಾಂಗ್ರೆಸ್‌ನವರ ಭ್ರಷ್ಟಾಚಾರದ ಮೂಲವಾಗಿತ್ತು. ಕರ್ನಾಟಕದಲ್ಲಿಯೂ ಎಸ್ಸಿ-ಎಸ್ಟಿ ಸಮುದಾಯಗಳಿಗೆ (SC ST Community) ಸೇರಬೇಕಾದ 11,000 ಕೋಟಿ ರೂ.ಗಳನ್ನ ಕಾಂಗ್ರೆಸ್ ನುಂಗಿ ನೀರು ಕುಡಿದಿದೆ ಎಂದು ಪ್ರಧಾನಿ ಮೋದಿ (Narendra Modi) ಗಂಭೀರ ಆರೋಪ ಮಾಡಿದ್ದಾರೆ.
Advertisement
ದಾವಣಗೆರೆಯಲ್ಲಿಂದು (Davanagere) ನಡೆದ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಈ ಹಿಂದೆ ಕಾಂಗ್ರೆಸ್‌ನ ಮಾಜಿ ಪ್ರಧಾನಿಯೇ ಹೇಳ್ತಿದ್ದರು, 100 ಕೊಟ್ಟರೆ 15 ಪೈಸೆ ಮಾತ್ರ ಫಲಾನುಭವಿಗಳಿಗೆ ತಲುಪುತ್ತದೆ ಅಂತ. ಅಂದರೆ 85 ಪೈಸೆ ಯಾರು ಹೊಡೆಯುತ್ತಿದ್ದರು? ಬಡವರ ಯೋಜನೆಗಳು, ಎಸ್ಸಿ-ಎಸ್ಟಿ ಸಮುದಾಯಕ್ಕೆ ತಲುಪಿಸಬೇಕಾದ ಯೋಜನೆಗಳ ಹೆಸರಲ್ಲಿ ಸಾವಿರಾರು ಕೋಟಿ ರೂ. ಬಿಡುಗಡೆ ಮಾಡಿ ಕಾಂಗ್ರೆಸ್‌ನವರು (Congress) ಭ್ರಷ್ಟಾಚಾರ ಮಾಡುತಿದ್ದರು. ನಿಮ್ಮ ಮೋದಿ ಬಂದ ಬಳಿಕ ನೇರವಾಗಿ ಅವರವರ ಖಾತೆಗೆ ಹೋಗತೊಡಗಿತು ಎಂದು ಕಿಡಿ ಹೇಳಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ಗೆ ತನ್ನ ಸದಸ್ಯನ ಮಗಳನ್ನೇ ರಕ್ಷಣೆ ಮಾಡೋಕೆ ಆಗ್ಲಿಲ್ಲ: ನೇಹಾ ಹತ್ಯೆ ಖಂಡಿಸಿದ ಮೋದಿ
Advertisement
Advertisement
ಕರ್ನಾಟಕದಲ್ಲಿ ಸಿಎಂ-ಡಿಸಿಎಂ ಮುಸುಕಿನ ಗುದ್ದಾಟ ನಡೆದಿದೆ. ಇಬ್ಬರು ಪರಸ್ಪರ ಕಾಲೆಳೆಯುತ್ತಿದ್ದಾರೆಯೇ ಹೊರತು, ರಾಜ್ಯದ ಅಭಿವೃದ್ಧಿಗೆ ದುಡಿಯುತ್ತಿಲ್ಲ. ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ವರ್ಷಕ್ಕೆ ಒಬ್ಬೊಬ್ಬರು ಪ್ರಧಾನಿ ಆಗ್ತಾರೆ. ಆದ್ದರಿಂದ ಈ ಬಾರಿ ಯೋಚಿಸಿ ಮತ ಹಾಕಿ ಎಂದು ಸಲಹೆ ನೀಡಿದ್ದಾರೆ.
Advertisement
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಇವರು ರದ್ದು ಮಾಡಿದ್ದಾರೆ. ಇದರಿಂದ ದೇಶದ ಯುವಕರಿಗೆ ನಷ್ಟವಾಗಿದೆ. ನೀರಾವರಿ ಸೇರಿದಂತೆ ಎಲ್ಲಾ ಯೋಜನೆಯನ್ನು ರಾಜ್ಯ ಕಾಂಗ್ರೆಸ್ ಬಂದ್ ಮಾಡಿದೆ. ಬಸವಣ್ಣನವರ ಭೂಮಿಯಲ್ಲಿ ಕಾಂಗ್ರೆಸ್ ತಪ್ಪು ಮಾಡುತ್ತಿದೆ. ಜನತೆಗೆ ಘೋರ ಪಾಪ ಮಾಡಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಅಲ್ಲದೇ ನಿಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕೆ ಹಣ ಕೂಡಿಡುವ ಹಾಗೆ ಇಲ್ಲ. ಏಕೆಂದರೆ ಕಾಂಗ್ರೆಸ್ ಪಿತ್ರಾರ್ಜಿತ ಆಸ್ತಿ ತೆರಿಗೆ (55%) ಐಡಿಯಾದೊಂದಿಗೆ ಬರುತ್ತಿದೆ. ಅಲ್ಲದೇ ಎಲ್ಲವನ್ನೂ ಉಚಿತವಾಗಿ ಕೊಡಲು ಹೊರಟಿದೆ. ನೀವೇ ಯೋಚನೆ ಮಾಡಿ. ಎಲ್ಲವನ್ನೂ ಉಚಿತವಾಗಿ ಕೊಟ್ಟರೆ, ಯಾರಾದರೂ ಕೆಲಸ ಮಾಡುತ್ತಾರಾ? ಹಾಗಾಗಿ ಅಭಿವೃದ್ಧಿ ಬಯಸುವ ಜನರು ನಮ್ಮೊಂದಿಗೆ ನಿಲ್ಲಬೇಕು ಎಂದು ಕರೆ ಕೊಟ್ಟಿದ್ದಾರೆ.
ಇದೇ ವೇಳೆ ದಾವಣಗೆರೆ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಹಾಗೂ ಹಾವೇರಿಯಿಂದ ಬಸವರಾಜ್ ಬೊಮ್ಮಾಯಿ ಅವರಿಗೆ ಮತ ನೀಡಿ ಗೆಲ್ಲಿಸುವಂತೆ ಮೋದಿ ಮನವಿ ಮಾಡಿದರು. ಇದನ್ನೂ ಓದಿ: 10 ಸಿಕ್ಸರ್‌ನೊಂದಿಗೆ ಸ್ಫೋಟಕ ಶತಕ – ಆರ್‌ಸಿಬಿಗೆ ವಿಲ್ ಪವರ್; ಟೈಟಾನ್ಸ್ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ