ಅಹಮದಾಬಾದ್: ಗುಜರಾತ್ ಚುನಾವಣಾ ಪ್ರಚಾರದ ಕಾರ್ಯಕ್ರಮದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿದ ವಿಶೇಷ ಪ್ರಸಂಗ ನಡೆದಿದೆ.
ಮೋದಿ ಭಾಷಣ ನಿಲ್ಲಿಸಲು ಕಾರಣವಾಗಿದ್ದು ಆಜಾನ್(ನಮಾಜ್). ಬುಧವಾರ ನವ್ಸಾರಿಯ ಪ್ರಚಾರ ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಸಮೀಪದ ಮಸೀದಿಯಿಂದ ಆಜಾನ್(ನಮಾಜ್) ಧ್ವನಿ ಕೇಳಿತು. ತಕ್ಷಣವೇ ಪ್ರಧಾನಿ ಮೋದಿ ಕೆಲ ಕ್ಷಣಗಳ ಕಾಲ ತಮ್ಮ ಭಾಷಣವನ್ನು ನಿಲ್ಲಿಸಿ ಮೌನವಾದರು. ನಂತರ ಆಜಾನ್ ಮುಗಿದ ಬಳಿಕ ಮತ್ತೆ ಭಾಷಣ ಮುಂದುವರೆಸಿದರು.
Advertisement
Advertisement
ಪ್ರಧಾನಿ ಮೋದಿ ಅವರು ತಮ್ಮ ಭಾಷಣವನ್ನು ನಿಲ್ಲಿಸುತ್ತಿದ್ದಂತೆ ಸಭಿಕರಲ್ಲಿ ಕೆಲ ಕಾಲ ಗೊಂದಲ ಉಂಟಾಯಿತು. ಆದರೆ ಮೋದಿ ಅವರು ಆಜಾನ್ ಮುಗಿದ ಬಳಿಕ ಭಾಷಣ ಆರಂಭಿಸುತ್ತಿದಂತೆ ಎಲ್ಲ ಸಭಿಕರು ಚಪ್ಪಾಳೆ ತಟ್ಟುವ ಮೂಲಕ ಮೋದಿಯವರ ನಡೆಯನ್ನು ಸ್ವಾಗತಿಸಿದರು.
Advertisement
ಇದೇ ಮೊದಲಲ್ಲ: ಆಜಾನ್ ವೇಳೆ ಮೋದಿ ಅವರು ಭಾಷಣ ನಿಲ್ಲಿಸಿದ್ದು ಇದೇ ಮೊದಲಲ್ಲ. ಈ ಹಿಂದೆ ಪಶ್ಚಿಮ ಬಂಗಾಳದ ಖರಗ್‍ಪುರದಲ್ಲಿ ಭಾಷಣ ಮಾಡುವ ವೇಳೆ ಆಜಾನ್ ಧ್ವನಿ ಕೇಳಿಸಿದಾಗಲೂ ಪ್ರಧಾನಿ ತಮ್ಮ ಭಾಷಣವನ್ನು ನಿಲ್ಲಿಸಿ ಮೌನ ವಹಿಸಿದ್ದರು. ನಂತರ ಭಾಷಣ ಆರಂಭಿಸಿದ ಅವರು ಯಾರ ಪ್ರಾರ್ಥನೆಯನ್ನು ನಡುವೆ ಅಡ್ಡಿಪಡುಸುವುದು ನನಗೆ ಇಷ್ಟವಿಲ್ಲ. ಹಾಗಾಗಿ ಭಾಷಣವನ್ನು ನಡುವೆ ನಿಲ್ಲಿಸಬೇಕಾಯಿತು ಎಂದು ಹೇಳಿದ್ದರು.
Advertisement
ಭಾಷಣ ವೇಳೆ ಮತ್ತೊಂದು ಅಚ್ಚರಿ: ಪ್ರಧಾನಿ ಮೋದಿ ಭಾಷಣ ಮಾಡುವ ವೇಳೆ ಮತ್ತೊಂದು ಅಚ್ಚರಿ ಘಟನೆ ನಡೆಯಿತು. ಪ್ರಧಾನಿ ಮೋದಿಯಂತೆ ಬಟ್ಟೆತೊಟ್ಟಿದ್ದ ಪುಟ್ಟ ಪೋರನೊಬ್ಬ ವೇದಿಕೆ ಮೇಲೆ ಬಂದು ಪ್ರಧಾನಿಗಳಿಗೆ ಶುಭಾಶಯ ತಿಳಿಸಿದ. ಬಾಲಕನನ್ನು ಮಾತನಾಡಿಸಿದ ಪ್ರಧಾನಿ ಮೋದಿ ಬಾಲಕನ ಬಳಿ ಬಂದು ಶುಭ ಕೋರಿದರು.
ಕಳೆದ ಎರಡು ದಿನಗಳಿಂದ ಗುಜರಾತ್ ಚುನಾವಣೆಯ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಪ್ರಧಾನಿ ಮೋದಿ ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿಯನ್ನು ನಡೆಸುತ್ತಿದ್ದಾರೆ.
PM Narendra Modi pauses speech during Navsari rally yesterday on hearing the Azaan #GujaratElection2017 pic.twitter.com/MfwN4orIyH
— ANI (@ANI) November 30, 2017
Doesn’t my young friend look like someone? Have a look. pic.twitter.com/nkT9JJafgQ
— Narendra Modi (@narendramodi) November 29, 2017
કોંગ્રેસનું ચાલે તો ગરીબ માટે મીઠું અને મોંઘી સિગરેટ-દારૂ ઉપર સરખો GST રેટ લગાવે. અમને આ મંજૂર નથી. એમની લડાઈ અમીરો માટે, અમારી ગરીબો માટે. pic.twitter.com/WOGA2wgnYZ
— Narendra Modi (@narendramodi) November 29, 2017
Sharing my speech at the public meeting in Navsari. https://t.co/8ok2n6AuQN pic.twitter.com/khdpdVGuHt
— Narendra Modi (@narendramodi) November 29, 2017