– UPAಗಿಂತ NDA ಕಾಲದಲ್ಲೇ ಅಧಿಕ ಉದ್ಯೋಗ: ಕೇಂದ್ರ ಸಚಿವ ಮಾಂಡವಿಯಾ
ನವದೆಹಲಿ: ಯುಪಿಎ (UPA) ಅವಧಿಗಿಂತ ಎನ್ಡಿಎ (NDA) ಆಡಳಿತದಲ್ಲಿ 5 ಪಟ್ಟು ಅಧಿಕ ಉದ್ಯೋಗ ಸೃಷ್ಟಿಯಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
Advertisement
2014-15ರಲ್ಲಿ 47.15 ಕೋಟಿ ಇದ್ದ ಉದ್ಯೋಗಕ್ಕೆ ಹೋಲಿಸಿದರೆ 2023-24ರಲ್ಲಿ ಶೇ.36ರಷ್ಟು ಏರಿಕೆಯಾಗಿದ್ದು, ಎನ್ಡಿಎ ಅವಧಿಯಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಸುಧಾರಣೆ ಕಂಡುಬಂದಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಮನ್ಸೂಖ್ ಮಾಂಡವಿಯಾ ತಿಳಿಸಿದ್ದಾರೆ. ಇದನ್ನೂ ಓದಿ: ಬಾಂಗ್ಲಾ ಭಯೋತ್ಪಾದಕರು ಒಳನುಸುಳಲು BSF ಸಹಕಾರ: ದೀದಿ ಆರೋಪ
Advertisement
Advertisement
2004-2014ರ ನಡುವಿನ ಕಾಂಗ್ರೆಸ್ ನೇತೃತ್ವದ ಆಡಳಿತದೊಂದಿಗೆ ದತ್ತಾಂಶವನ್ನು ಹೋಲಿಸಿದ ಸಚಿವರು, ಯುಪಿಎ ಅಧಿಕಾರಾವಧಿಯಲ್ಲಿ ಭಾರತದಲ್ಲಿ ಉದ್ಯೋಗವು ಕೇವಲ 7 ಪ್ರತಿಶತದಷ್ಟು ಬೆಳೆದಿದೆ. 2.9 ಕೋಟಿ ಹೆಚ್ಚುವರಿ ಉದ್ಯೋಗ ಸೃಷ್ಟಿಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.
Advertisement
ಮೋದಿ ಸರ್ಕಾರದ ಅಡಿಯಲ್ಲಿ, 2014-24 ರ ನಡುವೆ 17.19 ಕೋಟಿ ಉದ್ಯೋಗಗಳು ಸೃಷ್ಟಿಯಾಗಿವೆ. ದೇಶದಲ್ಲಿ ಸುಮಾರು 4.6 ಕೋಟಿ ಉದ್ಯೋಗಗಳು ಇವೆ ಎಂದು ಮಾಂಡವಿಯಾ ಹೇಳಿದ್ದಾರೆ. ಇದನ್ನೂ ಓದಿ: ʼಇಂಡಿಯಾʼಗೆ ಬನ್ನಿ, ಬಾಗಿಲು ಸದಾ ತೆರೆದಿದೆ: ನಿತೀಶ್ಗೆ ಲಾಲೂ ಆಫರ್
ದೇಶದಲ್ಲಿ ಉದ್ಯೋಗಗಳನ್ನು ಸೃಷ್ಟಿಸಲು ಸರ್ಕಾರದ ಮೇಲೆ ಒತ್ತಡ ಹೇರುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವರು ನೀಡಿರುವ ಈ ಮಾಹಿತಿಯು ಮಹತ್ವದ್ದಾಗಿದೆ.