ನವದೆಹಲಿ: ದೇಶದ ಅತಿದೊಡ್ಡ ಡ್ರೋನ್ ಉತ್ಸವ `ಭಾರತ್ ಡ್ರೋನ್ ಮಹೋತ್ಸವ 2022’ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ.
ನಾಗರಿಕ ವಿಮಾನಯಾನ ಸಚಿವಾಲಯವು ಭಾರತೀಯ ಡ್ರೋನ್ ಫೆಡರೇಶನ್ (DFI) ಈವೆಂಟ್ ಸಹಭಾಗಿತ್ವದಲ್ಲಿ ದೆಹಲಿಯ ಪ್ರಗತಿ ಮೈದಾನದಲ್ಲಿ ಹಮ್ಮಿಕೊಂಡಿರುವ ಡ್ರೋನ್ ಉತ್ಸವದಲ್ಲಿ ಬೆಂಗಳೂರು ಡ್ರೋನ್ ಹಾರಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದ್ದಾರೆ. ಇದನ್ನೂ ಓದಿ: ಪ್ರಮುಖ ಸ್ಟಾರ್ಟ್ಅಪ್ ಕಂಪನಿಗಳಿಂದ 8 ಸಾವಿರ ಭಾರತೀಯ ಉದ್ಯೋಗಿಗಳು ವಜಾ
Advertisement
Steering the flight of ambitions and aspirations of 130 crore Indians!
Thanks to PM Sh. @narendramodi ji, mera desh badal raha hai, aage badh raha hai.#DroneFestival pic.twitter.com/OReXxeq2R0
— Gajendra Singh Shekhawat (@gssjodhpur) May 27, 2022
Advertisement
ಮೇ 27 ರಿಂದ ನಡೆಯುತ್ತಿದ್ದು, ಮೇ 28ಕ್ಕೆ ಮುಕ್ತಾಯವಾಗಲಿದೆ. ಈ ಡ್ರೋನ್ ಉತ್ಸವದಲ್ಲಿ ಬೆಂಗಳೂರು ಮೂಲದ ಫುಲ್‌ಸ್ಟಾಕ್ ಡ್ರೋನ್ ಟೆಕ್ನಾಲಜಿ ಕಂಪನಿ ಆಸ್ಟೆರಿಯಾ ಏರೋಸ್ಪೇಸ್ ಲಿಮಿಟೆಡ್ ಡ್ರೋನ್ ಭಾಗವಸಿದೆ.
Advertisement
ಈ ಉತ್ಸವದಲ್ಲಿ ಮೋದಿ ಡ್ರೋನ್‌ಗಳ ಹಾರಾಟದ ಪ್ರಾತ್ಯಕ್ಷಿಕೆ ವೀಕ್ಷಣೆ ಜೊತೆಗೆ, ಕಿಸಾನ್ ಡ್ರೋನ್ ಪೈಲಟ್‌ಗಳ ಜೊತೆಗೆ ಮಾತುಕತೆ ನಡೆಸಿದ್ದಾರೆ. ಇದನ್ನೂ ಓದಿ: ಇನ್ಫೋಸಿಸ್ ಸಿಇಒ ಸಂಬಳ ಭಾರೀ ಏರಿಕೆ – ಶೇ.88 ಹೆಚ್ಚಳ
Advertisement
ಈ ಕುರಿತು ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಈ ದಶಕದ ಅಂತ್ಯದೊಳಗೆ ಭಾರತವನ್ನು ಜಾಗತಿಕ ಡ್ರೋನ್ ಹಬ್ ಆಗಿ ಮಾಡುವ ಮಹತ್ವಾಕಾಂಕ್ಷೆ ಹೊಂದಿದೆ. ಭಾರತವನ್ನು ಡ್ರೋನ್ ಹಬ್ ಆಗಿ ಮಾಡಲು ಕೇಂದ್ರ ಸರ್ಕಾರ ಎಲ್ಲ ನೆರವು ನೀಡಲಿದೆ. ಡ್ರೋನ್ ಉದ್ಯಮಕ್ಕೆ ಕೇಂದ್ರ ಸರ್ಕಾರ ಸಂಪೂರ್ಣ ಬೆಂಬಲ ನೀಡುತ್ತದೆ ಎಂದಿದ್ದಾರೆ.
ದೇಶದಲ್ಲಿ ಡ್ರೋನ್ ಬಳಕೆಗೆ ಇದ್ದ ಅಡೆ ತಡೆಗಳನ್ನು ನಿವಾರಿಸಿದ್ದೇವೆ. ಇದರಿಂದ ಕೃಷಿ ಕ್ಷೇತ್ರದಲ್ಲೂ ಡ್ರೋನ್ ಬಳಕೆ ಮಾಡಲು ಸಾಧ್ಯವಾಗುತ್ತಿದೆ. ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಂಡರೆ ದೇಶದ ಅಭಿವೃದ್ಧಿಯ ವೇಗ ಮತ್ತಷ್ಟು ಹೆಚ್ಚಾಗಲಿದೆ ಎಂದು ಮೋದಿ ಹೇಳಿದ್ದಾರೆ. ಇದನ್ನೂ ಓದಿ: ಕೊಹ್ಲಿ ಬ್ಯಾಟ್‍ನಿಂದ ಶತಕ ನಿರೀಕ್ಷೆ – ಅಭಿಮಾನಿಗಳ ಎದೆಬಡಿತ ಹೆಚ್ಚಿಸಿದ RR Vs RCB Qualifier 2
ಉತ್ಸವದಲ್ಲಿ ಆಸ್ಟೆರಿಯಾ ತನ್ನ ಗಟ್ಟಿಮುಟ್ಟಾದ, ವಿಶ್ವಾಸಾರ್ಹ ಮತ್ತು ಕಾರ್ಯಕ್ಷಮತೆ ಆಧರಿತ ಡ್ರೋನ್‌ಗಳನ್ನು ಪ್ರದರ್ಶಿಸಿದೆ. ಭದ್ರತೆ, ನಿಗಾ, ಮೇಲ್ವಿಚಾರಣೆ ಮತ್ತು ತಪಾಸಣೆಗಾಗಿ ಈ ಡ್ರೋನ್‌ಗಳನ್ನು ಬಳಸಬಹುದಾಗಿದೆ. ತನ್ನ ಕ್ಲೌಡ್ ಆಧರಿತ ಡ್ರೋನ್ ಆಪರೇಶನ್‌ಗಳ ಪ್ಲಾಟ್‌ಫಾರಂ ಸ್ಕೈಡೆಕ್ ಅನ್ನೂ ಪ್ರದರ್ಶಿಸಲಾಗಿದೆ.