ವಂದೇ ಮೆಟ್ರೋ ಈಗ ‘ನಮೋ ಭಾರತ್ ರೈಲು’ – ಚಾಲನೆ ನೀಡಿದ ಮೋದಿ

Public TV
3 Min Read
vande metro renamed as namo Bharat rapid rail

ಅಹಮದಾಬಾದ್: ವಂದೇ ಮೆಟ್ರೋಗೆ (Vande Metro) ‘ನಮೋ ಭಾರತ್ ರಾಪಿಡ್ ರೈಲ್’ (Namo Bharat Rapid Rail) ಎಂದು ಮರುನಾಮಕರಣ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಇಂದು (ಸೆಪ್ಟೆಂಬರ್ 16) ಮೊದಲ ರೈಲಿಗೆ ಚಾಲನೆ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಜನ್ಮದಿನದ ಹಿಂದಿನ ದಿನವಾದ ಇಂದು (ಸೆಪ್ಟೆಂಬರ್ 16) ಗುಜರಾತ್‌ನಲ್ಲಿ (Gujarat) ದೇಶದ ಮೊಟ್ಟ ಮೊದಲ ‘ನಮೋ ಭಾರತ್ ರ‍್ಯಾಪಿಡ್ ರೈಲು’ ಸೇವೆಗೆ ಚಾಲನೆ ನೀಡಿದ್ದಾರೆ. ಈ ರೈಲು ಗುಜರಾತ್‌ನ ಕಚ್ ಜಿಲ್ಲೆಯಲ್ಲಿರುವ ಭುಜ್‌ನಿಂದ ಅಹಮದಾಬಾದ್ (Ahmedabad) ನಗರಕ್ಕೆ ಸಂಪರ್ಕವನ್ನು ಕಲ್ಪಿಸುತ್ತದೆ. ಇದನ್ನೂ ಓದಿ: ಬ್ರೇಕ್ ಫೇಲ್ ಆಗಿ ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿ – ಓರ್ವ ಸಾವು, ಮತ್ತೊಬ್ಬ ಗಂಭೀರ

ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಒಂದೇ ದಿನ ಸುಮಾರು 660 ಕೋಟಿ ರೂ. ಮೌಲ್ಯದ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಜಾರ್ಖಂಡ್, ಒಡಿಶಾ, ಬಿಹಾರ ಮತ್ತು ಉತ್ತರ ಪ್ರದೇಶ ಸಂಪರ್ಕಿಸುವ 6 ವಂದೇ ಭಾರತ್ ರೈಲುಗಳಿಗೆ ವರ್ಚುವಲ್ ಚಾಲನೆ ನೀಡಿದ್ದಾರೆ. ಇದನ್ನೂ ಓದಿ: Fifth And Final Call | ಮಾತುಕತೆಗಾಗಿ ಪ್ರತಿಭಟನಾನಿರತ ವೈದ್ಯರಿಗೆ ಅಂತಿಮ ಆಹ್ವಾನ ಕೊಟ್ಟ ದೀದಿ

ನಮೋ ಭಾರತ್ ರ‍್ಯಾಪಿಡ್ ರೈಲು ಪ್ರಮುಖ ನಿಲ್ದಾಣಗಳಾದ ಅಂಜಾರ್, ಗಾಂಧಿಧಾಮ್, ಭಚೌ, ಸಮಖಿಯಾಲಿ, ಹಲ್ವಾಡ್, ಧ್ರಂಗಾಧ್ರ, ವಿರಾಮಗಮ್, ಚಂದ್ಲೋಡಿಯಾ, ಸಬರಮತಿ ಮತ್ತು ಅಂತಿಮವಾಗಿ ಅಹಮದಾಬಾದ್‌ನ ಕಲುಪುರ್ ಸೇರಿದಂತೆ 9 ನಿಲ್ದಾಣಗಳಲ್ಲಿ ನಿಲ್ಲುತ್ತದೆ. ಸಾರ್ವಜನಿಕರಿಗೆ ಅಹ್ಮದಾಬಾದ್‌ನಿಂದ ಸೆಪ್ಟೆಂಬರ್ 17 ರಂದು ನಿಯಮಿತ ಸೇವೆ ಪ್ರಾರಂಭವಾಗಲಿದೆ.

Vande Metro

ನಮೋ ಭಾರತ್ ರ‍್ಯಾಪಿಡ್ ರೈಲಿನ ವಿಶೇಷತೆಗಳೇನು?
* ಅಹಮದಾಬಾದ್ -ಭುಜ್ ಸಂಚರಿಸುವ ಈ ರೈಲು ಒಟ್ಟು 9 ನಿಲ್ದಾಣಗಳಲ್ಲಿ ನಿಲ್ಲುತ್ತದೆ.
*ಗಂಟೆಗೆ ಗರಿಷ್ಠ 110 ಕಿಲೋ ಮೀಟರ್ ವೇಗದಲ್ಲಿ 360 ಕಿಲೋ ಮೀಟರ್ ದೂರವನ್ನು 5 ಗಂಟೆ 45 ನಿಮಿಷದಲ್ಲಿ ಕ್ರಮಿಸುತ್ತದೆ.
* 1,150 ಆಸನಗಳನ್ನು ಹೊಂದಿರುವುದಲ್ಲದೇ 2,058 ನಿಂತು ಪ್ರಯಾಣಿಸಬಹುದಾಗಿದೆ. ಕುಳಿತುಕೊಳ್ಳಲು ಮೃದು ಸೋಫಾಗಳನ್ನ ಅಳವಡಿಸಲಾಗಿದೆ.
* ಮೆಟ್ರೋ ಸಂಪೂರ್ಣ ಹವಾನಿಯಂತ್ರಿತವಾಗಿದೆ (ಎ.ಸಿ.)
* ಇದು ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನೇ ಹೋಲುತ್ತದೆಯಾದರೂ, ಉಪನಗರದ ಮೆಟ್ರೋ ವ್ಯವಸ್ಥೆಗಳ ವೈಶಿಷ್ಟ್ಯತೆಯನ್ನು ಒಳಗೊಂಡಿದೆ.
* ಎರಡೂ ತುದಿಗಳಲ್ಲಿ ಎಂಜಿನ್ ಮತ್ತು ಎರಡೂ ಬದಿಗಳಲ್ಲಿ ಸ್ವಯಂಚಾಲಿತ ಸ್ಲೈಡಿಂಗ್ ಬಾಗಿಲುಗಳನ್ನು ಒಳಗೊಂಡಿದೆ
* ಸಂಪೂರ್ಣ ಬುಕ್ಕಿಂಗ್ ಇಲ್ಲ, ಟಿಕೆಟ್ ಖರೀದಿಸಲು ಅವಕಾಶವಿದೆ. ಇದನ್ನೂ ಓದಿ: ಹೇಮಾ ಕಮಿಟಿಯಂತೆ ಸ್ಯಾಂಡಲ್‌ವುಡ್‌ನಲ್ಲಿ ನಟಿಯರ ರಕ್ಷಣೆಗೆ ಬರುತ್ತಿದೆ ಪಾಶ್ ಸಮಿತಿ

ನಮೋ ಭಾರತ್ ರ‍್ಯಾಪಿಡ್ ರೈಲಿನ ಸಮಯ ಹೇಗಿದೆ?
* ಭುಜ್‌ನಿಂದ ನಿರ್ಗಮನ: ಬೆಳಗ್ಗೆ 5:05 ಗಂಟೆ, ಅಹಮದಾಬಾದ್‌ಗೆ ಆಗಮನ: ಬೆಳಗ್ಗೆ 10:50 ಗಂಟೆ
* ಅಹಮದಾಬಾದ್‌ನಿಂದ  ನಿರ್ಗಮನ: ಸಂಜೆ 5:30, ಭುಜ್‌ಗೆ ಆಗಮನ: ರಾತ್ರಿ 11:20 ಗಂಟೆ

ರೈಲಿನ ಟಿಕೆಟ್ ದರ ಹೇಗೆ?
* ಕನಿಷ್ಠ ಟಿಕೆಟ್ ದರವು 30 ರೂ. ನಿಂದ ಪ್ರಾರಂಭವಾಗುತ್ತದೆ, ಜಿಎಸ್‌ಟಿ ಸೇರಿದಂತೆ, ನಿಖರವಾದ ದರಗಳನ್ನು ಇನ್ನೂ ದೃಢೀಕರಿಸಲಾಗಿಲ್ಲ.
* ಭುಜ್‌ನಿಂದ ಅಹಮದಾಬಾದ್‌ಗೆ ಏಕಮುಖ ಪ್ರಯಾಣಕ್ಕೆ ಜಿಎಸ್‌ಟಿ ಹೊರತುಪಡಿಸಿ 430 ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: ನವೀಕರಿಸಬಹುದಾದ ಇಂಧನ ವಲಯದಲ್ಲಿ ಕರ್ನಾಟಕಕ್ಕೆ ನಾಲ್ಕು ಪ್ರಶಸ್ತಿ

ರೈಲ್ವೇ ಸಚಿವಾಲಯದ ಪ್ರಕಾರ, ರೈಲು 1,150 ಪ್ರಯಾಣಿಕರಿಗೆ ಆಸನಗಳೊಂದಿಗೆ 12 ಕೋಚ್‌ಗಳನ್ನು ಹೊಂದಿದೆ. ಹಲವಾರು ನವೀನ ವೈಶಿಷ್ಟ್ಯಗಳನ್ನು ನೀಡುತ್ತದೆ. ಸಂಪೂರ್ಣ ಹವಾನಿಯಂತ್ರಿತ ಕ್ಯಾಬಿನ್‌ಗಳು ಮತ್ತು ಐಶಾರಾಮಿ ಆಸನಗಳನ್ನು ಹೊಂದಿದೆ. ಇದು ಇತರ ಮೆಟ್ರೋಗಳಿಗಿಂತ ಉತ್ತಮವಾಗಿದೆ ಎಂದು ತಿಳಿಸಿದೆ. ಇದನ್ನೂ ಓದಿ: 2030 ರ ವೇಳೆಗೆ 500 GW ಗ್ರೀನ್ ಎನರ್ಜಿ ಉತ್ಪಾದನೆ ಗುರಿ: ಮೋದಿ

Share This Article