ಧಾರವಾಡ: ಭಾರತದ ಪ್ರಜೆಗಳು ಪ್ರಧಾನಿ ಮೋದಿಗೆ ಮತ್ತೇ ಎರಡನೇ ಬಾರಿ ಪ್ರಧಾನಮಂತ್ರಿಯಾಗಲು ಬಹುಮತ ನೀಡಿದರು. ಇಂದು ಮೋದಿ ಮತ್ತೊಮ್ಮೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಈ ಹಿನ್ನೆಲೆ ಧಾರವಾಡದಲ್ಲಿ ಮೋದಿ ಅಭಿಮಾನಿಗಳು ವಿಶೇಷ ಅಭಿಮಾನವನ್ನು ತೋರ್ಪಡಿಸಿದ್ದಾರೆ.
ಧಾರವಾಡ ಮೂಲದ ಮಂಜುನಾಥ್ ಹಿರೇಮಠ್ ಎಂಬವರು ತಮ್ಮದೇ ರೀತಿಯಲ್ಲಿ ಮೋದಿ ಅವರ ಮೇಲಿನ ಅಭಿಮಾನ ವ್ಯಕ್ತಪಡಿಸಿದ್ದಾರೆ. ಮಂಜುನಾಥ್ ಕಳೆದ 10 ವರ್ಷಗಳಿಂದ ಮಣ್ಣಿನ ಪ್ರತಿಮೆಗಳನ್ನು ತಯಾರು ಮಾಡಿಕೊಂಡು ಬಂದಿದ್ದಾರೆ. ಈಗ ವಿಶೇಷವಾಗಿ ಮೋದಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಮೂರ್ತಿಯನ್ನು ಸಿದ್ಧಪಡಿಸಿದ್ದಾರೆ. ಆ ಪುಟಾಣಿ ಮೂರ್ತಿಯ ಕೈಯಲ್ಲಿ ಪ್ರಮಾಣವಚನದ ಪೇಪರ್ ಕೂಡಾ ಇರೋದು ವಿಶೇಷ.
Advertisement
Advertisement
ಸುಮಾರು 19 ಸೆಂಟಿ ಮೀಟರಿನ ಈ ಮೂರ್ತಿಯನ್ನು ತಯಾರಿಸಲು ಮಂಜುನಾಥ್ ಅವರಿಗೆ ಪ್ರೇರಣೆಯಾಗಿದ್ದು, ಮೋದಿ ಅವರ ಸ್ವಚ್ಛ ಭಾರತದ ಪರಿಕಲ್ಪನೆ. ಮೋದಿ ಅವರು ಕಸದಿಂದ ರಸ ಮಾಡಬೇಕು ಎನ್ನುವ ಮಾತನ್ನ ಮೆಚ್ಚಿರುವ ಮಂಜುನಾಥ್ ಈ ಮೂರ್ತಿ ರಚಿಸಿದ್ದಾರೆ.
Advertisement
ಧಾರವಾಡ ನಗರದ ಶಟ್ಟರ ಕಾಲೋನಿಯ ನಿವಾಸಿ ಶಿವಾಜಿ ತಳವಾರ ನಿವೃತ್ತ ಅಂಚೆ ಪೇದೆ ಮೋದಿ ಅವರ ಬಗ್ಗೆ ಕವನವನ್ನ ರಚಿಸಿದ್ದಾರೆ. ಭಾರತ ಮಾತೆಯ ಮಡಿಲಲ್ಲಿ ಹುಟ್ಟಿದ ಮಹಾನ್ ವ್ಯಕ್ತಿ ಮೋದಿ ಎಂಬ ಪದಗಳಲ್ಲಿ ವರ್ಣನೆ ಮಾಡಿರುವ ಇವರು, ಉಗ್ರರ ಬೇಟೆಯಾಡಿದ್ದು ಹಾಗೂ ರಕ್ಷಣಾ ಖಾತೆಯನ್ನ ಬಲಪಡಿಸಿದ್ದನ್ನು ಕವನದಲ್ಲಿ ಉಲ್ಲೇಖಿಸಿದ್ದಾರೆ.
Advertisement
ದೇಶದ ಪ್ರಧಾನಿಯಾಗಿ ಮತ್ತೆ ಅಧಿಕಾರ ಸ್ವೀಕಾರ ಮಾಡುತ್ತಿರೋ ನರೇಂದ್ರ ಮೋದಿ ಅವರಿಗೆ ಜನರು ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ತಮ್ಮದೇ ಶೈಲಿಯಲ್ಲಿ ಮೋದಿಗೆ ತಮ್ಮ ಪ್ರೀತಿಯನ್ನ ವ್ಯಕ್ತಪಡಿಸ್ತಿರೋದು ವಿಶೇಷ.