– ಕಾಂಗ್ರೆಸ್ ನಿಲುವೇನು..?
ನವದೆಹಲಿ: ಇಸ್ರೇಲ್‍ನಲ್ಲಿ (Isreal) ಮತ್ತೆ ರಕ್ತಚರಿತ್ರೆಯ ಯುದ್ಧ ಆರಂಭವಾಗಿದೆ. ಹಮಾಸ್ ಬಂಡುಕೋರರ ಪೈಶಾಚಿಕ ದಾಳಿಗೆ ಇಸ್ರೇಲ್ ತಲ್ಲಣಿಸಿದೆ. ಹಮಾಸ್ ಉಗ್ರರ ಹಾಗೂ ಇಸ್ರೇಲ್ ಯುದ್ಧದಲ್ಲಿ ಇಸ್ರೇಲ್ ಪರ ಭಾರತ ನಿಂತಿದೆ.
ಎರಡು ದೇಶದ ಮಧ್ಯೆ ಯುದ್ಧ ನಡೆದಾಗ ಸೈಲೆಂಟ್ ಆಗಿ ಜಾಣ ನಡೆ ಅನುಸರಿಸಿದ ಭಾರತ (India), ಇಸ್ರೇಲ್ ವಿಚಾರದಲ್ಲಿ ಮೃದುವಾಗಿದೆ. ಹಮಾಸ್ ಉಗ್ರರ (Hamas Terrorist) ಕೃತ್ಯವನ್ನು ಬಹಿರಂಗವಾಗಿ ಪ್ರಧಾನಿ ಮೋದಿ (Narendra Modi) ಖಂಡಿಸಿದ್ದಾರೆ. ಇಸ್ರೇಲ್ ಜೊತೆ ಭಾರತ ನಿಲ್ಲಲಿದೆ ಅಂತಾ ಸಂದೇಶ ರವಾನಿಸಿದ್ದಾರೆ. ಇದನ್ನೂ ಓದಿ: ಪ್ಯಾಲೆಸ್ಟೈನ್ ಬೆಂಬಲಿಸಿ ನಿರ್ಣಯ ಕೈಗೊಂಡ ಕಾಂಗ್ರೆಸ್
Advertisement
Advertisement
ಪ್ರಧಾನಿ ಮೋದಿಯ ಜೊತೆಗೆ ಇಡೀ ಭಾರತದ ಸೋಷಿಯಲ್ ಮೀಡಿಯಾದಲ್ಲಿ (Social Media) ಜನರಿಂದ ಹಮಾಸ್ ಉಗ್ರರ ಪೈಶಾಚಿಕ ರಕ್ಕಸ ವರ್ತನೆಗೆ ವಿರೋಧ ವ್ಯಕ್ತವಾಗಿದೆ. ಭಾರತೀಯರ ಟ್ವೀಟ್ ಮಹಾಮಳೆಗೆ ಇಸ್ರೇಲ್ ಕೂಡ ಭಾವುಕವಾಗಿದೆ. ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಇಸ್ರೇಲ್ ಜೊತೆ ನಿಲ್ಲೋಣ ಅನ್ನುವ ಸಂದೇಶವನ್ನು ಭಾರತೀಯರು ನೀಡಿದ್ದು, ಭಯೋತ್ಪಾದನೆಯ ಹಾಗೂ ಮತಾಂಧತೆಯ ವಿರುದ್ಧ ಹೋರಾಡುವಂತೆ ಕರೆ ನೀಡಲಾಗಿದೆ. ವಿ ಆರ್ ವಿತ್ ಇಸ್ರೇಲ್ ಕ್ಯಾಂಪೇನ್ ಮೂಲಕ ಭಾರತೀಯರಿಂದ ಇಸ್ರೇಲ್ ಪರ ಧ್ವನಿ ಎತ್ತಲಾಗಿದೆ. ಇದನ್ನೂ ಓದಿ: ಹಮಾಸ್ ವಿರುದ್ಧ ಫೀಲ್ಡ್‌ಗಿಳಿದ ಇಸ್ರೇಲ್‍ನ ಮಾಜಿ ಪ್ರಧಾನಿ
Advertisement
Advertisement
ಇತ್ತ ಭಾರತದ ಬೆಂಬಲ ನಡುವೆ ಕಾಂಗ್ರೆಸ್ (Congress) ಭಿನ್ನ ನಿಲುವು ತಾಳಿದೆ. ಯುದ್ಧವನ್ನು ವಿರೋಧಿಸುತ್ತಲೇ ಪ್ಯಾಲೆಸ್ತೇನ್ (Palestine) ಪರ ಬ್ಯಾಟಿಂಗ್ ಮಾಡಿದೆ. ಪ್ಯಾಲೆಸ್ತೇನಿ ಜನರ ಹಕ್ಕುಗಳ ಪರ ಸೋಮವಾರ ನಡೆದ ಸಿಡಬ್ಲ್ಯೂಸಿ ಸಭೆಯಲ್ಲಿ ಪಕ್ಷದ ನಿರ್ಧಾರ ಮಾಡಲಾಗಿದೆ. ಕದನ ವಿರಾಮದ ಜತೆಗೆ ಎರಡು ದೇಶಗಳ ನಡುವಿನ ಸಮಸ್ಯೆ ಇತ್ಯರ್ಥಕ್ಕೆ ಕೈ ನಾಯಕರು ಆಗ್ರಹಿಸಿದ್ದಾರೆ.
ಇಸ್ರೇಲ್ ಜನರ ಮೇಲಿನ ಕ್ರೂರ ದಾಳಿಯನ್ನು ಕಾಂಗ್ರೆಸ್ ಖಂಡಿಸುತ್ತದೆ. ಸಿಡಬ್ಲ್ಯೂಸಿ ಕದನ ವಿರಾಮಕ್ಕೆ ತಕ್ಷಣ ಕರೆ ನೀಡುತ್ತದೆ. ಪ್ರಸ್ತುತ ಸಂಘರ್ಷಕ್ಕೆ ಕಾರಣವಾದ ಸಮಸ್ಯೆಗಳು ಸೇರಿದಂತೆ ಎಲ್ಲಾ ಬಾಕಿ ಉಳಿದಿರುವ ವಿಷಯಗಳ ಬಗ್ಗೆ ಮಾತುಕತೆಗಳನ್ನು ಪ್ರಾರಂಭಿಸಬೇಕು. ಇಸ್ರೇಲಿಗಳ ರಾಷ್ಟ್ರೀಯ ಭದ್ರತೆಯ ಕಾಳಜಿಯನ್ನು ಖಾತ್ರಿಪಡಿಸುವ ಜೊತೆಗೆ ಪ್ಯಾಲೆಸ್ತೇನ್ ಜನರ ಕಾನೂನುಬದ್ಧ ಆಕಾಂಕ್ಷೆಗಳನ್ನು ಮಾತುಕತೆಯ ಮೂಲಕ ಈಡೇರಿಸಬೇಕು. ಭೂಮಿ, ಸ್ವ-ಸರ್ಕಾರ ಮತ್ತು ಘನತೆ, ಗೌರವದಿಂದ ಬದುಕಲು ಪ್ಯಾಲೆಸ್ತೇನಿಯನ್ ಜನರ ಹಕ್ಕುಗಳನ್ನು ಕಾಂಗ್ರೆಸ್ ಬೆಂಬಲಿಸುತ್ತದೆ ಎಂದಿದೆ.
Web Stories