ಸೋನಿಪತ್: ಹರಿಯಾಣ ವಿಧಾನಸಭಾ ಚುನಾವಣೆ ಪ್ರಚಾರದಲ್ಲಿ ಕರ್ನಾಟಕದ ಮುಡಾ ಪ್ರಕರಣದ (MUDA Scam) ಪ್ರಸ್ತಾಪವಾಗಿದೆ. ಸೋನಿಪತ್ನಲ್ಲಿ ನಡೆದ ಪ್ರಚಾರದಲ್ಲಿ ಮುಡಾ ವಿಚಾರವನ್ನು ಪ್ರಸ್ತಾಪಿಸಿದ ಪ್ರಧಾನಿ ನರೇಂದ್ರ ಮೋದಿ (Narendra Modi), ಸಿಎಂ ಸಿದ್ದರಾಮಯ್ಯ ವಿರುದ್ಧ ಹೈಕೋರ್ಟ್ ತನಿಖೆಗೆ ಆದೇಶಿಸಿದೆ, ಅವರ ವಿರುದ್ಧ ತನಿಖೆಯಾಗಲೇಬೇಕು ಎಂದು ಒತ್ತಾಯಿಸಿದ್ದಾರೆ.
Advertisement
ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ (Haryana Poll Rally) ಮಾತನಾಡಿದ ಅವರು, ಹೈಕಮಾಂಡ್ ಭ್ರಷ್ಟವಾದಾಗ ಕೆಳಗೆ ಇರುವವರಿಗೆ ಲೂಟಿ ಹೊಡೆಯಲು ಪರವಾನಿಗೆ ನೀಡಿದಂತಾಗಲಿದೆ. ಕಾಂಗ್ರೆಸ್ ಆಡಳಿತ ಮಾಡಿದ ಯಾವ ರಾಜ್ಯವೂ ಅಭಿವೃದ್ಧಿಯಾಗಿಲ್ಲ ಎಂದಿದ್ದಾರೆ. ಇದನ್ನೂ ಓದಿ: ತಿನಿಸುಗಳಲ್ಲಿ ಉಗುಳು, ಮೂತ್ರ ಬೆರಕೆ; ಆಹಾರ ಕೇಂದ್ರಗಳಲ್ಲಿ ಮಾಲೀಕರ ಹೆಸರು ಪ್ರದರ್ಶನಕ್ಕೆ ಯೋಗಿ ಆದಿತ್ಯನಾಥ್ ಸೂಚನೆ
Advertisement
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ (Government Of Karnataka) ಅಧಿಕಾರಕ್ಕೆ ಬಂದು 2 ವರ್ಷ ಆಗಿದೆ. ಅಲ್ಲಿ ಯಾವ ಪರಿಸ್ಥಿತಿ ನಿರ್ಮಾಣವಾಗಿದೆ ನೋಡಿ. ಖುದ್ದು ಅಲ್ಲಿಯ ಮುಖ್ಯಮಂತ್ರಿ ವಿರುದ್ಧ ಭೂ ಹಗರಣದ ಆರೋಪ ಕೇಳಿ ಬಂದಿದೆ, ಹೈಕೋರ್ಟ್ ಚಾಟೀ ಬೀಸಿ ತನಿಖೆಗೆ ಆದೇಶಿಸಿದೆ ಎಂದು ತಿವಿದಿದ್ದಾರೆ. ಇದನ್ನೂ ಓದಿ: MUDA Scam: ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಜೆಡಿಎಸ್ ಪ್ರತಿಭಟನೆ
Advertisement
Advertisement
ಕರ್ನಾಟಕ ಸಿಎಂ ವಿರುದ್ಧ ಭೂ ಹಗರಣ ಆರೋಪ ಕೇಳಿ ಬಂದು, ಅದರ ತನಿಖೆ ಶುರುವಾಗುತ್ತಿದ್ದಂತೆಯೇ ಹೈಕೋರ್ಟ್ಗೆ ಹೋಗಿದ್ದರು. ಹೈಕೋರ್ಟ್ ಕೂಡ ಅವರಿಗೆ ಛಾಟಿ ಬೀಸಿದೆ. ಮಂಗಳವಾರ ಹೈಕೋರ್ಟ್ ತನಿಖೆಗೆ ಆದೇಶ ಮಾಡಿದೆ. ಸಿದ್ದರಾಮಯ್ಯ ವಿರುದ್ಧ ತನಿಖೆ ಆಗಲೇಬೇಕು. ಹೀಗೆ ಭ್ರಷ್ಟಾಚಾರ ಮಾಡಿದವರಿಗೆ ಹರಿಯಾಣದಲ್ಲಿ ಅವಕಾಶ ಕೊಡ್ತಿರಾ? ಎಂದು ಮೋದಿ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ರಾಜೀನಾಮೆ ಪಡೆದರೆ ಇಡೀ ದಕ್ಷಿಣ ಭಾರತ ಹೊತ್ತಿ ಉರಿಯುತ್ತೆ: ಅಹಿಂದ ರಾಜ್ಯಾಧ್ಯಕ್ಷ