ನವದೆಹಲಿ: ನಗರದದ ರಾಮಲೀಲಾ ಮೈದಾನದಲ್ಲಿ ಬಿಜೆಪಿಯ ಎರಡು ದಿನದ ಸಮಾವೇಶ ಇಂದು ಅಂತ್ಯವಾಯ್ತು. ಇಂದು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ವಿಪಕ್ಷಗಳ ವಿರುದ್ಧ ಗುಡುಗಿದ್ದಾರೆ. ಕಾಂಗ್ರೆಸ್ ಶಮನ ಮಾಡಲು ಹುಟ್ಟಿಕೊಂಡ ಪ್ರಾದೇಶಿಕ ಪಕ್ಷಗಳು ಇಂದು ಅದರ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿವೆ ಎಂದು ವ್ಯಂಗ್ಯ ಮಾಡಿದರು.
ತೆಲಂಗಾಣದಲ್ಲಿ ಟಿಡಿಪಿಯೊಂದಿಗೆ ಮಾಡಿಕೊಂಡಿದ್ದ ಕಾಂಗ್ರೆಸ್ ಮೈತ್ರಿ ವಿಫಲವಾಯ್ತು. ಕರ್ನಾಟಕದಲ್ಲಿ ಜೆಡಿಎಸ್ ಗೆ ಬೆಂಬಲ ಸೂಚಿಸಿ ಕಾಂಗ್ರೆಸ್ ಸರ್ಕಾರ ರಚನೆ ಮಾಡಿದೆ. ಸಿಎಂ ಕುಮಾರಸ್ವಾಮಿ ಅವರನ್ನು ಕಾಂಗ್ರೆಸ್ ಕ್ಲರ್ಕ್ ನಂತೆ ನಡೆಸಿಕೊಳ್ಳುತ್ತಿದೆ ಎಂದು ನನಗೆ ಅನ್ನಿಸುತ್ತದೆ ಎಂದು ಹೇಳುವ ರಾಜ್ಯದ ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ಹೇಳಿದರು.
बीते चार-साढ़े चार वर्षों में जिस तरह भाजपा ने केंद्र और राज्यों में सरकारें चलाई हैं, उसने जनमानस में यह स्थापित कर दिया है कि देश को अगर नई ऊँचाई पर कोई राजनीतिक दल ले जा सकता है, तो वो भारतीय जनता पार्टी ही है। pic.twitter.com/wZzJEI0zfB
— Narendra Modi (@narendramodi) January 12, 2019
ರಾಜಸ್ಥಾನ ಮತ್ತು ಮಧ್ಯ ಪ್ರದೇಶಗಳಲ್ಲಿ ಪ್ರಾದೇಶಿಕ ಪಕ್ಷಗಳ ಬೆಂಬಲದಿಂದ ಕಾಂಗ್ರೆಸ್ ಸರ್ಕಾರ ರಚಿಸಿದೆ. ಬೆಂಬಲ ಸೂಚಿಸಿರುವ ಇತರೆ ನಾಯಕರು ನಮ್ಮ ಮೇಲಿನ ಪ್ರಕರಣಗಳನ್ನು ಹಿಂದಕ್ಕೆ ತೆಗೆದುಕೊಂಡು ಅಡಳಿತ ನಡೆಸಿ ಎಂದು ಎಚ್ಚರಿಕೆಯನ್ನು ನೀಡುತ್ತಿವೆ. ಸದ್ಯ ಟ್ರೇಲರ್ ಆರಂಭವಾಗಿದ್ದು, ಮುಂದೆ ಇನ್ನು ಸಿನಿಮಾ ಬಾಕಿ ಇದೆ. ಇಂದು ಒಬ್ಬ ವ್ಯಕ್ತಿಯನ್ನು ಎದುರಿಸಲು ಎಲ್ಲ ಸುಳ್ಳುಗಳು ಒಂದಾಗಿವೆ. ಇವರೆಲ್ಲರೂ ಸೇರಿದ್ರೂ ದೇಶಕ್ಕೆ ಸುಭದ್ರ ಸರ್ಕಾರ ನೀಡಲಾರರು. ದೇಶಕ್ಕೆ ಸುಭದ್ರ ಮತ್ತು ಭದ್ರತೆ ಸರ್ಕಾರ ನೀಡುವ ಉದ್ದೇಶವೇ ಇವರಿಗಿಲ್ಲ ಎಂದು ವಾಗ್ದಾಳಿ ನಡೆಸಿದರು.
ಅಯೋಧ್ಯೆಯಯಲ್ಲಿ ರಾಮಮಂದಿರ ನಿರ್ಮಾಣವಾಗಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ. ಕಾಂಗ್ರೆಸ್‍ಗೆ ರಾಮಮಂದಿರ ಬೇಕಿಲ್ಲ, ದೇಶದ ಬಹುಸಂಖ್ಯಾತ ಮಂದಿಯ ಭಾವನೆಗಳ ಬಗ್ಗೆ ಕಾಂಗ್ರೆಸ್ ಗೌರವ ಹೊಂದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಈ ಮೂಲಕ ಲೋಕಸಭೆ ಚುನಾವಣೆಯಲ್ಲಿ ಬಹುಸಂಖ್ಯಾತ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ. ರಾಮಮಂದಿರ ನಿರ್ಮಾಣದ ಬಗ್ಗೆ ತಮ್ಮ ನಿಲುವೇನು ಅನ್ನೋದನ್ನು ಮೋದಿ ಬಹಿರಂಗಪಡಿಸಲಿಲ್ಲ.
भाजपा किसानों के साथ कंधे से कंधा मिलाकर खड़ी है।
अपने अन्नदाता को हम नए भारत की नई ऊर्जा का वाहक बनाना चाहते हैं। pic.twitter.com/w4AHVQWgVA
— Narendra Modi (@narendramodi) January 12, 2019
ರೈತರ ಸಾಲ ಮನ್ನಾ ವಿಚಾರದಲ್ಲಿ ಕಾಂಗ್ರೆಸ್ ಗಿಮಿಕ್ ಮಾಡ್ತಿದೆ. ಇದು ಎಲೆಕ್ಷನ್ ಗಿಮಿಕ್ ಅಷ್ಟೇ. ರೈತರ ಬಗ್ಗೆ ಕಾಂಗ್ರೆಸ್‍ಗೆ ನಿಜವಾದ ಕಾಳಜಿ ಇಲ್ಲ. ಎಲೆಕ್ಷನ್ ಬಂದಿದ್ದಕ್ಕೆ ಕಾಂಗ್ರೆಸ್ ಪಕ್ಷದವರು ರೈತರ ಜಪ ಮಾಡ್ತಿದ್ದಾರೆ. ಅವ್ರಿಗೆ ನಿಜವಾಗಿಯೂ ಕಾಳಜಿ ಇದ್ದಿದ್ರೆ, ಇಷ್ಟು ವರ್ಷ ಬೇಕಿತ್ತಾ ರೈತರ ಬದುಕು ಹಸನಾಗಲು ಅಂತಾ ಪ್ರಶ್ನೆ ಮಾಡಿದ್ದಾರೆ.
ಕಾಂಗ್ರೆಸ್ ಸಂಸ್ಕೃತಿಯನ್ನು ಪ್ರಶ್ನೆ ಮಾಡಿದ ಮೋದಿಯವರು ನನ್ನ ಹೆಸರಲ್ಲಿ ಯಾವುದಾರೂ ಯೋಜನೆಗಳು ಇವೆಯಾ ಎಂದು ಪ್ರಶ್ನೆ ಮಡೋ ಮೂಲಕ ಕಾಂಗ್ರೆಸ್‍ನ ನೆಹರೂ ಮನೆತನ ಹೆಸರಲ್ಲಿ ಇರುವ ಯೋಜನೆಗಳ ಬಗ್ಗೆ ಮಾತನಾಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv