– ಮೋದಿಯವರು ಭಾರತದ ಚಿತ್ರಣವನ್ನೇ ಪರಿವರ್ತಿಸಿದ್ದಾರೆ
ಪೋರ್ಟ್ ಲೂಯಿಸ್: ಪ್ರಧಾನಿ ನರೇಂದ್ರ ಮೋದಿಯವರಿಂದ ಮಾತ್ರ ಅಯೋಧ್ಯೆಯನ್ನು ಮತ್ತೆ ಬೆಳಕಿಗೆ ತರುವಲ್ಲಿ ಸಾಧ್ಯವಾಯಿತು. ಹೀಗಾಗಿ ಮೋದಿಯವರ ಮೇಲೆ ನಮಗೆ ವಿಶೇಷ ಗೌರವ ಇದ್ದು, ನಿಜಕ್ಕೂ ನಾವು ಹೆಮ್ಮೆಪಡುತ್ತೇವೆ ಎಂದು ಮಾರಿಷಸ್ ಸಂಸದ (Mauritius MP) ಮಹೇಂದ್ ಗಂಗಾಪ್ರಸಾದ್ (Mahend Gungapersad) ಹೇಳಿದ್ದಾರೆ.
Advertisement
2024ರ ಜನವರಿ 22 ರಂದು ನಾವು ಅಯೋಧ್ಯೆಯಲ್ಲಿ ರಾಮಮಂದಿರವನ್ನು (Ayodhya Ram Mandir) ಉದ್ಘಾಟಿಸಲಿದ್ದೇವೆ. ಇಂದು ಭಗವಾನ್ ರಾಮನು ಜನಿಸಿದ ಸ್ಥಳದಲ್ಲಿ ತನ್ನ ದೇವಾಲಯವನ್ನು ಹೊಂದಿದ್ದಾನೆ. ಈ ಸಮಯದಲ್ಲಿ ಭಾರತದಲ್ಲಿರಲು ನನಗೆ ತುಂಬಾ ಸಂತೋಷವಾಗಿದೆ. ನಿಮ್ಮಲ್ಲಿ ಹೆಚ್ಚಿನವರಿಗೆ ಊಹಿಸಲೂ ಸಾಧ್ಯವಿಲ್ಲ ಅಷ್ಟೊಂದು ಭಾರತದ ಬಗ್ಗೆ ನಾನು ಹೆಮ್ಮೆಪಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ರಾಮಮಂದಿರಕ್ಕಾಗಿ ಶ್ರಮಿಸಿದ ಪ್ರತಿಯೊಬ್ಬರಿಗೂ ಅಭಿನಂದನೆ: ಫಾರೂಕ್ ಅಬ್ದುಲ್ಲಾ
Advertisement
Advertisement
ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಭಾರತದ ಚಿತ್ರಣವನ್ನು ಪರಿವರ್ತಿಸಿದ್ದಾರೆ. ಈ ಮೂಲಕ ಇಂದು ಇಡೀ ವಿಶ್ವದ ಜನ ಭಾರತದತ್ತ ತಿರುಗಿ ನೋಡುತ್ತಿದ್ದಾರೆ. ಮೋದಿಯವರ ದೂರದೃಷ್ಟಿ ಮತ್ತು ನಾಯಕತ್ವದಿಂದಾಗಿ ಈ ನವ ಭಾರತ ಸಾಧ್ಯವಾಗಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಅವರ ಅಧಿಕಾರಾವಧಿಯಲ್ಲಿ ಭಾರತವು ಇಂದಿನಂತೆ ಮುಂದೆಯೂ ಉಜ್ವಲ ಭವಿಷ್ಯವನ್ನು ಹೊಂದಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಬಿಜೆಪಿಯವರು ರಾಮ ನಮ್ಮ ಅಭ್ಯರ್ಥಿ ಅಂತಾ ಘೋಷಿಸೋದು ಒಂದೇ ಬಾಕಿ: ಸಂಜಯ್ ರಾವತ್
Advertisement
ಸದ್ಯ ಹಲವು ದೇಶಗಳು ಭಾರತದೊಂದಿಗೆ (India) ಸ್ನೇಹ ಹೊಂದಲು ಬಯಸುತ್ತವೆ. ಅಲ್ಲದೇ ಭಾರತದೊಂದಿಗೆ ಅತ್ಯಂತ ನಿಕಟ ಸಂಬಂಧವನ್ನು ಹೊಂದಲು ಬಯಸುತ್ತಾರೆ. ನಾವು ಮಾರಿಷಿಯನ್ನರು ಯಾವಾಗಲೂ ಭಾರತದ ಜೊತೆ ಉತ್ತಮ ಸಂಬಂಧವನ್ನು ಹೊಂದಿದ್ದೇವೆ. ಪ್ರಧಾನಿ ಮೋದಿಯವರ ಅಧಿಕಾರಾವಧಿಯಲ್ಲಿ ಈ ಸಂಬಂಧ ಮತ್ತಷ್ಟು ಬಲಗೊಳ್ಳುತ್ತಿದೆ ಎಂದರೆ ತಪ್ಪಾಗಲಾರದು ಎಂದು ಅವರು ತಿಳಿಸಿದ್ದಾರೆ.