ಚುನಾವಣೆಗೆ ಅಣಿಗೊಳಿಸಲು ಮೋದಿ ರಣತಂತ್ರ – 50 ಲಕ್ಷ ಬಿಜೆಪಿ ಕಾರ್ಯಕರ್ತರೊಂದಿಗೆ ಸಂವಾದ

Public TV
2 Min Read
NARENDRA MODI

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Election 2023) ದಿನಗಣನೆ ಆರಂಭವಾಗಿದ್ದು, ರಾಜ್ಯದ ಮೂರು ಪಕ್ಷಗಳೂ ಭರ್ಜರಿಯಾಗಿ ಚುನಾವಣಾ ಪ್ರಚಾರ ನಡೆಸುತ್ತಿವೆ. ಈ ನಡುವೆಯೇ ತಮ್ಮ ಕಾರ್ಯಕರ್ತರಲ್ಲಿ ಮತ್ತಷ್ಟು ಉತ್ಸಾಹ ಹೆಚ್ಚಿಸಲು ಬಿಜೆಪಿ (BJP) ಪ್ಲ್ಯಾನ್ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಂದ ಸಂವಾದ ಕಾರ್ಯಕ್ರಮ ಆಯೋಜಿಸಿದೆ.

BJP 1 1

ಪಕ್ಷದ 50 ಲಕ್ಷ ಕಾರ್ಯಕರ್ತರೊಂದಿಗೆ ಪ್ರಧಾನಿ ಮೋದಿ ಅವರಿಂದು ವರ್ಚುವಲ್ ಮೂಲಕ ಸಭೆ ನಡೆಸಲಿದ್ದು, ಮತ್ತಷ್ಟು ರಣತಂತ್ರಗಳನ್ನ ಹೂಡಲಿದ್ದಾರೆ. ಅದಕ್ಕಾಗಿ ಬಿಜೆಪಿ ರಾಜ್ಯಾದ್ಯಂತ ವಿವಿಧೆಡೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಇದನ್ನೂ ಓದಿ: ನಮ್ಮ ಬ್ಲಡ್‌ ಗ್ರೂಪ್‌ RCB ಪಾಸಿಟಿವ್‌ – ಫ್ಯಾನ್ಸ್‌ ಪೋಸ್ಟರ್‌ ವೈರಲ್‌

ರಾಜ್ಯ ಬಿಜೆಪಿ ಕಚೇರಿ ಹಾಗೂ ಜೆ.ಪಿ ನಗರದ ಖಾಸಗಿ ಕಾಲೇಜು ಸೇರಿದಂತೆ ವಿವಿಧೆಡೆ ಸಂವಾದಕ್ಕಾಗಿ ಎಲ್‌ಇಡಿ ಸ್ಕ್ರೀನ್ ವ್ಯವಸ್ಥೆ ಹಾಗೂ ಆಸನಗಳನ್ನ ಸಿದ್ಧಪಡಿಸಲಾಗಿದೆ. ಬಿಜೆಪಿ ಕಚೇರಿಯ 3ನೇ ಮಹಡಿಯಲ್ಲಿ ಎಲ್‌ಇಡಿ ಪರದೆ ಅಳವಡಿಕೆ ಮಾಡಲಾಗಿದೆ. ಸಂವಾದ ಕಾರ್ಯಕ್ರಮ ವೀಕ್ಷಣೆ ಮಾಡಲು ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಹಾಗೂ ಬಿಜೆಪಿ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಸಹ ಆಗಮಿಸಿದ್ದಾರೆ.

BJP

15 ಕ್ಷೇತ್ರಗಳಲ್ಲಿ ನೇರ ಸಂವಾದ: ಗಾಂಧಿನಗರ(ಬಿಜೆಪಿ ಕೇಂದ್ರ ಕಚೇರಿ), ಜಯನಗರ, ಮಹಾದೇವಪುರ, ಹುಬ್ಬಳ್ಳಿ-ಧಾರವಾಡ ಕೇಂದ್ರ, ಮೈಸೂರು, ಕೊಪ್ಪಳ, ಷಹಾಪುರ, ದೊಡ್ಡಬಳ್ಳಾಪುರ, ಮೊಳಕಾಲ್ಮೂರು, ಹೊಸಪೇಟೆ, ಬಾಗೇಪಲ್ಲಿ, ಮಂಗಳೂರು ದಕ್ಷಿಣ, ಬಾಗೇಪಲ್ಲಿ, ಯಮಕನಮರಡಿ, ಶಿವಮೊಗ್ಗ ಕ್ಷೇತ್ರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇರ ಸಂವಾದ ನಡೆಸಲಿದ್ದಾರೆ. ಇದನ್ನೂ ಓದಿ: ಕುಡಿಯಲು ಹಣ ಕೊಡದಿದ್ದಕ್ಕೆ ಇಟ್ಟಿಗೆಯಿಂದ ತಲೆಗೆ ಹೊಡೆದು ತಂದೆಯನ್ನೇ ಕೊಂದ ಪಾಪಿ ಮಗ

ನಮೋ ವರ್ಚುವಲ್ ಸಂವಾದ ಎಲ್ಲಿ..? ಹೇಗೆ..?
* ಪ್ರಧಾನಿ ಮೋದಿ ಪಕ್ಷದ 50 ಲಕ್ಷ ಕಾರ್ಯಕರ್ತರ ಜತೆ ವರ್ಚುವಲ್ ಸಂವಾದ.
* ರಾಜ್ಯದ 58,112 ಬೂತ್‌ಗಳ ಪಕ್ಷದ ಕಾರ್ಯಕರ್ತರ ಜತೆ ಮೋದಿ ಮನ್ ಕಿ ಬಾತ್.
* 1,680 ಜಿಲ್ಲಾ ಪಂಚಾಯತ್ ಮಟ್ಟದಲ್ಲಿ ವರ್ಚುವಲ್ ಸಂವಾದಕ್ಕೆ ವ್ಯವಸ್ಥೆ
* ಮೋದಿ ಸಂವಾದ ವೀಕ್ಷಣೆಗೆ 650 ಕಡೆಗಳಲ್ಲಿ ಎಲ್‌ಇಡಿ ಪರದೆಗಳ ವ್ಯವಸ್ಥೆ.
* ಬೆಂಗಳೂರಿನ ಜಯನಗರ, ಮಹಾದೇವಪುರ ಸೇರಿ 15 ಕಡೆ ಕಾರ್ಯಕರ್ತರ ಪ್ರಶ್ನೆಗಳಿಗೆ ಉತ್ತರಿಸಲಿರೋ ಮೋದಿ.
* ಮೋದಿ ಸಂವಾದಕ್ಕಾಗಿ 24 ಲಕ್ಷ ಮಂದಿ ನಮೋ ಆಪ್ ಡೌನ್‌ಲೋಡ್
* ಪ್ರತಿ ವಿಧಾನಸಭಾ ಕ್ಷೆತ್ರದಲ್ಲಿ ನಮೋ ಆಪ್ 5,000 ಮಂದಿ ಡೌನ್‌ಲೋಡ್

Share This Article