ಜೆರುಸಲೇಂ: ಇಸ್ರೇಲ್ ಸಾರ್ವತ್ರಿಕ ಚುನಾವಣೆಯಲ್ಲಿ (Israeli General Elections) ಗೆದ್ದ ಬೆಂಜಮಿನ್ ನೆತನ್ಯಾಹು (Benjamin Netanyahu) ಅವರಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅಭಿನಂದನೆ ಸಲ್ಲಿಸಿದ್ದಾರೆ.
תודה לך @yairlapid על תרומתך החשובה לשותפות האסטרטגית של הודו וישראל. אני מקווה להמשיך את חילופי הרעיונות הפוריים שלנו לתועלת ההדדית של עמינו.
— Narendra Modi (@narendramodi) November 3, 2022
Advertisement
ಈ ಕುರಿತಂತೆ ಹೀಬ್ರೂ (Hebrew) ಭಾಷೆಯಲ್ಲಿ ಟ್ವೀಟ್ ಮಾಡಿರುವ ಮೋದಿ ಅವರು, ಭಾರತ ಮತ್ತು ಇಸ್ರೇಲ್ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ಗಾಢಗೊಳಿಸಲು ನಮ್ಮ ಜಂಟಿ ಪ್ರಯತ್ನಗಳನ್ನು ಮುಂದುವರಿಸಲು ನಾನು ಎದುರು ನೋಡುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ನೇಣಿಗೆ ಹಾಕಿ: ಸಚಿವೆ ಉಷಾ ಠಾಕೂರ್
Advertisement
מזל טוב ידידי @netanyahu על הצלחתך בבחירות. אני מצפה להמשיך במאמצים המשותפים שלנו להעמקת השותפות האסטרטגית בין הודו וישראל.
— Narendra Modi (@narendramodi) November 3, 2022
Advertisement
ಜೊತೆಗೆ ಭಾರತ ಮತ್ತು ಇಸ್ರೇಲ್‍ನ ಕಾರ್ಯತಂತ್ರದ ಸಹಭಾಗಿತ್ವಕ್ಕೆ ನೀಡಿದ ಪ್ರಮುಖ ಕೊಡುಗೆಗಾಗಿ ಮೋದಿ ಅವರು, ನಿರ್ಗಮಿಸುತ್ತಿರುವ ಇಸ್ರೇಲಿ ಪ್ರಧಾನಿ ಯೈರ್ ಲ್ಯಾಪಿಡ್ ಅವರಿಗೆ ಕೂಡ ಧನ್ಯವಾದ ಅರ್ಪಿಸಿದ್ದಾರೆ. ಅಲ್ಲದೇ “ನಮ್ಮ ಜನರ ಪರಸ್ಪರ ಪ್ರಯೋಜನಕ್ಕಾಗಿ ನಮ್ಮ ಫಲಪ್ರದ ವಿಚಾರಗಳ ವಿನಿಮಯವನ್ನು ಮುಂದುವರಿಸಲು ನಾನು ಭಾವಿಸುತ್ತೇನೆ ಎಂದು ಸಹ ಟ್ವೀಟ್ ಮೂಲಕ ತಿಳಿಸಿದ್ದಾರೆ. ಇದನ್ನೂ ಓದಿ: ದೂದ್ ಪೇಡ ದಿಗಂತ್ ಗೆ ಜೊತೆಯಾದ ರಂಗಿತರಂಗ ಬೆಡಗಿ ರಾಧಿಕಾ ನಾರಾಯಣ್
Advertisement
ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ನೇತೃತ್ವದ ಒಕ್ಕೂಟವು 120 ಸ್ಥಾನಗಳ ಸಂಸತ್ತಿನಲ್ಲಿ ಬಹುಪಾಲು ಸ್ಥಾನಗಳನ್ನು ಗೆದ್ದಿದೆ. ಒಕ್ಕೂಟವು ಗೆದ್ದಿರುವ 120 ಸ್ಥಾನಗಳ ಸಂಸತ್ತಿನಲ್ಲಿ 64 ಸ್ಥಾನಗಳಲ್ಲಿ 32 ಸ್ಥಾನಗಳು ನೆತನ್ಯಾಹು ಅವರ ಪಕ್ಷದ್ದಾಗಿದೆ. ಈ ಮೂಲಕ ಗುರುವಾರ ಪ್ರಕಟವಾದ ಅಂತಿಮ ಚುನಾವಣಾ ಫಲಿತಾಂಶದಲ್ಲಿ ನೆತನ್ಯಾಹು ಮತ್ತು ಅವರ ಅಲ್ಟ್ರಾನ್ಯಾಶನಲಿಸ್ಟ್ ಮಿತ್ರರಾಷ್ಟ್ರಗಳನ್ನು ಮತ್ತೆ ಅಧಿಕಾರಕ್ಕೆ ತಂದಿದೆ.