ಒಡಿಯಾದ ಖ್ಯಾತ ಸಂಗೀತಗಾರ ಮತ್ತು ಗಾಯಕ ಪ್ರಫುಲ್ಲ ಕರ್ ಇಂದು ನಿಧನರಾಗಿದ್ದಾರೆ. ಪ್ರಫುಲ್ಲ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಅವರ ಕುಟುಂಬಕ್ಕೆ ನೋವು ಭರಿಸುವಂತಹ ಶಕ್ತಿಯು ದೇವರು ಕೊಡಲೆಂದು ಪ್ರಾರ್ಥಿಸಿದ್ದಾರೆ.
Advertisement
ಒಡಿಯಾ ಸಂಸ್ಕೃತಿ ಮತ್ತು ಸಂಗೀತಕ್ಕೆ ಅವರು ಸಲ್ಲಿಸಿದ ಕೊಡುಗೆಗಾಗಿ ಕರ್ ಅವರನ್ನು ಸ್ಮರಿಸಲಾಗುವುದು ಎಂದು ಮೋದಿ ಹೇಳಿದ್ದಾರೆ. ‘ಶ್ರೀ ಪ್ರಫುಲ್ಲ ಕರ್ ಅವರ ನಿಧನದಿಂದ ನನಗೆ ಅಪಾರ ದುಃಖವಾಗಿದೆ. ಒಡಿಯಾ ಸಂಸ್ಕೃತಿ ಮತ್ತು ಸಂಗೀತಕ್ಕೆ ಅವರ ಕೊಡುಗೆ ಅಪಾರ. ಅವರು ಬಹುಮುಖಿ ವ್ಯಕ್ತಿತ್ವದಿಂದ ಆಶೀರ್ವದಿಸಲ್ಪಟ್ಟಿದ್ದಾರೆ ಮತ್ತು ಅವರ ಸೃಜನಶೀಲತೆಯು ಅವರ ಕೃತಿಗಳಲ್ಲಿ ಪ್ರತಿಫಲಿಸುತ್ತದೆ’ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳನ್ನು ಸೂಚಿಸುತ್ತೇನೆ ಓಂ ಶಾಂತಿ ಎಂದು ಬರೆದುಕೊಂಡಿದ್ದಾರೆ.
Advertisement
Anguished by the passing away of Shri Prafulla Kar Ji. He will be remembered for his pioneering contribution to Odia culture and music. He was blessed with a multifaceted personality and his creativity was reflected in his works. Condolences to his family and admirers. Om Shanti.
— Narendra Modi (@narendramodi) April 18, 2022
Advertisement
ಖ್ಯಾತ ಒಡಿಯಾ ಸಂಗೀತಗಾರ ಮತ್ತು ಗಾಯಕ ಕರ್ ಅವರು ರಾಜ್ಯ ರಾಜಧಾನಿ ಭುವನೇಶ್ವರದಲ್ಲಿರುವ ತಮ್ಮ ನಿವಾಸದಲ್ಲಿ ಭಾನುವಾರ ತಡರಾತ್ರಿ ನಿಧನರಾಗಿದ್ದಾರೆ. 83 ವರ್ಷ ವಯಸ್ಸಿನ ಅವರು ಕೆಲವು ತಿಂಗಳಿನಿಂದ ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದರು. ಅವರ ಅಂತಿಮ ಸಂಸ್ಕಾರವನ್ನು ಪೂರ್ಣ ಗೌರವದಿಂದ ಪುರಿಯಲ್ಲಿ ಇಂದು ನೆರವೇರಿಸಲಾಗಿದೆ.