ಮುಂಬೈ: ಸಾಯಿಬಾಬಾರು ಸಮಾಧಿಸ್ಥರಾಗಿ ಇಂದಿಗೆ ನೂರು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶಿರಡಿಗೆ ಭೇಟಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಶುಕ್ರವಾರಕ್ಕೆ ಶಿರಡಿ ಸಾಯಿಬಾಬಾರ ಸಮಾಧಿಸ್ಥರಾಗಿ ನೂರು ವರ್ಷ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ಸಾಯಿಬಾಬಾ ಮಂದಿರಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿಯವರು ವಿಶೇಷ ಪೂಜೆ ನೆರವೇರಿಸಿದರು.
Advertisement
Feeling extremely blessed after praying at the Shri Saibaba's Samadhi Temple in Shirdi.
His thoughts and ideals inspire crores of Indians as we work towards creating an inclusive, compassionate and just society. pic.twitter.com/voEtRhRNNj
— Narendra Modi (@narendramodi) October 19, 2018
Advertisement
ದೇವಾಲಯದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ನೆರವೇರಿಸಿದ ಬಳಿಕ, ಸಾಯಿಬಾಬಾ ಸಮಾಧಿ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಶಿಲಾನ್ಯಾಸ ನೆರವೇರಿಸಿದರು. ಈ ವೇಳೆ ಸಾಯಿಬಾಬಾರವರ ಬೆಳ್ಳಿಯ ನಾಣ್ಯಗಳನ್ನು ಸಹ ಬಿಡುಗಡೆಗೊಳಿಸಿದರು.
Advertisement
ದೇವಾಲಯದ ಭೇಟಿಗೂ ಮುನ್ನ ಪ್ರಧಾನಿ ಆವಾಸ್ ಗ್ರಾಮೀಣ ಯೋಜನೆಯ ಫಲಾನುಭವಿಗಳಿಗೆ ಸಾರ್ವಜನಿಕ ಸಮಾರಂಭದಲ್ಲಿ ಮನೆಯ ಕೀಲಿ ಕೈಗಳನ್ನು ವಿತರಿಸಿದ್ದರು. ಇದಲ್ಲದೇ 29 ಜಿಲ್ಲೆಗಳ ಫಲಾನುಭವಿಗಳೊಂದಿಗೆ ವಿಡಿಯೋ ಸಂವಾದವನ್ನು ಮಾಡಿದ್ದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv