ನವದೆಹಲಿ: ದೇಶಾದ್ಯಂತ ಮಂಗಳವಾರದಿಂದ ಲಾಕ್‍ಡೌನ್ 2.0 ಮೇ 3ರ ವರೆಗೂ ವಿಸ್ತರಣೆಯಾಗಿದೆ. ಇಂದು ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಕೊರೋನಾ ನಿಯಂತ್ರಣಕ್ಕೆ ಮತ್ತಷ್ಟು ಸಮಯ ಲಾಕ್‍ಡೌನ್ ವಿಸ್ತರಣೆ ಮಾಡಲಾಗುತ್ತಿದೆ ಎಂದು ಹೇಳಿದ್ದರು. ಅಲ್ಲದೇ ಇಂತಹ ಸಂದಿಗ್ಧ ಸಂದರ್ಭದಲ್ಲಿ ತ್ಯಾಗವನ್ನು ಮಾಡುತ್ತಿರುವ ದೇಶದ ಜನರಿಗೆ ಮೋದಿ ಧನ್ಯವಾದ ತಿಳಿಸಿದ್ದರು. ದೇಶದ ಜನತೆ ಕುರಿತು ಮಾತನಾಡುವ ವೇಳೆ ಮುಖಕ್ಕೆ ಮಾಸ್ಕ್ ಕೂಡ ಮೋದಿ ಧರಿಸಿದ್ದರು. ಪ್ರಧಾನಿ ಧರಿಸಿದ್ದ ಮಣಿಪೂರ್ ತಯಾರಿಸಿದ ಮಫ್ಲರ್ ಎಲ್ಲರನ್ನು ಆಕರ್ಷಿಸಿತ್ತು.
Advertisement
ಲಾಕ್‍ಡೌನ್ ವಿಸ್ತರಣೆ ಪ್ರಕಟನೆಯ ಬಳಿಕ ಮೋದಿ ಅವರು ತಮ್ಮ ಟ್ವಿಟ್ಟರ್ ಖಾತೆಯ ಪ್ರೊಫೈನಲ್ ಫೋಟೋವನ್ನು ಬದಲಿಸಿದ್ದು, ಮಣಿಪೂರ್ ಮಾಸ್ಕ್ ಧರಿಸಿದ್ದ ಫೋಟೋವನ್ನು ಅಪ್‍ಡೇಟ್ ಮಾಡಿದ್ದಾರೆ. ಕೊರೋನಾ ನಿಯಂತ್ರಣಕ್ಕೆ ದೇಶದ ಎಲ್ಲಾ ಪ್ರಜೆಗಳು ಮಾಸ್ಕ್ ಧರಿಸುವುದು ಕಡ್ಡಾಯ ಮಾಡಿ ಕೇಂದ್ರ ಸೂಚನೆ ನೀಡಿದೆ. ಪರಿಣಾಮ ಮೋದಿ ತಮ್ಮ ಪ್ರೊಫೈಲ್‍ಗೆ ಮಾಸ್ಕ್ ಧರಿಸಿರುವ ಫೋಟೋವನ್ನು ಅಪ್‍ಲೋಡ್ ಮಾಡಿದ್ದಾರೆ.
Advertisement
मैं आपका साथ मांग रहा हूं। सात बातों में आपका साथ…
यह सप्तपदी विजय प्राप्त करने का मार्ग है।
पूरी निष्ठा के साथ 3 मई तक लॉकडाउन के नियमों का पालन करें, जहां हैं, वहीं रहें, सुरक्षित रहें। pic.twitter.com/QTSPWx1aRH
— Narendra Modi (@narendramodi) April 14, 2020
Advertisement
ದೇಶದ ಜನತೆಯನ್ನು ಕುರಿತು ಕೊರೋನಾ ಕುರಿತು ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ 4ನೇ ಬಾರಿಗೆ ಮೋದಿ ಅವರು ಜನರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಅಲ್ಲದೇ ಪ್ರಜೆಗಳನ್ನು ಉದ್ದೇಶಿಸಿ ಮಾತನಾಡುವ ವೇಳೆ 2ನೇ ವಾರಿ ಮಾಸ್ಕ್ ಧರಿಸಿ ಕಾಣಿಸಿಕೊಂಡಿದ್ದಾರೆ. ಇತ್ತ ಲಾಕ್‍ಡೌನ್ ವಿಸ್ತರಣೆ ಕುರಿತು ಪ್ರಧಾನಿ ಮೋದಿ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದರು. ಈ ವೇಳೆಯೂ ಪ್ರಧಾನಿ ಮೋದಿ ಅವರು ಕಟನ್ ಬಟ್ಟೆಯಿಂದ ತಯಾರಿಸಿದ್ದ ಹೋಮ್ ಮೇಡ್ ಮಾಸ್ಕ್ ಧರಿಸಿದ್ದರು.
Advertisement
ಇತ್ತ ಭಾರತದಲ್ಲಿ ಕೊರೋನಾ ವೈರಸ್ ವೇಗವಾಗಿ ಹರಡುತ್ತಿದ್ದು, ಈಗಾಗಲೇ ಪಾಸಿಟಿವ್ ಪ್ರಕರಣಗಳ ಸಂಖ್ಯೆ 10 ಸಾವಿರವನ್ನು ದಾಟಿದೆ. ಅಲ್ಲದೇ ಸುಮಾರು 350 ಮಂದಿ ಕೋವಿಡ್-19ನಿಂದ ಸಾವನ್ನಪ್ಪಿದ್ದಾರೆ.