– ಅಷ್ಟಕ್ಕೂ ಆ ವೃದ್ಧೆ ಯಾರು?
ಭುವನೇಶ್ವರ: ಪ್ರದಾನಿ ನರೇಂದ್ರ ಮೋದಿಯವರು (Narendra Modi) ವೃದ್ಧೆಯೊಬ್ಬರ ಕಾಲಿಗೆ ಮಂಡಿಯೂರಿ ನಮಸ್ಕರಿಸಿದ್ದಾರೆ. ಇದರ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ವೀಡಿಯೋ ವೈರಲ್ ಬೆನ್ನಲ್ಲೇ ಆ ವೃದ್ಧೆ ಯಾರು ಎಂಬ ಪ್ರಶ್ನೆ ಎದ್ದಿದೆ. ಈ ವೃದ್ಧೆಯ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ಕಳೆದ ಫೆಬ್ರವರಿ 26 ರಂದು 98 ನೇ ಆವೃತ್ತಿಯ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿ, ಅವರ ಕೆಲಸವನ್ನು ಶ್ಲಾಘಿಸಿದ್ದರು.
Advertisement
In today's #MannKiBaat, Prime Minister Shri @narendramodi told the nation how a sister named Kamala Maharana of Kendrapara district has saved the environment by using unused plastic and created employment for herself and many women. pic.twitter.com/dfD71EV5il
— Pratik Samal (@psamal347) February 26, 2023
Advertisement
ಈ ವೃದ್ಧೆ ಯಾರು?, ಇವರು ಯಾಕೆ ಫೇಮಸ್?: ಈ ವೃದ್ಧೆಯ ಹೆಸರು ಕಮಲಾ ಮಹಾರಾಣಾ (Kamala Maharana). ಒಡಿಶಾ ಮೂಲದ ಇವರು ತ್ಯಾಜ್ಯ ವಸ್ತುಗಳನ್ನು ಬಳಸಿ ಅನೇಕ ಗೃಹೋಪಯೋಗಿ ವಸ್ತುಗಳನ್ನು ತಯಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿಯವರು ಇವರನ್ನು ಗುರುತಿಸಿ, ಕೆಲಸವನ್ನು ಕೊಂಡಾಡಿದ್ದರು. ಇದನ್ನೂ ಓದಿ: ಡಾ.ಮಂಜುನಾಥ್ ಗೆಲುವಿಗೆ ಹರಕೆಹೊತ್ತ ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ
Advertisement
Advertisement
ಬುಧವಾರ ಪ್ರಧಾನಿಯವರು ಚುನಾವಣಾ ರ್ಯಾಲಿ ನಡೆಸಲು ಒಡಿಶಾದ ಕೇಂದ್ರಪಾರಕ್ಕೆ ತೆರಳಿದ್ದರು. ಅಂತೆಯೇ ರ್ಯಾಲಿ ಬಳಿಕ ವೇದಿಕೆಯಲ್ಲಿ ಕಮಲಾ ಮಹಾರಾಣಾ ಅವರನ್ನು ಭೇಟಿಯಾದರು. ಈ ವೇಳೆ ಕಮಲಾ ಅವರು ಮೋದಿಯವರ ಕಾಲಿಗೆ ನಮಸ್ಕರಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಮೋದಿ ಕೂಡ ಮಂಡಿಯೂರಿ ಕಮಲಾ ಕಾಲಿಗೆ ನಮಸ್ಕರಿಸಿದ್ದಾರೆ.
ಕಮಲಾ ಅವರು ಸ್ವ-ಸಹಾಯ ಗುಂಪಿನ ಭಾಗವಾಗಿದ್ದಾರೆ. ಮತ್ತು ‘ವೇಸ್ಟ್ ಟು ವೆಲ್ತ್’ ಜೊತೆಗೆ ಮಹಿಳಾ ಸಬಲೀಕರಣದಲ್ಲಿ ಕೆಲಸ ಮಾಡುತ್ತಾರೆ. ಇತ್ತೀಚೆಗೆ ಕಮಲಾ ಅವರು ಪ್ರಧಾನಿ ಮೋದಿಯವರಿಗೆ ವಸ್ತ್ರದಿಂದ ತಯಾರಿಸಿದ ರಾಖಿಯನ್ನೂ ಕಳುಹಿಸಿದ್ದರು.