ನವದೆಹಲಿ: ಅವಧಿಗಿಂತ ಆರು ತಿಂಗಳು ಮೊದಲೇ ಲೋಕಸಭೆ ಚುನಾವಣೆ ನಡೆಯಲಿದ್ದು, ಡಿಸೆಂಬರ್ ನಲ್ಲಿ ಲೋಕಸಭೆ ಜೊತೆ 10 ರಾಜ್ಯಗಳ ವಿಧಾನಸಭೆಗೆ ಚುನಾವಣೆ ನಡೆಯಲಿದೆ.
ಪ್ರಧಾನಿ ಮೋದಿಗೆ ಇತ್ತೀಚಿನ ಉಪ ಲೋಕಸಮರ ಫಲಿತಾಂಶ ಕಂಗೆಡಿಸಿದ್ದು, ವಿಪಕ್ಷಗಳ ಒಗ್ಗಟಿನ ಭಯ ಶುರುವಾಗಿದೆ ಎನ್ನಲಾಗಿದೆ. ಹೀಗಾಗಿ ಪ್ರತಿಪಕ್ಷಗಳು ಒಂದಾಗುವ ಮೊದಲೇ ಲೋಕಸಮರಕ್ಕೆ ಮೋದಿ ಪ್ಲಾನ್ ಮಾಡಿದ್ದು, ಡಿಸೆಂಬರ್ ನಲ್ಲಿ ಛತ್ತೀಸ್‍ಘಡ, ಮಧ್ಯಪ್ರದೇಶ, ರಾಜಾಸ್ಥಾನ್ ಹಾಗೂ ಮಿಜೋರಾನಲ್ಲಿ ಚುನಾವಣೆ ನಿಗದಿ ಮಾಡಿದ್ದಾರೆ.
Advertisement
ಇದಾದ ಆರು ತಿಂಗಳಿಗೆ ಅರುಣಾಚಲ ಪ್ರದೇಶ, ಆಂಧ್ರ, ತೆಲಂಗಾಣ, ಮಹಾರಾಷ್ಟ್ರ ಮತ್ತು ಹರಿಯಾಣ ಚುನಾವಣೆ ಮಾಡಲಿದ್ದಾರೆ. ಒಟ್ಟು 10 ರಾಜ್ಯಗಳ ವಿಧಾನಸಭೆ ಚುನಾವಣೆ ಜೊತೆಗೆ ಲೋಕಸಭೆ ಚುನಾವಣೆಯನ್ನು ಡಿಸೆಂಬರ್ ನಲ್ಲೇ ನಡೆಸಲು ಪ್ರಧಾನಿ ಪ್ಲಾನ್ ಮಾಡಿದ್ದಾರೆ. ಕೇಂದ್ರ ಚುನಾವಣಾ ಆಯೋಗ ಈಗಾಗಲೇ ಡಿಸೆಂಬರ್ ಚುನಾವಣೆಗೆ ತಯಾರಿ ನಡೆಸುತ್ತಿದೆ ಎಂದು ತಿಳಿದುಬಂದಿದೆ.
Advertisement
ಕೇಂದ್ರ ಸರ್ಕಾರ ಇದಕ್ಕಾಗಿ ಈಗಾಗಲೇ ಸಂವಿಧಾನದ ಆರ್ಟಿಕಲ್ 83,85, 172,174 ತಿದ್ದುಪಡಿಗೆ ಕರಡು ಬಿಲ್ ರೂಪಿಸಿದೆ. ಅದರಲ್ಲಿ ಸಂವಿಧಾನದ ಆರ್ಟಿಕಲ್ 83, 85 – ಲೋಕಸಭೆಯನ್ನು ಅವಧಿಗಿಂತ ಮೊದಲೇ ವಿಸರ್ಜಿಸುವುದು ಹಾಗೂ ಸಂವಿಧಾನದ ಆರ್ಟಿಕಲ್ 172, 174 – ರಾಜ್ಯ ವಿಧಾನಸಭೆಗಳ ಅವಧಿಯನ್ನು ತಗ್ಗಿಸುವುದಾಗಿದೆ ಎಂಬುದಾಗಿ ತಿಳಿದು ಬಂದಿದೆ.
Advertisement