ಪ್ರಧಾನಿ ಮೋದಿಗೆ ಭೂತಾನ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿ ಗೌರವ

Public TV
1 Min Read
BHUTAN MODI

ಥಿಂಪು: ಎರಡು ದಿನಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಭೂತಾನ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಭೂತಾನ್ ರಾಜ ಪ್ರಧಾನಿ ಮೋದಿಯವರಿಗೆ ʼಆರ್ಡರ್ ಆಫ್ ಡ್ರುಕ್ ಗ್ಯಾಲ್ಪೋʼ (Order of the Druk Gyalpo) ನೀಡಿ ಗೌರವಿಸಿದ್ದಾರೆ.

ಈ ಮೂಲಕ ಭೂತಾನ್‌ನ (Bhutan) ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಪಡೆದ ಮೊದಲ ಭೂತಾನ್‌ನೇತರ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪ್ರಧಾನಿ ಮೋದಿ ಪಾತ್ರರಾಗಿದ್ದಾರೆ. ಇದುವರೆಗೆ ಈ ಪ್ರಶಸ್ತಿಯನ್ನು ಕೇವಲ ನಾಲ್ವರು ಗಣ್ಯ ವ್ಯಕ್ತಿಗಳಿಗೆ ಮಾತ್ರ ನೀಡಲಾಗಿದೆ. ಹೀಗಾಗಿ ಮೋದಿ (Narendra Modi) ಅವರು ಭೂತಾನ್‌ನ ಅತ್ಯುನ್ನತ ನಾಗರಿಕ ಗೌರವವನ್ನು ಪಡೆದ ಮೊದಲ ವಿದೇಶಿ ಸರ್ಕಾರದ ಮುಖ್ಯಸ್ಥರಾಗಿದ್ದಾರೆ.

ದೇಶವಾಸಿಗಳಿಗೆ ಪ್ರಶಸ್ತಿ ಸಮರ್ಪಣೆ: ಆರ್ಡರ್ ಆಫ್ ದ ಡ್ರುಕ್ ಗ್ಯಾಲ್ಪೋ ಗೌರವಕ್ಕೆ ಪಾತ್ರರಾಗಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಇಂದು ನನ್ನ ಜೀವನದಲ್ಲಿ ಒಂದು ದೊಡ್ಡ ದಿನವಾಗಿದೆ. ನನಗೆ ಭೂತಾನ್‌ನ ಅತ್ಯುನ್ನತ ನಾಗರಿಕ ಗೌರವವನ್ನು ನೀಡಲಾಗಿದೆ. ಪ್ರತಿ ಪ್ರಶಸ್ತಿಯು ವಿಶೇಷವಾಗಿದೆ. ಆದರೆ ನೀವು ಬೇರೆ ದೇಶದಿಂದ ಪ್ರಶಸ್ತಿಯನ್ನು ಪಡೆದಾಗ ಎರಡೂ ದೇಶಗಳು ಸರಿಯಾದ ಹಾದಿಯಲ್ಲಿವೆ ಎಂಬುದನ್ನು ತೋರಿಸುತ್ತದೆ. ಆದರೆ ನಾವು ಮುಂದೆ ಸಾಗುತ್ತಿದ್ದೇವೆ. ಅಲ್ಲದೇ ಪ್ರತಿಯೊಬ್ಬ ಭಾರತೀಯನ ಪರವಾಗಿ ನಾನು ಈ ಗೌರವವನ್ನು ಸ್ವೀಕರಿಸುತ್ತೇನೆ. ಭಾರತ ಮತ್ತು ಭೂತಾನ್ ನಡುವಿನ ಸಂಬಂಧಗಳು ಪ್ರಾಚೀನವಾಗಿವೆ ಮತ್ತು ಸಮಕಾಲೀನವಾಗಿವೆ ಎಂದಿದ್ದಾರೆ. ಜೊತೆಗೆ ಈ ಗೌರವವನ್ನು 140 ಕೋಟಿ ದೇಶವಾಸಿಗಳಿಗೆ ಅರ್ಪಿಸಿದ್ದಾರೆ.  ಇದನ್ನೂ ಓದಿ: ನನ್ನ ಹಿರಿಯ ಸಹೋದರ ನಿಮಗೆ ಸ್ವಾಗತ- ಪ್ರೀತಿಯಿಂದ ಮೋದಿ ಸ್ವಾಗತಿಸಿದ ಭೂತಾನ್‌ ಪ್ರಧಾನಿ

ಎರಡು ದಿನಗಳ ಭೇಟಿಗಾಗಿ ಭೂತಾನ್‌ (Bhutan) ತಲುಪಿದ ನರೇಂದ್ರ ಮೋದಿಯವರಿಗೆ (Narendra Modi) ಭವ್ಯ ಸ್ವಾಗತ ಕೋರಲಾಗಿದೆ. ಭೂತಾನ್‌ ಪ್ರಧಾನಿ ತ್ಶೆರಿಂಗ್ ಟೊಬ್ಗೇ ಅವರು ಮೋದಿಯವರನ್ನು ಆಲಿಂಗಿಸಿ ʼನನ್ನ ಹಿರಿಯ ಸಹೋದರ ನಿಮಗೆ ಸ್ವಾಗತʼ ಎಂದು ಹೇಳಿದ್ದಾರೆ.

Share This Article