ಬಿಹಾರ ಜಾತಿ ಸಮೀಕ್ಷೆ ವರದಿ ಬಿಡುಗಡೆ; ಜಾತಿ ಹೆಸರಲ್ಲಿ ದೇಶ ವಿಭಜಿಸುವ ಪ್ರಯತ್ನವೆಂದು ಮೋದಿ ವಾಗ್ದಾಳಿ

Public TV
3 Min Read
Bihar

ಪಾಟ್ನಾ: ಮುಂಬರುವ 2024ರ ಲೋಕಸಭೆ ಚುನಾವಣೆಗೂ ಮುನ್ನವೇ ನಿತೀಶ್‌ ಕುಮಾರ್‌ ನೇತೃತ್ವದ ಬಿಹಾರ ರಾಜ್ಯ ಸರ್ಕಾರ ಜಾತಿ ಆಧಾರಿತ ಸಮೀಕ್ಷಾ (Bihar Caste Survey) ವರದಿಯನ್ನು ಬಿಡುಗಡೆ ಮಾಡಿದೆ. ವರದಿ ಬಿಡುಗಡೆ ಮಾಡಿದ ಕೆಲವೇ ಗಂಟೆಗಳ ನಂತರ ಪ್ರಧಾನಿ ಮೋದಿ (Narendra Modi) ವಾಗ್ದಾಳಿ ನಡೆಸಿದ್ದಾರೆ. ಜಾತಿಯ ಹೆಸರಲ್ಲಿ ದೇಶವನ್ನ ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಯಾವುದೇ ಪಕ್ಷದ ಹೆಸರು ಉಲ್ಲೇಖಿಸದೇ ಬಿಹಾರ ಸರ್ಕಾರದ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

ಅಧಿಕಾರದಲ್ಲಿದ್ದಾಗ ಅಭಿವೃದ್ಧಿ ಸಾಧಿಸುವಲ್ಲಿ ವಿಫಲರಾಗಿದ್ದಾರೆ. ಈಗ ಬಡವರ ಭಾವನೆಗಳೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಅಂದಿನಿಂದಲೂ ಬಡವರ ಭಾವನೆಗಳೊಂದಿಗೆ ಆಟವಾಡುವ ಪ್ರವೃತ್ತಿಯನ್ನ ಮುಂದುವರಿಸಿಕೊಂಡು ಬಂದಿದ್ದಾರೆ. ಮೊದಲು ಜಾತಿ ಹೆಸರಿನಲ್ಲಿ ದೇಶವನ್ನ ಒಡೆದರು, ಇಂದು ಅದೇ ಪಾಪ ಕೃತ್ಯವನ್ನು ಮಾಡುತ್ತಿದ್ದಾರೆ. ಭ್ರಷ್ಟಾಚಾರಿಗಳು ಇನ್ನಷ್ಟು ಭ್ರಷ್ಟಾಚಾರಿಗಳಾಗಿದ್ದಾರೆ. ಜಾತಿ ಆಧಾರದ ಮೇಲೆ ದೇಶವನ್ನು ವಿಭಜನೆ ಮಾಡುವ ಯಾವುದೇ ಪ್ರಯತ್ನವೂ ಪಾಪಕ್ಕೆ ಸಮಾನ ಎಂದು ಮೋದಿ ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ ಸ್ಲೀಪರ್ ಸೆಲ್‌ಗಳ ಅಡ್ಡವಾಗ್ತಿದೆ, ಹಿಂದೂಗಳು ಭಯದಲ್ಲಿ ಬದುಕುವಂತಾಗಿದೆ: ವೇದವ್ಯಾಸ್ ಕಾಮತ್

ಇನ್ನೂ ಬಿಹಾರ ಸರ್ಕಾರದ ಜಾತಿ ಸಮೀಕ್ಷಾ ವರದಿಗೆ ಪ್ರತಿಕ್ರಿಯಿಸಿದ ಸಂಸದ ರಾಹುಲ್‌ ಗಾಂಧಿ, ಕೇಂದ್ರ ಸರ್ಕಾರವೂ ಶೀಘ್ರವೇ ರಾಷ್ಟ್ರೀಯ ಜಾತಿ ಗಣತಿಯನ್ನು ನಡೆಸಬೇಕು. ಹಿಂದಿನ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರವು ವಾಸ್ತವಾಗಿ ಜಾತಿಗಣತಿಯನ್ನ ಪೂರ್ಣಗೊಳಿಒಸಿದೆ. ಆದ್ರೆ ಅದರ ಫಲಿತಾಂಶಗಳನ್ನ ಮೋದಿ ಸರ್ಕಾರ ಪ್ರಕಟಿಸಲಿಲ್ಲ ಎಂದು ಅಸಮಾಧಾನ ಹೊರಹಾಕಿದರಲ್ಲದೇ, ನೊಂದ ಸಮಾಜಗಳ ಸಬಲೀಕರಣಗೊಳಿಸಲು ಹಾಗೂ ಭದ್ರ ಅಡಿಪಾಯ ಹಾಕಿಕೊಡಲು ಜಾತಿಗಣತಿ ಅತ್ಯವಶ್ಯಕ ಎಂದು ಪ್ರತಿಪಾದಿಸಿದ್ದಾರೆ.  ಇದನ್ನೂ ಓದಿ: Asian Games 2023: ಪಾರುಲ್‌ ಕಣ್ಣಲ್ಲಿ ಬೆಳ್ಳಿ ಬೆಳಕು – 9ನೇ ದಿನವೂ ಭಾರತ ಪದಕಗಳ ಬೇಟೆ

ಜಾತಿಗಣತಿ ವರದಿ ಬಿಡುಗಡೆ:
2024ರ ಲೋಕಸಭೆ ಚುನಾವಣೆಗೂ ಮುನ್ನವೇ ನಿತೀಶ್‌ ಕುಮಾರ್‌ (Nitish Kumar) ನೇತೃತ್ವದ ಬಿಹಾರ ರಾಜ್ಯ ಸರ್ಕಾರ ಜಾತಿ ಆಧಾರಿತ ಸಮೀಕ್ಷೆಯ ವರದಿಯನ್ನು ಬಿಡುಗಡೆ ಮಾಡಿದೆ. ಈ ವರದಿಯ ಪ್ರಕಾರ, ರಾಜ್ಯದಲ್ಲಿ ಹಿಂದುಳಿದ ಸಮುದಾಯದ ಜನ 63% ಹಾಗೂ ಸಾಮಾನ್ಯ ವರ್ಗದ ಜನ 15.52% ಇದ್ದಾರೆ. ಅತ್ಯಂತ ಹಿಂದುಳಿದ ಜಾತಿಯ ಜನ 36.01%, ಹಿಂದುಳಿದ ಸಮುದಾಯ, 27.12% ಮತ್ತು ಸಾಮಾನ್ಯ ವರ್ಗ 15.52% ಇದ್ದಾರೆ. ಪರಿಶಿಷ್ಟ ಜಾತಿಯವರು 19.65% ಮತ್ತು ಪರಿಶಿಷ್ಟ ಪಂಗಡದವರು 1.68% ಇದ್ದಾರೆ. OBCಗಳಲ್ಲಿ ಯಾದವರು 14.26% ರಷ್ಟಿದ್ದರೆ, ಕುಶ್ವಾಹಾ ಮತ್ತು ಕುರ್ಮಿಗಳು ಕ್ರಮವಾಗಿ 4.27% ಮತ್ತು 2.87% ಜನಸಂಖ್ಯೆಯನ್ನ ಹೊಂದಿದ್ದಾರೆ. ಭೂಮಿಹಾರ್‌ಗಳು 2.86 ಪ್ರತಿಶತ, ಬ್ರಾಹ್ಮಣರು 3.66 ಪ್ರತಿಶತ, ಮುಸಾಹರ್‌ಗಳು 3 ಪ್ರತಿಶತ ಇದ್ದಾರೆ. ಇದನ್ನೂ ಓದಿ: ಭಯೋತ್ಪಾದಕರಿಗೆ ಕಾಂಗ್ರೆಸ್‌ ಮುಕ್ತ ಅವಕಾಶ ಕೊಟ್ಟಿದೆ; ಉದಯಪುರ ಟೈಲರ್‌ ಹತ್ಯೆ ಖಂಡಿಸಿದ ಮೋದಿ

ರಾಜ್ಯದಲ್ಲಿ ಒಟ್ಟು 13,07,25,310 ಜನಸಂಖ್ಯೆಯಿದೆ. ಮೀಸಲಾತಿಯಿಂದ ಹೊರಗಿರುವ ಜನಸಂಖ್ಯೆ 15.52% ಎಂದು ಬಿಹಾರ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿವೇಕ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ. ಬಿಹಾರ ಸರ್ಕಾರ ಈ ವರ್ಷದ ಜನವರಿಯಲ್ಲಿ ಜಾತಿ ಸರ್ವೆ ಮಾಡಿಸಿತ್ತು. ಜಾತಿ ಗಣತಿಗಾಗಿ 500 ಕೋಟಿ ರೂ. ಖರ್ಚು ಮಾಡಿತ್ತು. ರಾಜ್ಯದಾದ್ಯಂತ ಸುಮಾರು 2.64 ಲಕ್ಷ ಗಣತಿದಾರರು 2.9 ಕೋಟಿ ನೋಂದಾಯಿತ ಕುಟುಂಬಗಳ ವಿವರಗಳನ್ನು 17 ಸಾಮಾಜಿಕ ಆರ್ಥಿಕ ಮಾನದಂಡಗಳ ಮೇಲೆ ದಾಖಲಿಸಿದ್ದಾರೆ.

Web Stories

Share This Article