– 2029ರಲ್ಲೂ ಮೋದಿಯೇ ಪ್ರಧಾನಿ, ಸಂಜಯ್ ರಾವತ್‌ಗೆ ಮೊಘಲರ ಮನಸ್ಥಿತಿ ಎಂದ ಫಡ್ನವಿಸ್
ನವದೆಹಲಿ: ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ನರೇಂದ್ರ ಮೋದಿ (Narendra Modi) ಭಾನುವಾರ ನಾಗ್ಪುರದ ಆರ್‌ಎಸ್‌ಎಸ್ ಕಚೇರಿಗೆ ಭೇಟಿ ನೀಡಿದ್ದರು. ಈ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಆರ್‌ಎಸ್‌ಎಸ್ ಕಚೇರಿಗೆ ಪ್ರಧಾನಿ ಭೇಟಿಯನ್ನು ಶಿವಸೇನೆ ನಾಯಕ ಸಂಜಯ್ ರಾವತ್ ಟೀಕಿಸಿದ್ದಾರೆ.
ಪ್ರಧಾನಿ ಮೋದಿಗೆ ಸೆಪ್ಟೆಂಬರ್ 17ಕ್ಕೆ 75 ವರ್ಷ ತುಂಬಲಿದೆ. ಅವರ ಪಕ್ಷದ ನಿಯಮದಂತೆ ನಿವೃತ್ತರಾಗಲು ಸಿದ್ಧತೆ ನಡೆಸಿದ್ದಾರೆ. ಹೀಗಾಗಿ, ತಮ್ಮ ನಿವೃತ್ತಿ ಅರ್ಜಿಯನ್ನು ಆರ್‌ಎಸ್‌ಎಸ್ ಕಚೇರಿಯಲ್ಲಿ ಸಲ್ಲಿಸಿರಬಹುದು. ಅಲ್ಲಿ ಗೌಪ್ಯವಾಗಿ ಚರ್ಚೆಯೂ ನಡೆದಿದೆ. ಅಲ್ಲದೇ ಸಂಘ ಪರಿವಾರವೂ ದೇಶದ ನಾಯಕತ್ವದಲ್ಲಿ ಬದಲಾವಣೆ ಬಯಸಿದೆ. ಪ್ರಧಾನಿ ಮೋದಿ ಕಾಲ ಮುಗಿದಿದೆ. ಅವರೂ ಕೂಡ ಬದಲಾವಣೆ ಬಯಸುತ್ತಾರೆ ಎಂದು ಸಂಜಯ್ ರಾವತ್ (Sanjay Raut) ಹೇಳಿದ್ದಾರೆ. ಇದನ್ನೂ ಓದಿ: ದಕ್ಷಿಣ ಭಾರತದ ಅತಿ ದೊಡ್ಡ ಅಂಗಾಂಗ ಮರು ಪಡೆಯುವ ಕೇಂದ್ರ ಬೆಂಗಳೂರಿನಲ್ಲಿ ಸ್ಥಾಪನೆ
ಸಂಜಯ್ ಮಾತಿಗೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ (Devendra Fadnavis) ಕಿಡಿಕಾರಿದ್ದಾರೆ. ಮೋದಿ ಉತ್ತರಾಧಿಕಾರಿಯನ್ನು ಹುಡುಕುವ ಪ್ರಶ್ನೆಯೇ ಇಲ್ಲ. ಮೋದಿ ನಮ್ಮ ನಾಯಕರು, ಅವರೇ ಮುಂದುವರಿಯುತ್ತಾರೆ. ಒಬ್ಬ ನಾಯಕ ಸಕ್ರಿಯನಾಗಿದ್ದಾಗ, ಅವನ ಉತ್ತರಾಧಿಕಾರದ ಬಗ್ಗೆ ಮಾತನಾಡುವುದು ಸರಿಯಲ್ಲ. ನಮ್ಮ ಸಮಾಜದಲ್ಲಿ ತಂದೆ ಜೀವಂತವಾಗಿರುವಾಗ, ನಾವು ಉತ್ತರಾಧಿಕಾರದ ಬಗ್ಗೆ ಮಾತನಾಡುವುದಿಲ್ಲ. ಇದು ಮೊಘಲ್ ಸಂಸ್ಕೃತಿ, ನಮ್ಮದಲ್ಲ. ಅದರ ಸಮಯ ಇನ್ನೂ ಬಂದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಏ.2ಕ್ಕೆ ವಕ್ಫ್ ತಿದ್ದುಪಡಿ ಬಿಲ್‌ಗೆ ಕೇಂದ್ರ ಸಿದ್ಧತೆ – ಈಗ ಏನಿದೆ? ಏನು ಬದಲಾಗಲಿದೆ?