Connect with us

Bengaluru City

ಮೋದಿಯ ‘ಮೋಡಿ’ ಅಮಿತ್ ಶಾ `ಮ್ಯಾಜಿಕ್’ ಎಲ್ಲವೂ ಬರಿ ಕನಸು- ಸಿದ್ದು ಲೇವಡಿ

Published

on

– ರಾಹುಲ್ ಗಾಂಧಿಯೇ ಮುಂದಿನ ಪ್ರಧಾನಿ

ಬೆಂಗಳೂರು: ಭಾರತದಲ್ಲಿ ಇನ್ನುಮುಂದೆ ಪ್ರಧಾನಿ ನರೇಂದ್ರ ಮೋದಿಯ ಮೋಡಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ರವರ ಯಾವುದೇ ಮ್ಯಾಜಿಕ್ ಗಳು ಬರಿ ಕನಸ್ಸೆಂದು ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

ಟ್ವೀಟ್ ನಲ್ಲಿ ಪ್ರಧಾನಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷರ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಪಂಚರಾಜ್ಯ ಚುನಾವಣೆಯಲ್ಲಿ ಸೋಲನ್ನು ಕಂಡಿರುವ ಬಿಜೆಪಿಗೆ ರಾಷ್ಟ್ರದಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೋರಾಡಬೇಕಾದ ದುಸ್ಥಿತಿ ಬಂದಿದೆ. ದೇಶದಲ್ಲಿ ಪ್ರಧಾನಿ ಮೋದಿಯವರ ವರ್ಚಸ್ಸು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಹೀಗಾಗಿ ಇನ್ನುಮುಂದೆ ದೇಶದಲ್ಲಿ ಮೋದಿಯ ಮೋಡಿ ಹಾಗೂ ಅಮಿತ್ ಶಾ ಮ್ಯಾಜಿಕ್ ಎಲ್ಲವೂ ಬರಿ ಕನಸಷ್ಟೇ ಎಂದು ಕಿಡಿಕಾರಿದ್ದಾರೆ.

ಈಗಾಗಲೇ ಕಾಂಗ್ರೆಸ್ ಜಯಗಳಿಸಿರುವ ರಾಜ್ಯಗಳಲ್ಲಿ ರೈತರ ಸಾಲಮನ್ನಾ ಘೋಷಣೆ ಮಾಡಲಾಗಿದೆ. ಈ ಹಿಂದೆ ಅಧಿಕಾರಕ್ಕೆ ಬಂದರೇ, ದೇಶದ ರೈತರ ಸಾಲಮನ್ನಾ ಮಾಡುವುದಾಗಿ ಹೇಳಿದ್ದ ಬಿಜೆಪಿ ರಾಷ್ಟ್ರದಲ್ಲಿ ಅಧಿಕಾರಕ್ಕೆ ಬಂದು ನಾಲ್ಕೂವರೆ ವರ್ಷಗಳಾದರೂ ಬಡ ರೈತರ ಕಡೆಗೆ ಕಣ್ಣೆತ್ತಿಯೂ ನೋಡುತ್ತಿಲ್ಲ. ಬಡವರ ಕಷ್ಟಕ್ಕೆ ಮಿಡಿಯದ ಈ 56 ಇಂಚಿನ ಎದೆಯಿದ್ದು ಏನು ಉಪಯೋಗವೆಂದು ಟಾಂಗ್ ನೀಡಿದ್ದಾರೆ.

ಬರೀ ಭಾಷಣಗಳು ಜನರ ಹೊಟ್ಟೆ ತುಂಬಿಸಲಾರದು ಎಂಬುದನ್ನು ಬಿಜೆಪಿ ಇನ್ನೂ ಅರಿತಿಲ್ಲ. ಹೀಗಾಗಿಯೇ ಕೋಮುವಾದ ಬಿಟ್ಟು ಅಭಿವೃದ್ಧಿಯ ಕಡೆಗೆ ಅವರು ಮಾತನಾಡುವುದಿಲ್ಲ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲುವುದು ಎಷ್ಟು ಸತ್ಯವೋ, ರಾಹುಲ್ ಗಾಂಧಿ ಪ್ರಧಾನಿಯಾಗುವುದು ಅಷ್ಟೇ ಸತ್ಯ ಎಂದು ಭವಿಷ್ಯ ನುಡಿದಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *