ಬೆಂಗಳೂರು: ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಕೇಂದ್ರ ಸಂಸದೀಯ ಮಂಡಳಿಯಲ್ಲಿ ಮಹತ್ವದ ಸ್ಥಾನ ಸಿಕ್ಕಿದೆ. ಈ ಮೂಲಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮಾಸ್ಟರ್ ಸ್ಟ್ರೋಕ್ ಎಂಬಂತೆ ಬಿಎಸ್‌ವೈ ಅವರಿಗೆ ಹೈಕಮಾಂಡ್ ಸ್ಥಾನ ನೀಡಿದೆ.
ಕೇಂದ್ರ ಚುನಾವಣೆ ಸಮಿತಿಯಲ್ಲೂ ಯಡಿಯೂರಪ್ಪ ಅವರಿಗೆ ಸ್ಥಾನ ಸಿಕ್ಕಿದೆ. ಚುನಾವಣೆಯ ಸಮಯದಲ್ಲಿ ಟಿಕೆಟ್ ಹಂಚಿಕೆ ಸೇರಿದಂತೆ ಮಹತ್ವದ ತೀರ್ಮಾನಗಳನ್ನು ಈ ಸಮಿತಿ ಕೈಗೊಳ್ಳುತ್ತದೆ.
Advertisement
भाजपा राष्ट्रीय अध्यक्ष श्री @JPNadda ने पार्टी के केंद्रीय संसदीय बोर्ड का गठन किया है। जिसके सदस्य निम्न प्रकार रहेंगे :- pic.twitter.com/pmxGE5fJ7E
— BJP (@BJP4India) August 17, 2022
Advertisement
ವಿಧಾನಸಭಾ ಚುನಾವಣೆ ಹತ್ತಿರ ಇರುವಂತೆ ಬಿಜೆಪಿಯ ಸಂಸದೀಯ ಮಂಡಳಿ ಪುನಾರಚನೆಯಾಗಿದ್ದು, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ, ಪ್ರಧಾನಿ ನರೇಂದ್ರ ಮೋದಿ, ರಾಜನಾಥ್ ಸಿಂಗ್, ಅಮಿತ್ ಶಾ ನಂತರ ಯಡಿಯೂರಪ್ಪ ಅವರಿಗೆ ಸ್ಥಾನ ಸಿಕ್ಕಿದೆ.
Advertisement
भाजपा राष्ट्रीय अध्यक्ष श्री @JPNadda ने पार्टी की केंद्रीय चुनाव समिति का गठन किया है। जिसके सदस्य निम्न प्रकार रहेंगे :- pic.twitter.com/jUw5ei8VzE
— BJP (@BJP4India) August 17, 2022
Advertisement
ಸಂಸದೀಯ ಸಮಿತಿಯಲ್ಲಿ ಯಾರಿದ್ದಾರೆ? ಜೆಪಿ ನಡ್ಡಾ, ನರೇಂದ್ರ ಮೋದಿ, ರಾಜನಾಥ್ ಸಿಂಗ್, ಅಮಿತ್ ಶಾ, ಬಿ.ಎಸ್. ಯಡಿಯೂರಪ್ಪ, ಸರ್ಬಾನಂದ ಸೋನೋವಾಲ, ಕೆ ಲಕ್ಷ್ಮಣ್, ಇಕ್ಬಾಲ್ ಸಿಂಗ್ ಲಾಲ್ಪುರ, ಸುಧಾ ಯಾದವ್, ಸತ್ಯನಾರಾಯಣ ಜಾತಿಯ, ಬಿಎಲ್ ಸಂತೋಷ್, ಭೂಪೇಂದ್ರ ಯಾದವ್, ದೇವೇಂದ್ರ ಫಡ್ನಾವೀಸ್ ಅವರಿಗೆ ಸ್ಥಾನ ಸಿಕ್ಕಿದೆ.