ನವದೆಹಲಿ: ಮತ್ತೆ ಬಿಜೆಪಿ ಹೈಕಮಾಂಡ್ (BJP High Command) ಅಚ್ಚರಿ ನೀಡಿದೆ. ಮೊದಲ ಬಾರಿಯ ಶಾಸಕಿ ರೇಖಾ ಗುಪ್ತಾ (Rekha Gupta) ಅವರಿಗೆ ಮುಖ್ಯಮಂತ್ರಿ (Chief Minister) ಪಟ್ಟವನ್ನು ನೀಡಿದೆ.
27 ವರ್ಷದ ಬಳಿಕ ದೆಹಲಿಯನ್ನು ಗೆದ್ದ ಬಿಜೆಪಿಯಲ್ಲಿ ಸಿಎಂ ಅಭ್ಯರ್ಥಿ ಯಾರಾಗುತ್ತಾರೆ ಎಂಬ ಪ್ರಶ್ನೆ ಎದ್ದಿತ್ತು. ಮಾಧ್ಯಮಗಳಲ್ಲಿ ಹಲವಾರು ಹೆಸರುಗಳು ಹರಿದಾಡುತ್ತಿತ್ತು. ಆದರಲ್ಲೂ ಅರವಿಂದ ಕೇಜ್ರಿವಾಲ್ ಅವರನ್ನು ಸೋಲಿಸಿದ ಪರ್ವೇಶ್ ವರ್ಮಾ ಹೆಸರು ಮುಂಚೂಣಿಯಲ್ಲಿತ್ತು. ಆದರೆ ಪ್ರತಿ ಬಾರಿ ಅಚ್ಚರಿ ನೀಡುವಂತೆ ಬಿಜೆಪಿ ಹೈಕಮಾಂಡ್ ದೆಹಲಿಯಲ್ಲಿ ಮೊದಲ ಬಾರಿ ಆಯ್ಕೆಯಾದ ರೇಖಾ ಗುಪ್ತಾ ಅವರಿಗೆ ಮಣೆ ಹಾಕಿದೆ.
Advertisement
ದೆಹಲಿ ಚುನಾವಣೆಯಲ್ಲಿ ಸಂದರ್ಭದಲ್ಲಿ ಬಿಜೆಪಿ ಸಿಎಂ ಅಭ್ಯರ್ಥಿ ಹೆಸರನ್ನು ಪ್ರಕಟಿಸಿರಲಿಲ್ಲ.ಆಪ್ ದೆಹಲಿಯಲ್ಲಿ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಇಲ್ಲ ಎಂದೇ ಟೀಕಿಸಿತ್ತು. ಬಿಜೆಪಿ ಎಲ್ಲಾ ನಾಯಕರು ಸಂಘಟಿತವಾಗಿ ಹೋರಾಡಿದ್ದರು. ಅದರಲ್ಲೂ ಪೋಸ್ಟರ್‌ಗಳಲ್ಲಿ ಮೋದಿ ಮುಖವೇ ಕಾಣುತ್ತಿತ್ತು.
Advertisement
Advertisement
ಈ ಹಿಂದೆ ಹಲವು ರಾಜ್ಯಗಳಲ್ಲಿ ಬಿಜೆಪಿ ಅಚ್ಚರಿಯ ಸಿಎಂ ಅಭ್ಯರ್ಥಿಯನ್ನು ಆಯ್ಕೆ ಮಾಡಿತ್ತು. ಈ ಆಯ್ಕೆಯ ಪಟ್ಟಿಗೆ ಈಗ ರೇಖಾ ಗುಪ್ತಾ ಹೊಸದಾಗಿ ಸೇರ್ಪಡೆಯಾಗಿದ್ದಾರೆ.
Advertisement
ಬುಧವಾರ ನಡೆದ ದೆಹಲಿಯ ಬಿಜೆಪಿ ಕಚೇರಿಯಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಸರ್ವಾನುಮತದಿಂದ ರೇಖಾ ಗುಪ್ತಾರನ್ನು ಆಯ್ಕೆ ಮಾಡಲಾಗಿದೆ. ಇಂದು ಮಧ್ಯಾಹ್ನ ರಾಮಲೀಲಾ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನೂತನ ಸಿಎಂ ಆಗಿ ಪದಗ್ರಹಣ ಮಾಡಲಿದ್ದಾರೆ. ಇದಕ್ಕೆ ಪ್ರಧಾನಿ ಸೇರಿ ಗಣ್ಯರು ಸಾಕ್ಷಿಯಾಗಲಿದ್ದಾರೆ. ಇದನ್ನೂ ಓದಿ: ಮಾಜಿ ಸಿಎಂ ನಿಜಲಿಂಗಪ್ಪ ರಾಜೀನಾಮೆಗೆ ಕಾರಣವಾಗಿದ್ದ ರಾಜ್ಯದ ಮೊದಲ ಲಾಕಪ್‍ಡೆತ್ ನಡೆದ ಸ್ಟೇಷನ್ ಇನ್ನೂ ನೆನಪು ಮಾತ್ರ!
ಎಲ್ಲೆಲ್ಲಿ ಅಚ್ಚರಿ ಸಿಎಂ:
ಯೋಗಿ ಅದಿತ್ಯನಾಥ್(ಉತ್ತರ ಪ್ರದೇಶ), ಬಸವರಾಜ ಬೊಮ್ಮಾಯಿ(ಕರ್ನಾಟಕ), ಭೂಪೇಂದ್ರ ಪಟೇಲ್(ಗುಜರಾತ್), ನಯಾಬ್ ಸಿಂಗ್ ಸೈನಿ(ಹರ್ಯಾಣ), ಭಜನ್‌ಲಾಲ್ ಶರ್ಮಾ(ರಾಜಸ್ಥಾನ), ಮೋಹನ್ ಯಾದವ್(ಮಧ್ಯಪ್ರದೇಶ), ಪುಷ್ಕರ್ ಸಿಂಗ್ ಧಾಮಿ(ಉತ್ತರಾಖಂಡ), ವಿಷ್ಣುದೇವ ಸಾಯಿ(ಛತ್ತೀಸ್‌ಗಢ).
ರೇಖಾ ಆಯ್ಕೆಗೆ ಕಾರಣ ಏನು?
ಪರ್ವೇಶ್ ಮಾಜಿ ಸಿಎಂ ಸಾಹಿಬ್ ಸಿಂಗ್ ವರ್ಮಾ ಅವರ ಮಗನಾಗಿದ್ದಾರೆ. ಅವರಿಗೆ ಸಿಎಂ ಪಟ್ಟ ನೀಡಿದರೆ ಕುಟುಂಬ ರಾಜಕಾರಣದ ಆರೋಪ ಬರುತ್ತಿತ್ತು. 27 ವರ್ಷದ ನಂತರ ಅಧಿಕಾರಕ್ಕೆ ಬಂದಿರುವುದರ ಜೊತೆ ಮೊದಲ ಸಲ ಶಾಸಕರಾಗಿರುವ ಕಾರಣ ಸದ್ಯ ಬಿಜೆಪಿಯಲ್ಲಿ ಯಾವುದೇ ಬಣ ರಾಜಕೀಯ ಇಲ್ಲ. ಈ ಕಾರಣಕ್ಕೆ ಮೊದಲ ಬಾರಿಗೆ ಗೆದ್ದಿರುವ ರೇಖಾ ಗುಪ್ತ ಅವರನ್ನು ಆಯ್ಕೆ ಮಾಡಲಾಗಿದೆ ಎನ್ನಲಾಗುತ್ತಿದೆ.
ರೇಖಾಗುಪ್ತಾ ಪ್ರಬಲ ಬನಿಯಾ ಸಮುದಾಯಕ್ಕೆ ಸೇರಿದ ನಾಯಕಿಯಾಗಿದ್ದಾರೆ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಅರವಿಂದ್ ಕೇಜ್ರಿವಾಲ್ ಕೂಡಾ ಬನಿಯಾ ಸಮುದಾಯಕ್ಕೆ ಸೇರಿದ್ದರು. ಚುನಾವಣೆ ಸಮಯದಲ್ಲಿ ದೆಹಲಿ ಸಿಎಂ ಅತಿಶಿಯಾಗಿದ್ದರು. ಈಗ ರೇಖಾ ಅವರನ್ನು ಆಯ್ಕೆ ಮಾಡುವ ಮೂಲಕ ಮಹಿಳೆಗೆ ಆದ್ಯತೆ ನೀಡಲಾಗಿದೆ ಎಂಬ ಸಂದೇಶವನ್ನು ಕಳುಹಿಸಿದಂತಾಗುತ್ತದೆ. ಇದನ್ನೂ ಓದಿ: ಮೂವರು ಆಪ್ ಕೌನ್ಸಿಲರ್‌ಗಳು ಬಿಜೆಪಿ ಸೇರ್ಪಡೆ – ದೆಹಲಿಯಲ್ಲಿ ಟ್ರಿಪಲ್ ಎಂಜಿನ್ ಸರ್ಕಾರ ಬರುತ್ತಾ?
ದೇಶದಲ್ಲಿ ಆಡಳಿತದಲ್ಲಿರುವ ಬಿಜೆಪಿ ಮತ್ತು ಎನ್‌ಡಿಎ ಸರ್ಕಾರಗಳಲ್ಲಿ ಮಹಿಳಾ ಡಿಸಿಎಂಗಳಿದ್ದಾರೆ. ಆದರೆ ಎಲ್ಲೂ ಮಹಿಳಾ ಸಿಎಂ ಇರಲಿಲ್ಲ. ಹೀಗಾಗಿ ಬಿಜೆಪಿ ಹೈಕಮಾಂಡ್ ರಾಷ್ಟ್ರ ರಾಜಧಾನಿಯಲ್ಲೇ ಮಹಿಳೆಗೆ ಪಟ್ಟಕಟ್ಟಿದೆ. ಓಬಿಸಿ ನಾಯಕರನ್ನು ಆಯ್ಕೆ ಮಾಡಿದರೆ ಬಿಜೆಪಿ ಮಾತ್ರವಲ್ಲದೇ ಇತರ ರಾಜ್ಯಗಳಲ್ಲಿ ತನ್ನ ಮತದಾರರನ್ನು ಬಲಪಡಿಸುವ ಗುರಿ ಹೊಂದಿದೆ.
ಅಧಿಕಾರದಲ್ಲಿರುವ ಸರ್ಕಾರಗಳ ಪೈಕಿ ಸದ್ಯ ಪಶ್ಚಿಮ ಬಂಗಾಳದಲ್ಲಿರುವ ಮಮತಾ ಬ್ಯಾನರ್ಜಿ ಒಬ್ಬರೇ ಮಹಿಳಾ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದಾರೆ. ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ, ದೇಶದಲ್ಲಿ ಎಲ್ಲಿಯೂ ಮಹಿಳಾ ಸಿಎಂ ಅಧಿಕಾರದಲ್ಲಿ ಇಲ್ಲ. ಟಿಎಂಸಿಗೆ ಮತ ನೀಡುವ ಮೂಲಕ ನಮ್ಮನ್ನು ಉಳಿಸಬೇಕು ಎಂದು ಮತದಾರರಲ್ಲಿ ಮನವಿ ಮಾಡುತ್ತಿದ್ದರು. ಆದರೆ ಮುಂದಿನ ಚುನಾವಣೆ ಮಮತಾ ಬ್ಯಾನರ್ಜಿ ಈ ಹೇಳಿಕೆ ನೀಡಲು ಸಾಧ್ಯವಾಗುವುದಿಲ್ಲ.