ನವದೆಹಲಿ: ಕಾಂಗ್ರೆಸ್‍ಗೆ (DK Suresh) ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ಈಗ ಭಾರತದಲ್ಲಿ ಅರಾಜಕತೆ ಮತ್ತು ಅಸ್ಥಿರತೆಯನ್ನು ಸೃಷ್ಠಿಸಲು ಬಯಸುತ್ತಿದೆ. ದೇಶವನ್ನು ಎರಡು ಭಾಗ ಮಾಡುವ ಬಗ್ಗೆ ಮಾತನಾಡಿದ ಕರ್ನಾಟಕದ ನಾಯಕನಿಗೆ ಟಿಕೆಟ್ ನೀಡಿದೆ ಎಂದು ಸಂಸದ ಡಿ.ಕೆ ಸುರೇಶ್ (DK Suresh) ಹೇಳಿಕೆ ಪ್ರಸ್ತಾಪಿಸಿ ಪ್ರಧಾನಿ ನರೇಂದ್ರ ಮೋದಿ (Narendra Modi) ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಉತ್ತರಾಖಂಡದ ರುದ್ರಪುರದಲ್ಲಿ ಸಾರ್ವಜನಿಕ ರ‍್ಯಾಲಿಯಲ್ಲಿ (Uttarakhand BJP Rally) ಮಾತನಾಡಿದ ಅವರು, ಕೇವಲ 10 ವರ್ಷ ಅಧಿಕಾರದಿಂದ ದೂರ ಉಳಿದಿರುವ ಕಾಂಗ್ರೆಸ್ ಭಾರತದಲ್ಲಿ ಬೆಂಕಿ ಹೊತ್ತಿಸುವ ಬಗ್ಗೆ ಮಾತನಾಡಲು ಪ್ರಾರಂಭಿಸಿದೆ. ಅಂತಹವರಿಗೆ ನೀವು ಶಿಕ್ಷೆ ನೀಡುತ್ತೀರಾ? ಎಂದು ಜನರನ್ನು ಪ್ರಶ್ನಿಸಿದರು. ಈ ಬಾರಿಯ ಚುನಾವಣೆಯಲ್ಲಿ ಅವರನ್ನು ಕ್ಷೇತ್ರದಲ್ಲಿ ಬಿಡಬೇಡಿ ಎಂದು ಕರೆ ನೀಡಿದ್ದಾರೆ. ಇದನ್ನೂ ಓದಿ: ಬಿಜೆಪಿ ಸೇರಿ ಇಲ್ಲವೇ ಬಂಧನಕ್ಕೆ ಸಿದ್ಧರಾಗಿ – ಆಪ್ ಸಚಿವೆ ಅತಿಶಿ ಗಂಭೀರ ಆರೋಪ
- Advertisement
ದೇಶವನ್ನು ವಿಭಜಿಸುವ ಬಗ್ಗೆ ಮಾತನಾಡುವವರಿಗೆ ಶಿಕ್ಷೆಯಾಗಬೇಕಲ್ಲವೇ? ಅವರನ್ನು ಶಿಕ್ಷಿಸುವ ಬದಲು ಕಾಂಗ್ರೆಸ್ ಚುನಾವಣಾ (Lok Sabha Election 2024) ಟಿಕೆಟ್ ನೀಡಿದೆ ಎಂದು ಪರೋಕ್ಷವಾಗಿ ಡಿ.ಕೆ ಸುರೇಶ್ ಹೆಸರು ಹೇಳದೆಯೇ ಕಿಡಿ ಕಾರಿದ್ದಾರೆ.
- Advertisement
ಬಿಜೆಪಿ ಬೆಂಬಲಿಸುವಂತೆ ಮನವಿ:
ನಾವು ಮಹಿಳೆಯರ ಸಬಲೀಕರಣಕ್ಕಾಗಿ `ನಮೋ ಡ್ರೋನ್ ದೀದಿ’ ಯೋಜನೆಯನ್ನು ಪ್ರಾರಂಭಿಸಿದ್ದೇವೆ. ಈ ಯೋಜನೆ ಅಡಿಯಲ್ಲಿ, ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳಿಗೆ ಡ್ರೋನ್ ಪೈಲಟ್‍ಗಳಾಗಲು ಸಹಾಯ ಮಾಡಲು ಲಕ್ಷಾಂತರ ರೂಪಾಯಿ ಮೌಲ್ಯದ ಡ್ರೋನ್‍ಗಳನ್ನು ನೀಡಲಾಗುತ್ತಿದೆ. ಇದು ಉತ್ತರಾಖಂಡದ ನಮ್ಮ ಹೆಣ್ಣುಮಕ್ಕಳು ಮತ್ತು ಸಹೋದರಿಯರಿಗೂ ಪ್ರಯೋಜನ ನೀಡುತ್ತದೆ. ಉತ್ತರಾಖಂಡ ಅಭಿವೃದ್ದಿಗೆ ಕೇಂದ್ರ ಬದ್ಧವಾಗಿದೆ. ನಮ್ಮ ಇಚ್ಛೆ ಸರಿಯಾಗಿದ್ದರೆ ಅದರ ಫಲಿತಾಂಶವೂ ಸರಿಯಾಗಿರುತ್ತದೆ. ಮತ್ತಷ್ಟು ಕೆಲಸ ಮಾಡಲು ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಹೊಸ ಮಧ್ಯ ನೀತಿಯಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪ – ಎಎಪಿ ಸಂಸದ ಸಂಜಯ್ ಸಿಂಗ್‌ಗೆ ಸುಪ್ರೀಂ ಜಾಮೀನು