ಮೋದಿಗೆ ಬಾಹ್ಯಾಕಾಶ, ಅಮಿತ್‌ ಶಾಗೆ ಗೃಹ ಖಾತೆ – ಜೆ.ಪಿ ನಡ್ಡಾಗೆ ಆರೋಗ್ಯ ಖಾತೆ ಗಿಫ್ಟ್

Public TV
2 Min Read
narendra modi and 72 union ministers 1

– ರಾಜನಾಥ್ ಸಿಂಗ್‌, ನಿರ್ಮಲಾ, ಜೈಶಂಕರ್‌ಗೆ ಖಾತೆ ಬದಲಿಲ್ಲ!

ನವದೆಹಲಿ: ನರೇಂದ್ರ ಮೋದಿ (Narendra Modi) ಅವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ನೂತನ ಸಚಿವರಿಗೆ ಖಾತೆ ಹಂಚಿಕೆ (Portfolios) ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರಿಂದು ತಮ್ಮ ನಿವಾಸದಲ್ಲಿ ಎನ್‌ಡಿಎಸ ಸರ್ಕಾರದ ಮೊದಲ ಸಂಪುಟ ಸಭೆ ನಡೆಸಿದರು. ಸಂಪುಟ ಸಭೆಯಲ್ಲಿ ಪಾಲ್ಗೊಂಡಿದ್ದ 30 ಸಂಪುಟ ದರ್ಜೆ ಸಚಿವರು, ಐವರು ಸ್ವತಂತ್ರ ಖಾತೆ ನಿರ್ವಹಣೆ ಹಾಗೂ 36 ರಾಜ್ಯ ಖಾತೆ ಸಚಿವರಿಗೆ ಖಾತೆ ಹಂಚಿಕೆ ಮಾಡಿದರು. ಈ ವೇಳೆ ಪ್ರಬಲ ಖಾತೆಗಳನ್ನು ಬಿಜೆಪಿ ಸಚಿವರಿಗೇ ನೀಡಿದ್ದಾರೆ. ಇದನ್ನೂ ಓದಿ: Modi cabinet: ಕರ್ನಾಟಕದ ನಾಲ್ವರು ಸಚಿವರಿಗೆ ಬಂಪರ್‌ – ಯಾರಿಗೆ ಯಾವ ಖಾತೆ?

Modi Cabinet

ಪ್ರಮುಖ ಖಾತೆಗಳಾದ ಗೃಹ, ಹಣಕಾಸು, ರಕ್ಷಣಾ, ವಿದೇಶಾಂಗ, ರೈಲ್ವೇ, ರಸ್ತೆ ಸಾರಿಗೆ ಖಾತೆಗಳನ್ನು ಬಿಜೆಪಿ ತಮ್ಮ ಬಳಿಯೇ ಇಟ್ಟುಕೊಂಡಿದೆ. ಕಳೆದ ಸಂಪುಟದಲ್ಲಿ ಈ ಖಾತೆಗಳನ್ನು ಹೊಂದಿದ್ದ ಪ್ರಮುಖರಿಗೆ ಮತ್ತದೇ ಖಾತೆಗಳ ಜವಾಬ್ದಾರಿ ನೀಡಿದೆ.

ಈ ಬಾರಿಯ ಆಡಳಿತದಲ್ಲಿ ಮೂಲಸೌಕರ್ಯ ವಲಯಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡಲಾಗುತ್ತದೆ ಎಂದು ಈ ಹಿಂದೆಯೇ ಮೋದಿ ಹೇಳಿದ್ದರು. ಹೀಗಾಗಿ ಪ್ರಬಲ ಖಾತೆಗಳನ್ನು ತಮ್ಮ ಬಳಿಯೇ ಉಳಿಸಿಕೊಂಡಿದೆ. ಸಾರ್ವಜನಿಕ ಕುಂದುಕೊರತೆ, ಪಿಂಚಣಿ, ಅಣುಶಕ್ತಿ, ಬಾಹ್ಯಾಕಾಶ ಇಲಾಖೆ ಖಾತೆಗಳನ್ನು ಪ್ರಧಾನಿ ಮೋದಿ ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಜೆ.ಪಿ ನಡ್ಡಾ ಅವರಿಗೆ ಆರೋಗ್ಯ ಖಾತೆ ನೀಡಲಾಗಿದೆ.

narendra modi and 72 union ministers 2

ಇನ್ನೂ ಕೇಂದ್ರ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಪ್ರಮುಖ ಪಕ್ಷಗಳಿಗೂ ಮೋದಿ ಸಂಪುಟದಲ್ಲಿ ಪ್ರಮುಖ ಖಾತೆಗಳು ಲಭಿಸಿವೆ. ಕೃಷಿ ಖಾತೆ ನಿರೀಕ್ಷೆಯಲ್ಲಿದ್ದ ಹೆಚ್‌.ಡಿ ಕುಮಾರಸ್ವಾಮಿ ಅವರಿಗೆ ಉಕ್ಕು ಮತ್ತು ಬೃಹತ್‌ ಕೈಗಾರಿಕೆ ಖಾತೆ ನೀಡಲಾಗಿದೆ. ಈ ಹಿಂದೆ ಕೇಂದ್ರ ಸಂಸದೀಯ ಸಚಿವರಾಗಿದ್ದ ಪ್ರಹ್ಲಾದ್‌ ಜೋಶಿ ಅವರಿಗೂ ಖಾತೆ ಬದಲಾವಣೆ ಮಾಡಲಾಗಿದೆ. ಇದನ್ನೂ ಓದಿ: Modi cabinet: ಕರ್ನಾಟಕದ ನಾಲ್ವರು ಸಚಿವರಿಗೆ ಬಂಪರ್‌ – ಯಾರಿಗೆ ಯಾವ ಖಾತೆ?

ಕರ್ನಾಟಕದ ಯಾರಿಗೆ ಯಾವ ಖಾತೆ?

  • ಹೆಚ್‌.ಡಿ ಕುಮಾರಸ್ವಾಮಿ – ಉಕ್ಕು ಮತ್ತು ಬೃಹತ್‌ ಕೈಗಾರಿಕೆ
  • ಪ್ರಹ್ಲಾದ್‌ ಜೋಶಿ – ಆಹಾರ ಮತ್ತು ನಾಗರೀಕ ಸರಬರಾಜು ಖಾತೆ, ನವೀಕರಿಸಬಹುದಾದ ಇಂಧನ
  • ಶೋಭಾ ಕರಂದ್ಲಾಜೆ – ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ರಾಜ್ಯ ಖಾತೆ ಮತ್ತು ಕಾರ್ಮಿಕ ಇಲಾಖೆ ರಾಜ್ಯಖಾತೆ
  • ವಿ. ಸೋಮಣ್ಣ – ಜಲಶಕ್ತಿ ರಾಜ್ಯಖಾತೆ, ರೈಲ್ವೇ ಸಚಿವ ರಾಜ್ಯಖಾತೆ
  • ನಿರ್ಮಲಾ ಸೀತಾರಾಮನ್‌ – ಹಣಕಾಸು, ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ

Share This Article