ನವದೆಹಲಿ: ಸಿಬಿಐ ನಿರ್ದೇಶಕ ಸ್ಥಾನದಿಂದ ಅಲೋಕ್ ವರ್ಮಾ ಅವರನ್ನು ಉಚ್ಛಾಟಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಉನ್ನತಾಧಿಕಾರ ಸಮಿತಿಯ ಮಹತ್ವದ ನಿರ್ಧಾರ ಕೈಗೊಂಡಿದೆ.
ಪ್ರಧಾನಿ ನರೇಂದ್ರ ಮೋದಿ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎ.ಕಿ. ಸಿಕ್ರಿ., ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಇರುವ ಉನ್ನತಾಧಿಕಾರ ಸಮಿತಿ ಗುರುವಾರ ರಾತ್ರಿ ಸಭೆ ನಡೆಸಿ ಈ ನಿರ್ಧಾರ ಕೈಗೊಂಡಿದೆ.
Advertisement
ಅಲೋಕ್ ವರ್ಮಾ ವಿರುದ್ಧದ ಭ್ರಷ್ಟಾಚಾರ ಆರೋಪಗಳ ಸಂಬಂಧ ತನಿಖೆ ನಡೆಸಿದ್ದ ಸಿವಿಸಿ ವರದಿಯ ಆಧಾರದ ಮೇಲೆ ವಜಾ ಮಾಡಲಾಗಿದೆ. 2 ಗಂಟೆಗಳ ಚರ್ಚೆಯಲ್ಲಿ ಅಲೋಕ್ ವಜಾಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರು ಕಾರಣಗಳನ್ನು ಕೇಳಿದ್ದಾಗಿಯೂ, ಅವರಿಗೆ ಜಸ್ಟೀಸ್ ಎ.ಕೆ. ಸಿಕ್ರಿ ಅವರು ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮಗಳು ವರದಿ ಮಾಡಿದೆ.
Advertisement
Sources: CVC found evidence of influencing of investigation in Moin Qureshi case. There was also evidence of taking of bribe of Rs. 2 crore. CVC said Alok Verma's conduct in the case is suspicious, and there is a prima facie case against him. https://t.co/cfPFKWoSkC
— ANI (@ANI) January 10, 2019
Advertisement
ಅಲೋಕ್ ವರ್ಮಾ ಅವರನ್ನು ದೆಹಲಿ ಅಗ್ನಿಶಾಮಕ ದಳ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಅಲೋಕ್ ವರ್ಮಾ ಮತ್ತು ರಾಕೇಶ್ ಅಸ್ಥಾನ ನಡುವಿನ ವೈಮನಸ್ಸು ಬೀದಿಗೆ ಬಂದ ಹಿನ್ನೆಲೆಯಲ್ಲಿ ಅವರಿಬ್ಬರನ್ನೂ ಕೇಂದ್ರ ಸರ್ಕಾರ ಕಡ್ಡಾಯ ರಜೆ ನೀಡಿ ಕಳುಹಿಸಿತ್ತು.
Advertisement
ಸುಪ್ರೀಂ ಆದೇಶದಿಂದ ಬುಧವಾರ ಮರು ನೇಮಕವಾಗಿದ್ದ ಅಲೋಕ್ ಕುಮಾರ್, ಹಂಗಾಮಿ ಮುಖ್ಯಸ್ಥರಾಗಿದ್ದ ನಾಗೇಶ್ವರ ರಾವ್ ನೇಮಕಾತಿಯನ್ನು ರದ್ದುಗೊಳಿಸಿ, ಆಯಕಟ್ಟಿನ ಸ್ಥಳಕ್ಕೆ ತಮ್ಮ ಆಪ್ತರನ್ನು ನೇಮಿಸಿಕೊಂಡಿದ್ದರು. ಈಗ ಮತ್ತೆ ನಾಗೇಶ್ವರ ರಾವ್ ಹಂಗಾಮಿ ಮುಖ್ಯಸ್ಥರಾಗಿದ್ದಾರೆ. ಇದೇ 31ಕ್ಕೆ ವರ್ಮಾ ಅವರ ಅಧಿಕಾರವಧಿ ಅಂತ್ಯವಾಗಲಿದ್ದು, ಭ್ರಷ್ಟಾಚಾರ ಆರೋಪದಲ್ಲಿ ವಜಾಗೊಂಡ ಮೊದಲಿಗರಾಗಿದ್ದಾರೆ. ಇದನ್ನು ಓದಿ : ಸಿಬಿಐ ಅಧಿಕಾರಿಗಳಿಗೆ ಕಡ್ಡಾಯ ರಜೆ: ಕಿತ್ತಾಟ ಆರಂಭವಾಗಿದ್ದು ಹೇಗೆ? ಇಬ್ಬರ ಮೇಲಿರುವ ಆರೋಪ ಏನು?
ಏನಿದು ಪ್ರಕರಣ?:
ಅಲೋಕ್ ವರ್ಮಾ ಮತ್ತು ಸಿಬಿಐನ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾ ನಡುವಿನ ಆಂತರಿಕ ಕಲಹ ಉಂಟಾಗಿ, ಇಬ್ಬರ ಜಗಳ ಭಾರೀ ಚರ್ಚೆಗೆ ಕಾರಣವಾಗಿತ್ತು. ಒಬ್ಬರ ಮೇಲೆ ಒಬ್ಬರು ಆರೋಪ ಪ್ರತ್ಯಾರೋಪ ಮಾಡಿಕೊಂಡಿದ್ದರು. ಈ ಇಬ್ಬರು ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದಿತ್ತು. ಇದರಿಂದಾಗಿ ಅವರನ್ನ 2018ರ ಅಕ್ಟೋಬರ್ 23 ರಂದು ಕಡ್ಡಾಯ ರಜೆಯ ಮೇಲೆ ಕೇಂದ್ರ ಸರ್ಕಾರ ಕಳುಹಿಸಿತ್ತು. ಇದನ್ನು ವಿರೋಧಿಸಿ ಅಲೋಕ್ ವರ್ಮಾ ಕಾನೂನು ಹೋರಾಟ ನಡೆಸಿದ್ದರು.
CBI case: Suspended DSP Devender Kumar has approached the Delhi High Court against Director CBI Alok Verma's decision to reverse transfer of officers. pic.twitter.com/hyzTTIh5JF
— ANI (@ANI) January 10, 2019
ಪ್ರಕರಣದ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಅಲೋಕ್ ವರ್ಮಾ ವಿರುದ್ಧದ ಆರೋಪಗಳ ಕುರಿತು ಕೇಂದ್ರ ಜಾಗೃತ ಆಯೋಗ (ಸಿವಿಸಿ) ನಡೆಸುತ್ತಿರುವ ತನಿಖೆ ಪೂರ್ಣಗೊಳ್ಳಬೇಕು. ಅಲ್ಲಿಯವರೆಗೂ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ನಿರ್ಬಂಧ ಹೇರಿತ್ತು. ಈ ತೀರ್ಪಿನಿಂದಾಗಿ ಅಲೋಕ್ ವರ್ಮಾ 77 ದಿನಗಳ ಬಳಿಕ ಮತ್ತೆ ಸಿಬಿಐ ನಿರ್ದೇಶಕರಾಗಿ ನಿನ್ನೆ ಅಧಿಕಾರ ವಹಿಸಿಕೊಂಡು ಕಚೇರಿಗೆ ಮರಳಿದ್ದರು.
CBI director Alok Verma withdraws transfer orders made by M Nageswara Rao who was appointed as interim CBI Director. Section 4 and 5 of transfer orders not withdrawn. pic.twitter.com/MytrkgBf4M
— ANI (@ANI) January 9, 2019
ಅಲೋಕ್ ವರ್ಮಾ ರಜೆಯ ಮೇಲಿದ್ದ ವೇಳೆಯೇ ಮಧ್ಯಂತರ ನಿರ್ದೇಶಕರನ್ನಾಗಿ ಎಂ.ನಾಗೇಶ್ವರ ರಾವ್ ಅವರನ್ನು ನೇಮಿಸಲಾಗಿತ್ತು. ಈ ವೇಳೆ ವರ್ಮಾ ಆಪ್ತರಾದ 10 ಅಧಿಕಾರಿಗಳ ವರ್ಗಾವಣೆ ಆದೇಶಕ್ಕೆ ನಾಗೇಶ್ವರ ರಾವ್ ಸಹಿ ಹಾಕಿದ್ದರು. ಕಾನೂನು ಸಮರದ ಬಳಿಕ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ವರ್ಮಾ ಅವರು ಬಹುತೇಕ ವರ್ಗಾವಣೆಗಳನ್ನು ರದ್ದು ಮಾಡಿದ್ದರು. ಸುಪ್ರೀಂ ಯಾವುದೇ ನಿರ್ಧಾರಗಳನ್ನು ಕೈಗೊಳ್ಳುವಂತಿಲ್ಲ ಎಂದು ಸೂಚಿಸಿದ್ದರು ಆದೇಶಗಳನ್ನು ರದ್ದು ಮಾಡಿದ್ದು ಚರ್ಚೆಗೆ ಕಾರಣವಾಗಿತ್ತು.
ಸುಪ್ರೀಂಕೋರ್ಟ್ ಪುನರ್ ಅನುಷ್ಠಾನಗೊಳಿಸಿದ್ದ ಸಿಬಿಐ ನಿರ್ದೇಶಕ ಅಲೋಕ್ ವರ್ಮಾರನ್ನು ಇಷ್ಟೊಂದು ಆತುರದಲ್ಲಿ ಹುದ್ದೆಯಿಂದ ಕೆಳಗಿಳಿಸಲು ಕಾರಣವೇನು @narendramodi ಅವರೆ?
ರಫೇಲ್ ಹಗರಣದ ತನಿಖೆ ಆಗಬಹುದೆಂದು ಹೆದರಿ ಇಷ್ಟೊಂದು ಆತುರದಲ್ಲಿ ನಿರ್ಧಾರ ಕೈಗೊಂಡಿರುವುದು ನೀವು ಹಗರಣದಲ್ಲಿ ಭಾಗಿಯಾಗಿರುವುದಾಗಿ ಸಾರುತ್ತದೆ!#ChowkidarChorHai
— Karnataka Congress (@INCKarnataka) January 10, 2019
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv