ನವದೆಹಲಿ: ಕೇಂದ್ರದಿಂದ ಪಿಎಂ ಇಂಟರ್ನ್‌ಶಿಪ್ ಯೋಜನೆಗೆ ಚಾಲನೆ (PM Internship Scheme) ನೀಡಲಾಗಿದೆ. ಉನ್ನತ ಕಂಪನಿಗಳಲ್ಲಿ ಇಂಟರ್ನ್‌ಶಿಪ್ (Internship) ಪಡೆಯುವ ಯುವಕ – ಯುವತಿಯರಿಗೆ ಮಾಸಿಕ 5 ಸಾವಿರ ರೂ. ಆರ್ಥಿಕ ನೆರವು ನೀಡುವ ಉದ್ದೇಶದೊಂದಿಗೆ ಈ ಯೋಜನೆಗೆ ಗುರುವಾರ ಚಾಲನೆ ನೀಡಲಾಯಿತು.
ಕಂಪನಿಗಳಲ್ಲಿ ಇಂಟರ್ನ್‌ಶಿಪ್ ಮಾಡುವ ಯುವಕ – ಯುವತಿಯರಿಗೆ ಮಾಸಿಕ 5 ಸಾವಿರ ರೂ. ವರ್ಷಕ್ಕೆ 66 ಸಾವಿರ ರೂ.ನಂತೆ ಆರ್ಥಿಕ ನೆರವನ್ನು ಈ ಯೋಜನೆ ನೀಡಲಿದೆ. ಇದರಿಂದ 1.25 ಲಕ್ಷ ಯುವಕ – ಯುವತಿಯರು ಫಲಾನುಭವಿಗಳಾಗಲಿದ್ದಾರೆ.ಇದನ್ನೂ ಓದಿ: ದಸರಾ ವಿಶೇಷ; ಉತ್ತರ ಕರ್ನಾಟಕ ಶೈಲಿಯ ತಾಲಿಪಟ್ಟು ರೆಸಿಪಿ ನಿಮಗಾಗಿ
Advertisement
Advertisement
21 ರಿಂದ 24 ವರ್ಷದ ಯುವಕ-ಯುವತಿಯರಿಗೆ 1 ವರ್ಷಗಳ ಕಾಲ ಇಂಟರ್ನ್‌ಶಿಪ್‌ನ್ನು ಅವಕಾಶ ಕಲ್ಪಿಸಿಕೊಡುತ್ತದೆ. ಇಂಟರ್ನ್‌ಶಿಪ್ ಮಾಡುವವರಿಗೆ ಮಾಸಿಕ 5 ಸಾವಿರ ರೂ. ಭತ್ಯೆ ಮತ್ತು ಒಂದು ಬಾರಿ 6 ಸಾವಿರ ರೂ. ಸಹಾಯ ಭತ್ಯೆಯನ್ನು ಸರ್ಕಾರ ಭರಿಸುತ್ತದೆ.
Advertisement
ಪ್ರಧಾನ ಮಂತ್ರಿ ಇಂಟರ್ನ್‌ಶಿಪ್ ಯೋಜನೆಯು ಮುಂದಿನ ಐದು ವರ್ಷಗಳಲ್ಲಿ 1 ಕೋಟಿ ಯುವಕರಿಗೆ ಇಂಟರ್ನ್‌ಶಿಪ್ ನೀಡುತ್ತದೆ. ಇದು ಭಾರತಕ್ಕೆ ಉದ್ಯೋಗಿಗಳನ್ನು ಪರಿವರ್ತಿಸುವ ನಿಟ್ಟಿನಲ್ಲಿ ವಿನ್ಯಾಸಗೊಳಿಸಲಾದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಜೊತೆಗೆ ಕೆಲಸದ ನೈಜ್ಯ ವಾತಾವರಣದ ಮನೋಭಾವವನ್ನು ಈ ಮೂಲಕ ಸೃಷ್ಟಿಸುವ ಯೋಜನೆಯನ್ನು ಹೊಂದಿದೆ. ಈಗಾಗಲೇ ಈ ಯೋಜನೆಯಡಿಯಲ್ಲಿ 500 ಕಂಪನಿಗಳು ಸರ್ಕಾರದ ಜತೆ ಒಪ್ಪಂದ ಮಾಡಿಕೊಂಡಿವೆ.
Advertisement
ಯೋಜನೆಯನ್ನು ಎರಡು ಹಂತಗಳಲ್ಲಿ ಜಾರಿಗೊಳಿಸಲಾಗುವುದು. ಈ ವರ್ಷ ಪ್ರಾರಂಭವಾಗುವ ಮೊದಲ ಹಂತದಲ್ಲಿ, ಮೂರು ವರ್ಷಗಳ ಅವಧಿಯಲ್ಲಿ 50 ಲಕ್ಷ ಯುವಕರನ್ನು ಇಂಟರ್ನ್‌ಶಿಪ್‌ನಲ್ಲಿ ಇರಿಸಲಾಗುತ್ತದೆ. ಎರಡನೇ ಹಂತವು ಮುಂದಿನ ಎರಡು ವರ್ಷಗಳಲ್ಲಿ ಇನ್ನೂ 50 ಲಕ್ಷ ಯುವಕರಿಗೆ ತರಬೇತಿ ನೀಡಲು ಗಮನಹರಿಸುತ್ತದೆ. ಪ್ರತಿ ಇಂಟರ್ನ್‌ಶಿಪ್ ಆರು ತಿಂಗಳವರೆಗೆ ಇರುತ್ತದೆ. ಈ ಸಮಯದಲ್ಲಿ ಭಾಗವಹಿಸುವವರು ತಾವು ಇಂಟರ್ನ್‌ಶಿಪ್‌ಗೆ ಅವಕಾಶ ಪಡೆದಿರುವ ಕಂಪನಿಗಳಿಂದ ಸಮಗ್ರ ತರಬೇತಿ ಮತ್ತು ಮಾರ್ಗದರ್ಶನವನ್ನು ಪಡೆಯುತ್ತಾರೆ.
#PMInternshipScheme | The Prime Minister’s Internship Scheme 2024 has officially launched today, aiming to empower 1 crore youth through internships in 500 leading companies across India.
Each intern will receive a monthly stipend of ₹5,000, with applications opening on… pic.twitter.com/zjqkcov6Kk
— DD News (@DDNewslive) October 3, 2024
ಅರ್ಹತೆ ಮತ್ತು ಅರ್ಜಿ ಪ್ರಕ್ರಿಯೆ:
ಈ ಯೋಜನೆಯು ಪ್ರಾಥಮಿಕವಾಗಿ ಆರ್ಥಿಕವಾಗಿ ಹಿಂದುಳಿದ ಯುವಜನರನ್ನು ಗುರಿಯಾಗಿರಿಸಿಕೊಂಡಿದೆ. 21 ರಿಂದ 24 ವರ್ಷದವರು ಮುಕ್ತ ಅವಕಾಶವನ್ನು ಹೊಂದಿರುತ್ತಾರೆ. ಕನಿಷ್ಠ 10ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು ಅಥವಾ ITI, ಡಿಪ್ಲೋಮಾ, BA, B.Sc, B.Com, BCA ಯಾವುದೇ ಪದವಿ ಪಡೆದಿರುವವರು ಅರ್ಹರು. ಸರ್ಕಾರಿ ಉದ್ಯೋಗಿಗಳನ್ನು ಹೊಂದಿರುವ ಕುಟುಂಬಗಳು ಅಥವಾ ಆದಾಯ ತೆರಿಗೆ ಮೌಲ್ಯಮಾಪನ ಮಾಡುವವರು ಈ ಯೋಜನೆಗೆ ಅರ್ಹರಲ್ಲ. ಅರ್ಜಿಗಳು ಆನ್‌ಲೈನ್ ಪೋರ್ಟಲ್ ಮೂಲಕ ಆರಂಭಗೊಳ್ಳಲಿದ್ದು, ಅ.12 ರಿಂದ ಪ್ರಕ್ರಿಯೆ ಪ್ರಾರಂಭಗೊಳ್ಳುತ್ತದೆ.ಇದನ್ನೂ ಓದಿ: ಬೆಂಗಳೂರು, ಮೈಸೂರು, ಮಂಗಳೂರಿನಲ್ಲಿ ಅಧಿಕ ಮಾಲಿನ್ಯ – ರಾಜ್ಯಕ್ಕೆ ಹಸಿರು ನ್ಯಾಯಮಂಡಳಿಯಿಂದ ನೋಟಿಸ್
ಅರ್ಜಿ ಪ್ರಕ್ರಿಯೆ:
www.pminternship.mca.gov.in ನಲ್ಲಿ ಯುವಕ-ಯುವತಿಯರು ಅ.12ರಿಂದ 25ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ತಮ್ಮ ಹೆಸರು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಯ ಬಳಿಕ ಅ.26ರಂದು ಅರ್ಹ ಅಭ್ಯರ್ಥಿಗಳನ್ನು ಶಾರ್ಟ್ಲಿಸ್ಟ್ ಮಾಡಲಾಗುವುದು. ಕಂಪನಿಗಳು ಅ.27ರಿಂದ ನ.7ರವರೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿವೆ. ನ.8ರಿಂದ ನ.15ರವರೆಗೆ ಆಯ್ಕೆಯಾದ ಅಭ್ಯರ್ಥಿಗಳು ತಾವು ಆಯ್ಕೆಯಾದ ಕಂಪನಿಯಿಂದ ಆಫರ್ ಲೆಟರ್‌ನ್ನು ಪಡೆದುಕೊಳ್ಳಲಿದ್ದಾರೆ ಎಂದು ಸರ್ಕಾರ ತಿಳಿಸಿದೆ.
ಇದರ ಜೊತೆಗೆ ಇದು ಉದ್ಯೋಗ ಅಲ್ಲ. ಇದು ತರಬೇತಿ ಕಾರ್ಯಾಗಾರ (ಇಂಟರ್ನ್‌ಶಿಪ್) ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಪ್ರಧಾನ ಮಂತ್ರಿ ಇಂಟರ್ನ್‌ಶಿಪ್ ಯೋಜನೆಯ ಪ್ರಮುಖ ಮಾಹಿತಿ
ಉದ್ದೇಶ: ಐದು ವರ್ಷಗಳಲ್ಲಿ 1 ಕೋಟಿ ಯುವಕರಿಗೆ ಇಂಟರ್ನ್‌ಶಿಪ್ ಒದಗಿಸುವುದು, ಭಾರತದ ಅಗ್ರ 500 ಕಂಪನಿಗಳಲ್ಲಿ ಉದ್ಯೋಗಾವಕಾಶಗಳು
ಅರ್ಹತೆ: 21-24 ವಯಸ್ಸಿನ ಅಭ್ಯರ್ಥಿಗಳು, 10ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು ಅಥವಾ ITI, ಡಿಪ್ಲೋಮಾ, BA, B.Sc, B.Com, BCA ಯಾವುದೇ ಪದವಿ ಪಡೆದಿರಬೇಕು. ಸರ್ಕಾರಿ ನೌಕರರು ಅಥವಾ ಆದಾಯ ತೆರಿಗೆ ಮೌಲ್ಯಮಾಪಕರು ಇಲ್ಲದ ಕುಟುಂಬದ ಯುವಕ – ಯುವತಿಯರಿಗೆ ಅವಕಾಶ
ವೇತನ: ಕೇಂದ್ರ ಸರ್ಕಾರದಿಂದ 4,500ರೂ. , ಜೊತೆಗೆ ಕಂಪನಿಗಳಿಂದ 500ರೂ.
ಅಪ್ಲಿಕೇಶನ್ ಪೋರ್ಟಲ್: 12 ಅಕ್ಟೋಬರ್ 2024 ಆರಂಭಗೊಳ್ಳುತ್ತದೆ.ಇದನ್ನೂ ಓದಿ: ನವರಾತ್ರಿ ವಿಶೇಷ-2 | ವಿವಾಹಿತ ಮಹಿಳೆಯರು ದೇವಿಗೆ ಸಿಂಧೂರ ಹಚ್ಚುವ ಸಂಭ್ರಮ!