ಲಕ್ನೋ: ದೇಶದ ಅತಿ ವೇಗದ ಮೆಟ್ರೋ ರೈಲು ಮಾರ್ಗವಾದ ʻನಮೋ ಭಾರತ್ʼ ಕಾರಿಡಾರ್ ಅನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಂದು ಮೀರತ್‌ನಲ್ಲಿ (Meerut) ಲೋಕಾರ್ಪಣೆಗೊಳಿಸಿದರು. 82 ಕಿ.ಮೀ. ಉದ್ದದ ನಮೋ ಭಾರತ್ ಕಾರಿಡಾರ್ ಅನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಇದರ ಭಾಗವಾದ ನಮೋ ಭಾರತ್ ರೀಜನಲ್ ರ್ಯಾಪಿಡ್ ಟ್ರಾನ್ಸಿಟ್ ಸಿಸ್ಟಂ (RRTS) ಅನ್ನು ಉದ್ಘಾಟಿಸಿದರು.
पीएम श्री @narendramodi ने शताब्दी नगर नमो भारत स्टेशन पर मेरठ मेट्रो और नमो भारत ट्रेन को हरी झंडी दिखाई और यहां से मेरठ साउथ स्टेशन तक मेट्रो का सफर किया। pic.twitter.com/MNHHpKvk42
— BJP (@BJP4India) February 22, 2026
ಬಳಿಕ ಶತಾಬ್ದಿ ನಗರ ನಿಲ್ದಾಣದಿಂದ ಮೀರತ್ ದಕ್ಷಿಣ ನಿಲ್ದಾಣದವರೆಗೆ ಮೆಟ್ರೋ ರೈಲಿನಲ್ಲಿ ಸಂಚರಿಸಿದ್ರು. ಇದೇ ಸಂದರ್ಭದಲ್ಲಿ ಮೀರತ್‌ನಲ್ಲಿ ಸುಮಾರು 12,930 ಕೋಟಿ ರೂ. ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೂ ಪ್ರಧಾನಿ ಮೋದಿ ಚಾಲನೆ ನೀಡಿದರು. ಇದನ್ನೂ ಓದಿ: ಈಗಾಗಲೇ ದೇಶದ ಮುಂದೆ ಬೆತ್ತಲಾಗಿರುವ ನೀವು ಬಟ್ಟೆ ಬಿಚ್ಚಿದ್ದು ಯಾಕೆ: ಕಾಂಗ್ರೆಸ್‌ಗೆ ತಿವಿದ ಮೋದಿ

ಗಂಟೆಗೆ 180 ಕಿಮೀ ಸಾಮರ್ಥ್ಯದ ನಮೋ ಭಾರತ್ ಕಾರಿಡಾರ್ (Namo Bharat Corridor) ದೇಶದ ಮೊದಲ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆಯಾಗಿದೆ. ಇದು ಸಾಹೀಬಾಬಾದ್, ಗಾಜಿಯಾಬಾದ್, ಮೋದಿನಗರ ಮತ್ತು ಮೀರರ್‌ನಂತಹ ಪ್ರಮುಖ ನಗರಗಳನ್ನ ದೆಹಲಿಯೊಂದಿಗೆ ವೇಗವಾಗಿ ಸಂಪರ್ಕಿಸುತ್ತದೆ.
ದೆಹಲಿಯ ಸರಾಯ್ ಕಾಲೇ ಖಾನ್ ಮತ್ತು ನ್ಯೂ ಅಶೋಕ್ ನಗರ ನಡುವಿನ 5 ಕಿಮೀ, ಮೀರತ್ ದಕ್ಷಿಣ ಮತ್ತು ಮೋದಿಪುರಂ ನಡುವಿನ 21 ಕಿಮೀ ಮತ್ತು ಶತಾಬ್ದಿ ನಗರ ನಿಲ್ದಾಣದಿಂದ ಮೀರತ್ ದಕ್ಷಿಣದಿಂದ ಮೋದಿಪುರಂವರೆಗಿನ ಮೆಟ್ರೋ ವಿಭಾಗ ಇದಾಗಿದೆ. ಇದರಿಂದ ದೆಹಲಿ ಮತ್ತು ಮೀರತ್ ನಡುವಿನ ಕೇವಲ 1 ಗಂಟೆಯಲ್ಲಿ ಕ್ರಮಿಸಬಹುದಾಗಿದೆ. ಇದನ್ನೂ ಓದಿ: ಕಾಶ್ಮೀರದಲ್ಲಿ ಉಗ್ರರು ಅಡಗಿದ್ದ ಮನೆಯನ್ನೇ ಸ್ಫೋಟಿಸಿದ ಸೇನೆ – ಮೋಸ್ಟ್ ವಾಂಟೆಡ್ ಸೈಫುಲ್ಲ ಸೇರಿ ಇಬ್ಬರು ಮಟಾಷ್

ಮೀರತ್ ಮೆಟ್ರೋ ರೈಲು ಮಾರ್ಗವು ದೇಶದ ಅತ್ಯಂತ ವೇಗದ ಮೆಟ್ರೋ ವ್ಯವಸ್ಥೆಯಾಗಿದೆ. ಇದರ ಕಾರ್ಯಾಚರಣೆಯ ಗರಿಷ್ಠ ವೇಗ ಗಂಟೆಗೆ 120 ಕಿಮೀ ಆಗಿದೆ. ಕೇವಲ 30 ನಿಮಿಷಗಳಲ್ಲಿ ಗಮ್ಯಸ್ಥಾನ ತಲುಪಲಿದೆ. ನಗರಗಳಿಂದ ನಗರಗಳಿಗೆ ಅಥವಾ ನಗರದ ಸುತ್ತುಮುತ್ತಲಿನ ಪ್ರದೇಶಗಳಿಗೆ ಸಂಪರ್ಕ ಜಾಲ ಖಚಿತಪಡಿಸುತ್ತದೆ. ಅಲ್ಲದೇ ರಸ್ತೆಯಲ್ಲಿ ಸಂಚಾರ ದಟ್ಟಣೆಯನ್ನ ಕಡಿಮೆ ಮಾಡಲಿದೆ. ಇದನ್ನೂ ಓದಿ: India AI Summit: ಆಶಾ ಕಾರ್ಯಕರ್ತೆಯರು, ರೈತರಿಂದ ಹಿಡಿದು ಸರ್ಕಾರಿ ಶಾಲಾ ಮಕ್ಕಳವರೆಗೆ – ಭಾರತಕ್ಕೆ ಎಐನಿಂದ ಆಗೋ ಲಾಭಗಳೇನು?

