ಲಕ್ನೋ: ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದ ಆರೋಪಿಯಾಗಿರುವ ಕೇಂದ್ರ ಸಚಿವ ಅಜಯ್ ಮಿಶ್ರಾ ಟೆನಿ ಅವರ ಪುತ್ರನ ರಾಜೀನಾಮೆ ಕೇಳದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ವಾಗ್ದಾಳಿ ನಡೆಸಿದ್ದಾರೆ.
Advertisement
ಕಳೆದ ವರ್ಷ ಅಕ್ಟೋಬರ್ 3 ರಂದು ನಡೆದ ಲಖಿಂಪುರ ಖೇರಿ ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿದಂತೆ ಎಂಟು ಜನರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ಗುರುವಾರ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಅವರಿಗೆ ಜಾಮೀನು ಮಂಜೂರು ಮಾಡಿದೆ. ಇದನ್ನೂ ಓದಿ: ಲಖಿಂಪುರ ಗಲಭೆಯ ಮುಖ್ಯ ಆರೋಪಿ ಆಶಿಶ್ ಮಿಶ್ರಾಗೆ ಜಾಮೀನು
Advertisement
Advertisement
ಈ ಕುರಿತಂತೆ ರಾಂಪುರ ಜಿಲ್ಲೆಯ ಬಿಲಾಸ್‍ಪುರ ನಗರದ ರ್‍ಯಾಲಿ ವೇಳೆ ಮಾತನಾಡಿದ ಅವರು, ಪ್ರಧಾನಿಯೊಬ್ಬರು ರಾಷ್ಟ್ರದ ಬಗ್ಗೆ ನೈತಿಕ ಹೊಣೆಗಾರಿಕೆ ಹೊಂದಿರುತ್ತಾರೆ ಮತ್ತು ಈ ಜವಾಬ್ದಾರಿಯನ್ನು ಪೂರೈಸುವುದು ಅವರ ಧರ್ಮವಾಗಿದೆ. ಈ ಧರ್ಮವು ಪ್ರತಿಯೊಂದು ಧರ್ಮಕ್ಕಿಂತ ಮೇಲಿನದ್ದಾಗಿದೆ. ಯಾವುದೇ ರಾಜಕಾರಣಿ, ಪ್ರಧಾನಿ ಅಥವಾ ಸರ್ಕಾರ ಇದನ್ನು ಮಾಡುವಲ್ಲಿ ವಿಫಲವಾಗಿದೆ ಮತ್ತು ನಿರ್ಲಕ್ಷಿಸಿದೆ ಎಂದು ಕಿಡಿಕಾರಿದ್ದಾರೆ.
Advertisement
ನಿಮ್ಮನ್ನು ಕೆಣಕಿದ ಆ ವ್ಯಕ್ತಿಗೆ ಇಂದು ಜಾಮೀನು ಸಿಕ್ಕಿದೆ ಮತ್ತು ಶೀಘ್ರದಲ್ಲಿಯೇ ಅವನು ಎಲ್ಲರ ಮುಂದೆ ರಾಜಾರೋಷವಾಗಿ ತಿರುಗಾಡುತ್ತಾನೆ. ಹಾಗದರೆ ಸರ್ಕಾರ ಯಾರನ್ನು ಉಳಿಸಿತು? ಇದು ರೈತರನ್ನು ಉಳಿಸಿದಿಯೇ? ರೈತರ ಹತ್ಯೆಯಾದಾಗ ಪೊಲೀಸರು ಮತ್ತು ಆಡಳಿತ ಎಲ್ಲಿಗೆ ಹೋಗಿತ್ತು ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಜನರನ್ನು ತಣ್ಣಗಾಗಿಸುವ ಬದಲು ಉದ್ಯೋಗವಕಾಶ ಹೆಚ್ಚಿಸಿ: ಯೋಗಿ ವಿರುದ್ಧ ಪ್ರಿಯಾಂಕಾ ವಾಗ್ದಾಳಿ
ಲಖಿಂಪುರ ಖೇರಿ ಘಟನೆ ನಡೆದಾಗ ಪೊಲೀಸರು ಎಲ್ಲೂ ಕಾಣಲಿಲ್ಲ. ಆದರೆ ಮೃತರ ಕುಟುಂಬಗಳನ್ನು ಭೇಟಿ ಮಾಡಲು ಯತ್ನಿಸಿದಾಗ ನಮ್ಮನ್ನು ತಡೆಯಲು ಬಂದಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.