ಗಾಂಧೀನಗರ: ಗುಜರಾತ್‍ನ (Gujarat) ಭಾವನಗರ ನಗರದಲ್ಲಿ (Bhavnagar city) ನಡೆದ ಸಾಮೂಹಿಕ ವಿವಾಹ (Mass Wedding) ಸಮಾರಂಭದಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ನವಜೋಡಿಗಳಿಗೆ ಆಶೀರ್ವಾದಿಸಿ, ಸಮಾಜಕ್ಕೆ ಉತ್ತಮ ಕೊಡುಗೆ ನೀಡುವಂತೆ ಹೇಳಿದ್ದಾರೆ.
Live: PM Shri @narendramodi attends mass wedding ceremony – ‘Papa Ni Pari’ Lagnotsav 2022, at Bhavnagar, Gujarat https://t.co/c0PJ3oQqM3
— BJP Gujarat (@BJP4Gujarat) November 6, 2022
Advertisement
ಪ್ರತಿಷ್ಠಾನದ ವತಿಯಿಂದ ಜವಾಹರ್ ಮೈದಾನದಲ್ಲಿ (Jawahar Maidan) ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಮೆಗಾ ಈವೆಂಟ್‍ನಲ್ಲಿ ತಂದೆ ಇಲ್ಲದ 551 ಹುಡುಗಿಯರಿಗೆ ವಿವಾಹ ಮಾಡಿಸಲಾಗಿತ್ತು. ಇದೇ ವೇಳೆ ಸಂಬಂಧಿಕರ ಒತ್ತಡಕ್ಕೆ ಮಣಿದು ಪ್ರತ್ಯೇಕವಾಗಿ ವಿವಾಹವಾಗುವುದಕ್ಕೆ ಹಣ ಪೋಲು ಮಾಡಬೇಡಿ. ದಯವಿಟ್ಟು ನಿಮ್ಮ ಬಳಿ ಹೆಚ್ಚು ಹಣವಿದ್ದರೆ, ಅದನ್ನು ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಉಳಿಸಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮುಂಬೈ, ಥಾಣೆ ನಡುವೆ ಫಿಲ್ಮ್ ಸಿಟಿ ನಿರ್ಮಾಣಕ್ಕೆ ಪ್ಲಾನ್: ಏಕನಾಥ್ ಶಿಂಧೆ
Advertisement
Gujarat | Prime Minister Narendra Modi attends mass wedding ceremony – ‘Papa Ni Pari’ Lagnotsav 2022, in Bhavnagar https://t.co/Bwt1tD7FMw pic.twitter.com/4tjrf6Q9iy
— ANI (@ANI) November 6, 2022
Advertisement
ಗುಜರಾತ್‍ನಲ್ಲಿ ಆಗಾಗ ಸಾಮೂಹಿಕ ವಿವಾಹಗಳು ನಡೆಯುತ್ತಿರುತ್ತದೆ. ಮೊದಲೆಲ್ಲಾ ಅದ್ಧೂರಿ ತನವನ್ನು ಪ್ರದರ್ಶಿಸುವ ಸಲುವಾಗಿ ಸಾಲ ಮಾಡಿ ಜೋರಾಗಿ ಮದುವೆ ಮಾಡುತ್ತಿದ್ದರು. ಆದರೆ ಈಗ ಜನ ಜಾಗೃತರಾಗಿದ್ದಾರೆ. ಸಾಮೂಹಿಕ ವಿವಾಹ ಕಾರ್ಯಕ್ರಮಗಳತ್ತ ಮುಖ ಮಾಡಿದ್ದಾರೆ. ಈ ಉದಾತ್ತ ಉದ್ದೇಶವನ್ನು ಬೆಂಬಲಿಸಲು ಮತ್ತು ಇತರರನ್ನು ಪ್ರೇರೇಪಿಸಲು ನಾನು ಹಾಗೂ ಗುಜರಾತ್‍ನ ಮುಖ್ಯಮಂತ್ರಿ ಇಂತಹ ಸಾಮೂಹಿಕ ವಿವಾಹ ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಿದ್ದೇವೆ. ಮದುವೆ ಸಂದರ್ಭದಲ್ಲಿ ಆಹಾರ ವ್ಯರ್ಥವಾಗದಂತೆ ನೋಡಿಕೊಳ್ಳಬೇಕು. ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದಿದ್ದಾರೆ.
Advertisement
ಡಿಸೆಂಬರ್‍ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು, ಗುಜರಾತ್‍ನಲ್ಲಿ ಪ್ರವಾಸದಲ್ಲಿದ್ದಾರೆ. ಇದಕ್ಕೂ ಮುನ್ನ ವಲ್ಸಾದ್ ಜಿಲ್ಲೆಯ ರ್‍ಯಾಲಿವೊಂದರಲ್ಲಿ ಮಾತನಾಡಿದ್ದರು. ಇದನ್ನೂ ಓದಿ: ಮೇಲ್ವರ್ಗದ ಬಡವರಿಗೆ ಶೇ.10 ಮೀಸಲಾತಿ ಅಳಿವು-ಉಳಿವು- ಇಂದು ಸುಪ್ರೀಂನಲ್ಲಿ ನಿರ್ಧಾರ