ಭೋಪಾಲ್: ಜನಸಂಖ್ಯಾ ನಿಯಂತ್ರಣದ ಕುರಿತು ಮಾತನಾಡುವ ವೇಳೆ ಮಹಿಳೆಯರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ಬಿಹಾರ ಸಿಎಂ ನಿತೀಶ್ ಕುಮಾರ್ (Nitish Kumar) ವಿರುದ್ಧ ಪ್ರಧಾನಿ ನರೇಂದ್ರ ಮೋದಿ (Narendra Modi) ಗುಡುಗಿದ್ದಾರೆ.
ಮಧ್ಯಪ್ರದೇಶ (Madhya Pradesh) ಗುಣ ಎಂಬಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ, ಮಹಿಳೆಯರ ವಿರುದ್ಧ ನೀಡುವ ಹೇಳಿಕೆಗಳು ದೇಶವನ್ನೇ ಅವಮಾನಿಸುವಂತಿದೆ ಎಂದು ಕಿಡಿಕಾರಿದ್ದಾರೆ. ಭಾರತೀಯ ಮೈತ್ರಿಕೂಟದ ದೊಡ್ಡ ನಾಯಕರೊಬ್ಬರು ಮಂಗಳವಾರ ಬಿಹಾರ ವಿಧಾನಸಭೆಯೊಳಗೆ ಮಹಿಳೆಯರಿಗೆ ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆ. ಇಂಡಿಯಾ ಒಕ್ಕೂಟದ ಯಾವೊಬ್ಬ ನಾಯಕನೂ ಇದರ ವಿರುದ್ಧ ಒಂದೇ ಒಂದು ಮಾತನ್ನೂ ಆಡಲಿಲ್ಲ. ಅವರಿಗೆ ನಾಚಿಕೆಯಾಗಬೇಕು. ಮಹಿಳೆಯರ ಬಗ್ಗೆ ಈ ರೀತಿ ಯೋಚಿಸುವರು ನಿಮಗೆ ಏನಾದರೂ ಒಳ್ಳೆಯದನ್ನು ಮಾಡುವುದು ಸಾಧ್ಯವೇ ಎಂದು ಪ್ರಧಾನಿ ಮೋದಿ ಪ್ರಶ್ನಿಸಿದರು.
Advertisement
Advertisement
ತಾಯಂದಿರು ಮತ್ತು ಸಹೋದರಿಯರ ಬಗ್ಗೆ ಕೆಟ್ಟ ಮನೋಭಾವವನ್ನು ಹೊಂದಿರುವವರು ಇಂದು ನಮ್ಮ ದೇಶವನ್ನು ಅವಮಾನಿಸುತ್ತಿದ್ದಾರೆ. ಇದರಿಂದಲೇ ಗೊತ್ತಾಗುತ್ತೇ ನೀವು ಎಷ್ಟು ಕೆಳಮಟ್ಟಕ್ಕೆ ಇಳಿದಿದ್ದೀರಿ ಎಂದು ಅವರು ಹೇಳಿದರು. ಇದನ್ನೂ ಓದಿ: ಮಹಿಳೆಯರ ಕುರಿತು ವಿವಾದಿತ ಹೇಳಿಕೆ – ಕ್ಷಮೆ ಕೇಳಿದ ನಿತೀಶ್ ಕುಮಾರ್
Advertisement
Advertisement
ನಿತೀಶ್ ಕುಮಾರ್ ಹೇಳಿದ್ದೇನು..?: ಜಾತಿ ಸಮೀಕ್ಷೆಯ ಸಂಪೂರ್ಣ ವರದಿಯನ್ನು ಬಿಡುಗಡೆ ಮಾಡಿದ ನಂತರ ಬಿಹಾರ ಸಿಎಂ ಜನಸಂಖ್ಯಾ ನಿಯಂತ್ರಣದ ಬಗ್ಗೆ ಮಾತನಾಡುತ್ತಾ ವೀಡಿಯೋವೊಂದರಲ್ಲಿ, ಈ ಹಿಂದೆ ಶೇ.4.3 ರಷ್ಟಿದ್ದ ಫಲವತ್ತತೆ ದರವು ಕಳೆದ ವರ್ಷ ಶೇ.2.9ಕ್ಕೆ ಇಳಿದಿದೆ ಎಂದು ಹೇಳಿದ್ದರು. ಈ ಹೇಳಿಕೆ ನಂತರ ಬಿಹಾರದ ಬಿಜೆಪಿ ಘಟಕವು ಭಾರೀ ಟೀಕೆ ವ್ಯಕ್ತಪಡಿಸಿತ್ತು. ಮಹಿಳಾ ಶಾಸಕರೂ ಅಸಮಾಧಾನ ಹೊರಹಾಕಿದ್ದಾರೆ. ಆದರೆ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್, ಮುಖ್ಯಮಂತ್ರಿಗಳ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು.